• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂವರಿಗೆ ನಾಡೋಜ, ಶಂಕರ ಭಟ್ಟರಿಗೆ ಪಂಪ ಪ್ರಶಸ್ತಿ

By Mahesh
|

ಬೆಂಗಳೂರು, ಡಿ.17: ನಾಡೋಜ ಪ್ರಶಸ್ತಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ಹೆಗಡೆ, ಹೆಸರಾಂತ ಇಸ್ರೋ ವಿಜ್ಞಾನಿ ಎಸ್.ಕೆ.ಶಿವಕುಮಾರ್, ಸಾಹಿತಿ ಕೋ.ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಡಿ.ಎನ್ ಶಂಕರಭಟ್ಟರನ್ನು ಪಂಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಇ.ಚಿ.ಬೋರಲಿಂಗಯ್ಯ ಈ ಸುದ್ದಿಯನ್ನು ಮಂಗಳವಾರ ಪ್ರಕಟಿಸಿದ್ದಾರೆ. ಡಿ.21ಕ್ಕೆ ರಾಜ್ಯಪಾಲರು ನಾಡೋಜ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಸಂತೋಷ್ ಹೆಗಡೆ: ದಕ್ಷಿಣ ಕನ್ನಡ ಜಿಲ್ಲೆಯ ನಿಟ್ಟೆ ಗ್ರಾಮದಲ್ಲಿ 1940 ಜೂನ್ 16 ರಂದು ಜನರಿಸಿದರು. ಮಂಗಳೂರು, ಚನ್ನೈ ಮತ್ತು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದರು.

1984 ರಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕ. 1998 ರಲ್ಲಿ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಆ ನಂತರ 2006ರಲ್ಲಿ ಕರ್ನಾಟಕ ಲೋಕಾಯುಕ್ತರಾಗಿ ನೇಮಕಗೊಂಡು 5 ವರ್ಷಗಳ ಅಧಿಕಾರವನ್ನು ಪೂರ್ಣ ಮಾಡಿದ್ದಾರೆ.

* ಕೋ.ಚೆನ್ನಬಸಪ್ಪ: 1922 ಫೆಬ್ರವರಿ 21 ರಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಜನಿಸಿದರು. ಆಲೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ನಂತರ ಬಳ್ಳಾರಿಯಲ್ಲಿ ಪ್ರೌಢಶಾಲೆ, ಅನಂತಪುರದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದರು.

1946 ರಲ್ಲಿ ಮುಂಬೈನ ಹೈಕೋರ್ಟ್‌ನ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು.1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜೆಡ್ಜ್ ಆಗಿ ನೇಮಕಗೊಂಡರು. ಮೊದಲಿನಿಂದಲೂ ಸಾಹಿತ್ಯದ ಬಗ್ಗೆ ಅಪಾರ ಒಲವುಹೊಂದಿದ್ದ ಅವರು 5 ಕವನ ಸಂಕಲನ, 9 ಕಾದಂಬರಿಗಳನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ವಿಶ್ವಮಾನವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಸ್.ಕೆ.ಶಿವಕುಮಾರ್: ಅಪ್ಪಟ್ಟ ಕನ್ನಡಿಗರು, ಮೈಸೂರಲ್ಲಿ ಜನನ, ಬೆಂಗಳೂರಿನಲ್ಲಿ ಬಿಟೆಕ್ ಪದವಿ. ಇಸ್ರೋ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಯಾನ-1 ಯಾತ್ರೆಯ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ.

ಡಿ.ಎನ್ ಶಂಕರಭಟ್ಟ : ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ 1935 ಜುಲೈ 15 ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ, ಪಿ.ಎಚ್.ಡಿ ಪಡೆದಿದ್ದಾರೆ. 'ಕನ್ನಡ ಭಾಷೆ, ಮತ್ತು ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' ಶಂಕರ ಭಟ್ಟರ ತೀವ್ರ ಆಸಕ್ತಿಗಳಲ್ಲಿ ಒಂದು. 1978 ಪ್ರಕಟವಾದ, 'ಕನ್ನಡ ಭಾಷಾ ಚರಿತ್ರೆ' ಮೊದಲ ಪ್ರಯತ್ನ. ಕನ್ನಡಪದ ರಚನೆ. ಶೈಲಿ ನಿಖರವಾಗಿದೆ. 'ಕನ್ನಡ ಭಾಷೆಯ ಕಲ್ಪಿತ ಚರಿತ್ರೆ', 'ಕನ್ನಡ ವ್ಯಾಕರಣ ಪರಂಪರೆ', 'ಕನ್ನಡ ಬರಹವನ್ನು ಸರಿಪಡಿಸೋಣ, ಇವರ ಪ್ರಮುಖ ಕೃತಿಗಳು.

English summary
Hampi Kannada University announces Nadoja award to former Lokayutka Santosh Hegde, ISRO Scientist S.K Shivakumar, Writer K.Channabasappa. Dr. D.N Shankara Bhatta chosen for Pampa Prashasti said Kannada and Culture Department today (Dec.17)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X