ಮೈಸೂರು ದಸರಾ ಉತ್ಸವಕ್ಕೆ ಶ್ರೀ ಗವಿಸಿದ್ಧೇಶ್ವರ ಶ್ರೀ ವಿದ್ಯುಕ್ತ ಚಾಲನೆ: ನಾಡನ್ನು ಜಾತಿಯಿಂದಲ್ಲ, ಪ್ರೀತಿಯಿಂದ ಕಟ್ಟಲು ಕರೆ

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವಕ್ಕೆ ಇಂದು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿದ್ಯುಕ್ತ ಚಾಲನೆ ದೊರೆಯಿತು. ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರ ಸನ್ನಿಧಾನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ದಸರಾ ಮಹೋತ್ಸವಕ್ಕೆ ಕೊಪ್ಪಳದ ಶ್ರೀ ಗವಿಮಠದ ಶ್ರಿ ಗವಿಸಿದ್ಧೇಶ್ವರ ಸ್ವಾಮೀಜಿಗಳು ಉತ್ಸವ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಗವಿಸಿದ್ಧೇಶ್ವರ ಶ್ರೀಗಳು, ಪ್ರಸ್ತು ದಸರಾ ಮಹೋತ್ಸವ ತುಂಗಭದ್ರಾ ತೀರದಿಂದ ಕಾವೇರಿ ತೀರದವರೆಗೆ ಹರಿದು ಬಂದಿದೆ ಎಂದು ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ಹಬ್ಬದ ಇತಿಹಾಸ ಸ್ಮರಿಸಿದರು. ಮಹಾನವಮಿ ದಿಬ್ಬದಿಂದ ಮೈಸೂರಿಗೆ ಹಬ್ಬವಾಗಿ ಆಗಮಿಸಿದೆ. ಶತಮಾನಗಳ ಹಿಂದೆ ದಸರಾ ದೊರೆಗಳ ಹಬ್ಬವಾಗಿತ್ತೋ, ಇಂದು ಈ ಧರೆಯ ಹಬ್ಬವಾಗಿ ಜಗತ್ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.

Mysuru Dasara 2026

ಕನ್ನಡದ ದೀಪ ಆರದಿರಲಿ

ಇಂದಿನ ಮೈಸೂರು ದಸರಾವನ್ನು ಈ ಹಿಂದೆ ದೇಶದ ಅನೇಕ ಮಹನೀಯರು ಉದ್ಘಾಟಿಸಿದ್ದಾರೆ. ನಾನು ಬಂದಿದ್ದು, ಚಾಮುಂಡಿ ಸನ್ನಿಧಿಯಲ್ಲಿ ಪ್ರಾರ್ಥಿಸಲು ಹಾಗೂ ಈ ಹಿಂದಿನ ಎಲ್ಲ ಹಿರಿಯರು ತಾಯಿ ಸನ್ನಿಧಿಯಲ್ಲಿ ಹಚ್ಚಿದ ಕನ್ನಡದ ದೀಪ ಆರದಿರಲಿ ಎಂದು ಪ್ರಾರ್ಥಿಸಲು. ದಸರಾ ಉತ್ಸವ ಉದ್ಘಾಟನೆ ಮಾಡುವಷ್ಟು ನಾನು ದೊಡ್ಡವನಲ್ಲ ಎನ್ನುವ ಮೂಲಕ ತಮ್ಮದೇ ರೀತಿಯಲ್ಲಿ ಸರಳತೆ ಮೆರೆದರು. ಈ ಮೂಲಕ ಶ್ರೀಗಳು ಸರಳತ್ವದ ಸಂದೇಶ ಸಾರಿದರು.

ಈ ನಾಡಿನ ಗತವೈಭವದ ಸಂಕೇತವಾಗಿ ದಸರಾ ಉತ್ಸವ ಮುಂದುವರಿದುಕೊಂಡು ಬಂದಿದೆ. ನಾಡನ್ನು ಜಾತಿಯಿಂದ ಕಟ್ಟದೇ, ಪ್ರೀತಿಯಿಂದ ಕಟ್ಟಬೇಕು ಎಂದು ಕರೆ ನೀಡಿದರು. ಈ ಭೂಮಿ, ನೀರು, ಗಾಳಿ, ಪರಿಸರ ಸಂರಕ್ಷಣೆ ನಮ್ಮೆಲ್ಲ ಜವಾಬ್ದಾರಿಯಾಗಿದೆ. ನೀರು, ನಿಸರ್ಗ, ಅನ್ನದ ತಟ್ಟೆಗಳಂತಿರುವ ಜಲಾಶಗಳನ್ನು ರಕ್ಷಿಸುವು ನಾಗರಿಕ ಕರ್ತವ್ಯವೆಂದು ನೈಸರ್ಗಿಕ ಸಂಪನ್ಮೂಲಗಳ ಮಹತ್ವ ಸಾರಿದರು.

ನಾನು ಇಲ್ಲಿ ದೀಪವಷ್ಟೇ ಹಚ್ಚಿದ್ದೇನೆ. ಬೆಳಕು ಏನಿದ್ದರೂ ಅದು ತಾಯಿ ಚಾಮುಂಡೇಶ್ವರಿಯದ್ದು. ನಾನು ಪ್ರಾರ್ಥಿಸಲು ಬಂದಿದ್ದೇನೆ ಅಷ್ಟ. ಈ ತಾಯಿ ಶಕ್ತಿ ಟವರ್ ಎಂದು ಬಣ್ಣಿಸಿದರು.

ಮಕ್ಕಳಿಗೆ ಸಾಹಿತ್ಯ ಕಲಿಸಿ: ಪೋಷಕರಿಗೆ ಶ್ರೀಗಳು ಕಿವಿ ಮಾತು

ಮಕ್ಕಳಿಗೆ ಸಾಮಾಜಿಕ ಜಾಲತಾಣದಲ್ಲಿ ಮುಳಗಿದ್ದು, ಪೋಷಕರು ಅವರಿಗೆ ಸಾಹಿತ್ಯ ಕಲಿಸಬೇಕು. ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸುವುದನ್ನು ಕಲಿಸಬೇಕು. ಎಲ್ಲರೂ ಗಿಡ-ಮರ ನೆಡಬೇಕು, ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ತಂತ್ರಜ್ಞಾನ ಎಷ್ಟು ಬೆಳೆದರೂ ರೈತರ ಬೆವರ ಹನಿ ಭೂಮಿಗೆ ಸುರಿದರೆ ಅನ್ನ ಸಿಗುತ್ತದೆ ಎಂದು ಹೇಳಿದರು.

ವಿಧಿವಿಧಾನಗಳ ಪೂಜೆಯೊಂದಿಗೆ ದಸರಾ ಆರಂಭ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಮುಂಡಿ ಬೆಟ್ಟದಲ್ಲಿ ಅದ್ದೂರಿ ಚಾಲನೆ ದೊರೆಯಿತು. ನಂದಿಧ್ವಜಕ್ಕೆ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ, ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಕೊಪ್ಪಳದ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವ ಉದ್ಘಾಟಿಸಿದರು. ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, 'ದಸರಾ ಎಂದರೆ ಕೇವಲ ಹಬ್ಬವಲ್ಲ. ಇದು ನಮ್ಮ ನಾಡಿನ ಸಾಂಸ್ಕೃತಿಕ ವೈಭವ. ಸೌಹಾರ್ದತೆ ಮತ್ತು ಸಂಭ್ರಮದ ಪ್ರತೀಕ. ಜಾತಿ, ಧರ್ಮದ ಭೇದಭಾವಗಳನ್ನು ಮೀರಿ ನಾವೆಲ್ಲರೂ ಒಂದಾಗಿ ಆಚರಿಸುವ ಹೆಮ್ಮೆಯ ನಾಡಹಬ್ಬವಿದು ಎಂದು ತಿಳಿಸಿದರು.

ಸಮಾಜಸೇವೆ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಕೊಪ್ಪಳದ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವವನ್ನು ಉದ್ಘಾಟಿಸಿರುವುದು ಅತ್ಯಂತ ಸಂತೋಷದ ಮತ್ತು ತೃಪ್ತಿಯ ವಿಷಯವಾಗಿದೆ ಎಂದರು.

ಹೊಸ ಯೋಜನೆಗಳ ಪ್ರಸ್ತಾಪ: ಯತೀಂದ್ರ

ಜನರಿಗೆ ಭೂಮಿ ಗ್ಯಾರಂಟಿ, ಬೆಂಗಳೂರು ನಗರದ ರಸ್ತೆ ಅಭಿವೃದ್ಧಿಗೆ ₹1,000 ಕೋಟಿ ಅನುದಾನ, ಸರ್ಕಾರಿ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು 'ಸೇವಾ ಒನ್' ಪೋರ್ಟಲ್, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಹಾಗೂ ಯುವಜನರ ಅಭಿವೃದ್ಧಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ₹10 ಲಕ್ಷ ಅನುದಾನ ನೀಡುವ ಮೂಲಕ 'ಭಾರತ್ ಜೋಡೋ ಸಂಘ'ಗಳ ಸ್ಥಾಪನೆ ಸೇರಿದಂತೆ ವಿವಿಧ ಉಪಕ್ರಮಗಳನ್ನು ಸಿಎಂ ಎದುರು ಸಚಿವರು ಪ್ರಸ್ತಾಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+