ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ಮುಖ್ಯಾಂಶಗಳು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13 : ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಉಪಚುನಾವಣೆಯ ಮತಎಣಿಕೆಗೆ ಇನ್ನೇನು ಮುಗಿಯುವ ಹಂತದಲ್ಲಿದೆ. 8 ಗಂಟೆಗೆ ಆರಂಭವಾಗಿದ್ದ ಮತಎಣಿಕೆ 12 ಗಂಟೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ನೀಡಿದೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ್ ಪ್ರಸಾದ್ ಅವರು ಬಿಜೆಪಿಯ ನಿರಂಜನ್ ಅವರ ವಿರುದ್ಧ 12,077 ಮತಗಳ ಅಂತರದಿಂದ ಜಯ ಸಾಧಿಸಿ ವಿಧಾನಸೌಧ ಪ್ರವೇಶಿಸಲು ಸಿದ್ಧರಾಗಿ ನಿಂತಿದ್ದಾರೆ. 16ನೇ ಸುತ್ತಿನ ಮತಎಣಿಕೆಯ ನಂತರ ನಂಜನಗೂಡಿನಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಊಟಿ ರಸ್ತೆಯಲ್ಲಿರುವ ನಂಜನಗೂಡಿನ ದೇವೀರಮ್ಮನಹಳ್ಳಿಯ ಜೆಎಸ್ಎಸ್ ಪ್ರಥಮದರ್ಜೆ ಕಾಲೇಜಿನಲ್ಲಿ ಮತ್ತು ಗುಂಡ್ಲುಪೇಟೆಯ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಎಣಿಕೆ ನಡೆದಿದೆ. ಮತಎಣಿಕೆಯ ಕ್ಷಣಕ್ಷಣದ ಮಾಹಿತಿ ಒನ್ಇಂಡಿಯಾ ಕನ್ನಡ ನೀಡಲಿದೆ. [ಫಲಿತಾಂಶ : ನೆಗೆದುಬಿದ್ದ ಗುಪ್ತಚರ ಇಲಾಖೆಯ ವರದಿ]

Nanjangud and Gundlupet by election results LIVE

* 12.30 : ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ (86,212) ಅವರು ಬಿಜೆಪಿಯ ಅಭ್ಯರ್ಥಿ ವಿ ಶ್ರೀನಿವಾಸ್ ಪ್ರಸಾದ್ (64,878) ಅವರನ್ನು ಭಾರೀ (19,611) ಅಂತರದಿಂದ ಸೋಲಿಸಿ ಜಯಶಾಲಿಯಾಗಿದ್ದಾರೆ.

* 12.00 : ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ 72,568 ಮತಗಳನ್ನು ಗಳಿಸಿದ್ದು, ಬಿಜೆಪಿಯ ಶ್ರೀನಿವಾಸ ಪ್ರಸಾದ್ 54399 ಮತ ಪಡೆದಿದ್ದಾರೆ. ಇಬ್ಬರ ನಡುವಿನ ಮತಗಳ ಅಂತಹ 18,169.

* ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಅವರು 12,077 ಮತಗಳ ಅಂತರದಿಂದ ನಿರಂಜನ್ ಅವರನ್ನು ಸೋಲಿಸಿದ್ದಾರೆ.

* 11.25 : ಗೆಲುವಿನ ಸನಿಹದಲ್ಲಿ ಕಾಂಗ್ರೆಸ್ಸಿನ ಗೀತಾ ಮಹದೇವ್ ಪ್ರಸಾದ್ ಮತ್ತು ಕಳಲೆ ಕೇಶವಮೂರ್ತಿ. ನಿರಂಜನ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರಿಗೆ ಭಾರೀ ಮುಖಭಂಗ.

* 10.50 : ಹನ್ನೊಂದನೇ ಸುತ್ತಿನ ಮತಎಣಿಕೆಯ ನಂತರ ಗೀತಾ ಮಹದೇವ್ ಪ್ರಸಾದ್ ಅವರು ನಿರಂಜನ್ ಅವರ ವಿರುದ್ಧ 6 ಸಾವಿರಕ್ಕೂ ಹೆಚ್ಚು ಅಂತರ ಸಾಧಿಸಿದ್ದಾರೆ.

* 10.15 : ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ್ ಪ್ರಸಾದ್ - 49,766, ನಿರಂಜನ್ - 45,116. ಮತಗಳ ಅಂತರ - 4,650

Nanjangud and Gundlupet by election results LIVE

* 10.05 : 15 ಸಾವಿರ ಮತಗಳ ಅಂತರದಿಂದ ಕಳಲೆ ಕೇಶವಮೂರ್ತಿ ಅವರು ಮುನ್ನಡೆ ಸಾಧಿಸಿದ್ದು, ಶ್ರೀನಿವಾಸ್ ಪ್ರಸಾದ್ ಸೋಲು ಹೆಚ್ಚೂಕಡಿಮೆ ಖಚಿತವಾದಂತಿದೆ.

* 9.45 : ನಂಜನಗೂಡಿನಲ್ಲಿ 23,595 ಮತ ಪಡೆದಿರುವ ಕಳಲೆ ಕೇಶವಮೂರ್ತಿ ಅವರಿಗಿಂತ 12,603 ಮತ ಗಳಿಸಿರುವ ಶ್ರೀನಿವಾಸ್ ಪ್ರಸಾದ್ 10 ಸಾವಿರಕ್ಕೂ ಹೆಚ್ಚು ಮತಗಳಿಂದ ಹಿಂದಿದ್ದಾರೆ.

* 9.35 : ಗುಂಡ್ಲುಪೇಟೆಯಲ್ಲಿ ಗೀತಾ ಮತ್ತು ನಿರಂಜನ್ ನಡುವೆ ಜಿದ್ದಾಜಿದ್ದಿ ಫೈಟ್. ಗೀತಾಗೆ 28,285, ನಿರಂಜನ್‌ಗೆ 25,556 ಮತಗಳು.

Nanjangud and Gundlupet by election results LIVE

* 9.20 : ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ 18477 ಮತಗಳಿಸಿದ್ದು, ವಿ ಶ್ರೀನಿವಾಸ್ ಪ್ರಸಾದ್ 9244 ಮತಗಳಿಸಿ ಹಿಂದುಳಿದಿದ್ದಾರೆ.

* 9.10 : ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ನ ಗೀತಾ ಮಹದೇವ್ ಪ್ರಸಾದ್ - 17948, ಬಿಜೆಪಿಯ ನಿರಂಜನ್ ಕುಮಾರ್ - 14956 ಮತಗಳು.

Nanjangud and Gundlupet by election results LIVE

* 9.05 : ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ 11524 ಮತಗಳು, ವಿ ಶ್ರೀನಿವಾಸ್ ಪ್ರಸಾದ್ ಅವರಿಗೆ 6812 ಮತಗಳು ಲಭಿಸಿವೆ.

* ಗುಂಡ್ಲುಪೇಟೆಯಲ್ಲಿ ಎರಡನೇ ಸುತ್ತಿನ ಮತಎಣಿಕೆಯ ನಂತರ : ಗೀತಾ ಮಹದೇವ್ ಪ್ರಸಾದ್ - 12,338 ಮತಗಳು, ನಿರಂಜನ್ - 9939 ಮತಗಳು.

* ಆರಂಭಿಕ ಹಂತದಲ್ಲಿ ಹಿನ್ನಡೆ ಸಾಧಿಸಿದ್ದರೂ ಮುಂದಿನ ಹಂತಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ವಿ ಶ್ರೀನಿವಾಸ್ ಪ್ರಸಾದ್.

Nanjangud and Gundlupet by election results LIVE

* ಗುಂಡ್ಲುಪೇಟೆಯಲ್ಲಿ ಮೊದಲ ಸುತ್ತಿನ ಮತಎಣಿಕೆಯ ನಂತರ 6542 ಮತಗಳನ್ನು ಗಳಿಸಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ನಿರಂಜನ್ ಕುಮಾರ್ ಅವರಿಗೆ 4771 ಮತಗಳು ಲಭಿಸಿದ್ದು, ಹಿನ್ನಡೆ ಪಡೆದಿದ್ದಾರೆ.

* 8.40 :ಸ್ವಾತಂತ್ರ್ಯ ಸಿಕ್ಕ ನಂತರ ನಂಜನಗೂಡಿನಲ್ಲಿ ಬಿಜೆಪಿ ಯಾವ ವಿಧಾನಸಭೆ ಚುನಾವಣೆಯನ್ನೂ ಗೆದ್ದಿಲ್ಲ.

* 8.35 : ಗುಂಡ್ಲುಪೇಟೆಯಲ್ಲಿ ಅಂಚೆಮತಗಳ ಎಣಿಕೆ ಇನ್ನೂ ಮುಗಿಯದ ಕಾರಣ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಮತಎಣಿಕೆ ಇನ್ನೂ ಆರಂಭವಾಗಿಲ್ಲ.

* 8.30 : ಕಳಲೆ ಕೇಶವಮೂರ್ತಿಗೆ 5,875 ಮತಗಳು, ವಿ ಶ್ರೀನಿವಾಸ್ ಪ್ರಸಾದ್ ಅವರಿಗೆ 3,574 ಮತಗಳು.

* ಗುಂಡ್ಲುಪೇಟೆಯಲ್ಲಿ ಮೊದಲ ಸುತ್ತಿನ ಮತಎಣಿಕೆಯಲ್ಲಿ ಕಾಂಗ್ರೆಸ್ ನ ಗೀತಾ ಮಹದೇವ್ ಪ್ರಸಾದ್ ಅವರಿಗೆ ಮುನ್ನಡೆ.

* ಗುಂಡ್ಲುಪೇಟೆಯಲ್ಲಿ 60 ಅಂಚೆ ಮತಗಳ ಪೈಕಿ 11 ಮತಗಳು ತಿರಸ್ಕೃತ.

* ಮೊದಲ ಹಂತದ ಮತಎಣಿಕೆಯಲ್ಲಿ, ನಂಜನಗೂಡಿನಲ್ಲಿ ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿ ಅವರು 500 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

*ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ 14 ಟೇಬಲ್ ಮೇಲೆ, 16 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ.

* ದಕ್ಷಿಣ ಕಾಶಿ ಎಂದು ಖ್ಯಾತವಾಗಿರುವ ನಂಜನಗೂಡಿನ ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ, ಗೆಲುವು ನನ್ನದೆ ಎಂದು ಬೀಗುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ.

* ಮೈಸೂರು ಡಿಸಿ ರಂದೀಪ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ತೆರೆದ ಅಧಿಕಾರಿಗಳು. ಮತಎಣಿಕೆ ಕಾರ್ಯ ಆರಂಭ. ಮೊದಲಿಗೆ ಅಂಚೆಮತಗಳ ಎಣಿಕೆ ನಡೆಯಲಿದೆ.

ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ವಿ ಶ್ರೀನಿವಾಸ್ ಪ್ರಸಾದ್ ಮತ್ತು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ನ ಗೀತಾ ಮಹದೇವ್ ಪ್ರಸಾದ್ ಅವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ಈ ಚುನಾವಣೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವೂ ಆಗಿದೆ. [ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]

Gundlupet

ಗುಂಡ್ಲುಪೇಟೆಯಲ್ಲಿ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ 14 ಟೇಬಲ್ ಮೇಲೆ, 16 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
By election results of Nanjangud (Mysuru) and Gundlupet (Chamarajanagar) will be announced on 13th April, Thursday. This by poll has become prestigious fight for Yeddyurappa and Siddaramaiah as this would be an indicator for upcoming assembly election in Karnataka in 2018.
Please Wait while comments are loading...