Narayana Murthy: ಮೋದಿ 100 ಗಂಟೆ ಕೆಲ್ಸ ಮಾಡ್ತಾರೆ, ಯುವಕರಿಗೆ 70 ಗಂಟೆ ಕೆಲ್ಸ ಮಾಡೋಕೆ ಏನು? ನಾರಾಯಣ ಮೂರ್ತಿ ಮತ್ತೆ ಹೇಳಿಕೆ
narayana murthy: ಗುಲಾಮರಂತೆ ಕೆಲಸ ಮಾಡುವುದು ಮತ್ತು ಗುಲಾಮರಂತೆ ಬದುಕುವುದು ಹೇಗೆ ಅಂತ ಶ್ರೀಮಂತ ದಂಪತಿಗಳು ಬಡವರ ಮಕ್ಕಳಿಗೆ ಪಾಠ ಮಾಡ್ತಿದ್ದಾರೆ ... ಇದೊಂದು ಸ್ಯಾಂಪಲ್ ಲೈನ್ ಅಷ್ಟೇ! ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡ್ಬೇಕು ಅಂತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದು ಹಳೆಯ ವಿಷಯ. ಭಾರೀ ವಿರೋಧದ ನಂತರವೂ ಅವರು ನಾನು ಸತ್ತರೂ ಅದನ್ನೇ ಹೇಳೋದು ಅಂತ ಹೇಳಿದ್ದಾರೆ. ನಾರಾಯಣ ಮೂರ್ತಿ ಹೇಳಿಕೆಗೆ ಯುವ ಸಮೂಹ ಕೆಂಡಕಾರಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಸ್ತ್ ಟ್ರೋಲ್ ಮಾಡಿದ್ದಾರೆ. ಈ ಅಜ್ಜಗೆ ಮಾಡೋಕೆ ಬೇರೆ ಕೆಲ್ಸ ಇಲ್ವಾ ಅಂತನೂ ಕೇಳಿದ್ದಾರೆ.
ಕೆಲಸ್ಸ ಜಾಸ್ತಿ ಮಾಡಬೇಕು.. ನಾನು ಸತ್ತರೂ ಇದೇ ಮಾತನ್ನ ಹೇಳ್ತೀನಿ ಅಂತ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಇನ್ನೊಮ್ಮೆ ಹೇಳಿದ್ದಾರೆ. ದೇಶದಲ್ಲಿ ವಿವಿಧ ಕಂಪನಿಗಳು ಅವರ ಉದ್ಯೋಗಿಗಳಿಗೆ ವಾರದಲ್ಲಿ 5 ದಿನ ಕೆಲಸ ಮಾಡುವ ಸಂತೋಷದ ಸುದ್ದಿಯನ್ನು ಕೊಡ್ತಿದೆ. ಬಹುಶಃ ನಾರಾಯಣ ಮೂರ್ತಿ ಅವರಿಗೆ ಇದನ್ನು ನೋಡಿ ಕಷ್ಟವಾಗಿರಬೇಕು. ಅದಕ್ಕೆ ಮತ್ತೆ ಈಗ 70 ಗಂಟೆ ಕೆಲಸ ಅನ್ನೋದನ್ನ ರಿಪೀಟ್ ಮಾಡಿದ್ದಾರೆ ಅಂತ ಜನ ಕೇಳ್ತಿದ್ದಾರೆ.

ಎಕ್ಸ್‌ನಲ್ಲಿ ಜನ ಹಾಗೂ ಎಫ್‌ಬಿನಲ್ಲಿ ಇದು ಹಾಟ್‌ಟಾಪಿಕ್ ಆಗಿದೆ. ಎಕ್ಸ್ ಮೀಡಿಯಾದಲ್ಲಿ ಪ್ರಂಜಿತ್ ಎನ್ನುವವರು, ಭಾರತದಲ್ಲಿ ಐದು ದಿನ ಕೆಲಸ ಮಾಡುವ ಕಾನ್ಸೆಪ್ಟ್‌ಗೆ ನಾರಾಯಣ ಮೂರ್ತಿ ಅವರಿಗೆ ಕಷ್ಟವಾಗಿದೆಯಂತೆ. ಆದರೆ, ದಶಕಗಳಿಂದ ಇನ್ಫೋಸಿಸ್ ಫ್ರೆಷರ್ ಸಂಬಳವನ್ನು 4L/ ವಾರ್ಷಿಕಕ್ಕಿಂತ ಹೆಚ್ಚಿಗೆ ಮಾಡಿಲ್ಲ. ಇದನ್ನು ಮಾತ್ರ ಅವರು ಯಾಕೆ ಬದಲಾಯಿಸಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಕೆಲಸದ ಸಮಯದ ಬಗ್ಗೆ ಹೇಳಿದ್ದೇನು
ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇದೀಗ ಮತ್ತೊಮ್ಮೆ ಕೆಲಸದ ಸಮಯದ ಬಗ್ಗೆ ಮಾತನಾಡಿದ್ದಾರೆ. ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಸಮ್ಮಿಟ್‌ನಲ್ಲಿ ಅವರು, ನನಗೆ ಭಾರತದಲ್ಲಿ ಐಟಿ ಉದ್ಯೋಗದಲ್ಲಿ ವಾರದಲ್ಲಿ 6 ದಿನ ಬದಲಿಗೆ ಕೇವಲ 5 ದಿನ ಕೆಲಸ ಮಾಡಬೇಕು ಎನ್ನುವ ಕಾನ್ಸೆಪ್ಟ್ ಬಂದಾಗ ಶಾಕ್ ಆಗಿತ್ತು. ನಾನು ಈ ವಿಷಯ ಕೇಳಿ ಕಂಗಾಲಾಗಿದ್ದೆ. ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸದ ಅವಧಿಯನ್ನು ಆರು ದಿನಗಳ ಬದಲಿಗೆ 5 ದಿನ ಮಾಡಲಾಗಿದೆ.
ನೀವು ದಯವಿಟ್ಟು ಕ್ಷಮಿಸಿ ನಾನು ಸತ್ತರೂ ಕೆಲಸದ ಅವಧಿಯ ಬಗ್ಗೆ ನನಗೆ ಇರುವ ಅಭಿಪ್ರಾಯವನ್ನು ನಾನು ಬದಲಾಯಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಮುಂದುವರಿದು ಪ್ರಧಾನಿ ನರೇಂದ್ರ ಮೋದಿ ಅವರು ವಾರಕ್ಕೆ 100 ದಿನ ಕೆಲ್ಸ ಮಾಡ್ತಾರೆ. ಅವರನ್ನು ಮೆಚ್ಚಿಕೊಳ್ಳುವ ಯುವಕರಿಗೆ 70 ಗಂಟೆ ಕೆಲಸ ಮಾಡಲು ಏನು. ದೇಶದ ಯುವಕರು ಸಹ ವಾರಕ್ಕೆ ಕನಿಷ್ಠ 70 ಗಂಟೆಯಾದರೂ ಕೆಲಸ ಮಾಡಬೇಕು. ನಾನು ಕೆಲಸಕ್ಕೆ ಸೇರಿದಾಗ ದಿನಕ್ಕೆ 14 ಗಂಟೆ ಕೆಲಸ ಮಾಡ್ತಿದ್ದೆ. ಬೆಳಿಗ್ಗೆ ಆಫೀಸ್‌ಗೆ ಬಂದರೆ, ರಾತ್ರಿನೇ ಮನೆಗೆ ಹೋಗ್ತಿದ್ದೆ. ನಾನು ಪೂರ್ತಿ ಸಮರ್ಪಣಾ ಮನೋಭಾವನೆಯಿಂದ ಕೆಲಸ ಮಾಡ್ತಿದ್ದೆ.
ವಿಶ್ವದಲ್ಲಿ ಕಠಿಣ ಪರಿಶ್ರಮದ ರಾಷ್ಟ್ರಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿವೆ. ವಿದ್ಯಾವಂತ ಹಾಗೂ ಪ್ರತಿಭೆ ಇರುವವರು ದಿನಕ್ಕೆ ಕನಿಷ್ಠ 10 ಗಂಟೆಯಾದರೂ ಕೆಲಸ ಮಾಡಬೇಕು. ಆಗ ಮಾತ್ರ ನಮ್ಮ ಭಾರತವೂ ಉದ್ಧಾರ (ಅಭಿವೃದ್ಧಿ) ಆಗುತ್ತೆ ಎನ್ನುವುದು ನಾರಾಯಣ ಮೂರ್ತಿ ಅವರ ಹೊಸ ಮಾತು.
ಕ್ಷಮೆ ಕೇಳಿದ್ದರು: ನಾರಾಯಣ ಮೂರ್ತಿ ಅವರು ಕೆಲಸದ ಅವಧಿಯ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆಯೂ ದೇಶದ ಯುವಕರು ಕನಿಷ್ಠ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಅವರ ಹೇಳಿಕೆಗೆ ದೇಶದ ಯುವ ಸಮೂಹ ಹಾಗೂ ಸಾಮಾನ್ಯ ಜನರಿಂದ ವ್ಯಾಪಕ ವಿರೋಧ ಬಂದ ಮೇಲೆ ಆ ಹೇಳಿಕೆಯನ್ನು ಹಿಂಪಡೆದಿರುವುದಾಗಿಯೂ, ಜನರ ಬಳಿ ಕ್ಷಮೆ ಕೇಳುವುದಾಗಿಯೂ ಹೇಳಿದ್ದರು. ಆದರೆ, ಇದೀಗ ನಾನು ಸತ್ತೊದ್ರೂ ಇದೇ ಹೇಳೋದು ಎಂಬರ್ಥದಲ್ಲಿ ಮಾತನಾಡಿದ್ದಾರೆ.












Click it and Unblock the Notifications