• search

ಕುಟುಂಬಕ್ಕೊಂದೇ ರಿಯಾಯ್ತಿ ದರದ ಮೈಸೂರು ಸಿಲ್ಕ್‌ ರೇಷ್ಮೆ ಸೀರೆ!

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಮೈಸೂರು ಸಿಲ್ಕ್ ಸೀರೆ ಕೇವಲ 4,500 ರೂಗೆ | ಇಲ್ಲಿದೆ ಪೂರ್ತಿ ಮಾಹಿತಿ | Oneindia Kannada

    ಬೆಂಗಳೂರು, ಆಗಸ್ಟ್‌ 1: ವರಮಹಾಲಕ್ಷ್ಮೀ ಹಬ್ಬ ಹತ್ತಿರ ಬಂದಿದೆ, ಈ ಹಬ್ಬಕ್ಕೆ ಮಧ್ಯಮ ವರ್ಗದ ಮಹಿಳೆಯರಿಗೆ 4500 ರೂಗೆ ಮೈಸೂರು ರೇಷ್ಮೆ ಸೀರೆ ನೀಡಲು ಸೂಕ್ತ ಮಾನದಂಡ ರಚಿಸಲಾಗುತ್ತಿದೆ. ಅದರಂತೆ ಕುಟುಂಬಕ್ಕೆ ಒಂದೇ ಸೀರೆ ನೀಡುವ ಚಿಂತನೆ ಇದೆ ಎಂದು ಸಚಿವ ಸಾ.ರಾ.ಮಹೇಶ್‌ ತಿಳಿಸಿದ್ದಾರೆ.

    ಮೈಸೂರು ಸಿಲ್ಕ್‌ ಸೀರೆ ದುಬಾರಿ ಬೆಲೆಯದ್ದಾಗಿದೆ, ಕುಟುಂಬದಲ್ಲಿರುವ ಎಲ್ಲ ಮಹಿಳೆಯರಿಗೂ 15 ಸಾವಿರ ಬೆಲೆಯ ಸೀರೆಯನ್ನು 4500 ರೂ.ಗೆ ನೀಡಲು ಕಷ್ಟವಾಗುತ್ತದೆ ಹಾಗಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಒಂದರಂತೆ ಮೈಸೂರು ಸಿಲ್ಕ್ ಸೀರೆಯನ್ನು ನೀಡಲಾಗುತ್ತದೆ ಎಂದು ಎಂದು ಮಂಗಳವಾರ ತಿಳಿಸಿದ್ದಾರೆ.

    ಮಹಿಳೆಯರಿಗೆ ರೇಷ್ಮೆ ಸೀರೆ ಭಾಗ್ಯ ಯೋಜನೆಗೆ ಸರ್ಕಾರ ಚಿಂತನೆ

    ಸೀರೆ ದುಬಾರಿಯಾಗಿರುವ ಕಾರಣ ಮಧ್ಯಮ ವರ್ಗದವರು ಇದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಆರೋಪವಿತ್ತು. ಆದ ಕಾರಣ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 15ರಿಂದ 16ಸಾವಿರ ರೂ. ಬೆಲೆ ಬಾಳುವ ರೇಷ್ಮೆ ಸೀರೆಯನ್ನು 4500 ರೂ.ಗೆ ನೀಡುವುದಾಗಿ ಭರವಸೆ ನೀಡಿದ್ದೆ ಎಂದು ಹೇಳಿದರು.

    ಸೀರೆಯ ಮೇಲೆ ಕನ್ನಡದ ರಂಗು ಚೆಲ್ಲಿದ ವೃಂದಾ ಶೇಖರ್

    ಇದು ಸ್ವಲ್ಪ ತಡವಾಗುವುದರಿಂದ ಟೀಕೆ ಕೇಳಿಬರುತ್ತಿದ್ದು, ನಾವು ಸೀರೆ ಕೊಡಲು ಬದ್ಧರಾಗಿದ್ದೇವೆ. ಇದಕ್ಕೆ ಅಗತ್ಯ ಮಾನದಂಡ ರಚಿಸಲಾಗುತ್ತದೆ, ಒಂದು ಕುಟುಂಬಕ್ಕೆ ಒಂದೇ ಸೀರೆ ನೀಡಿರುವುದರಿಂದ ಅಸಮಧಾನಗೊಳ್ಳುತ್ತಾರೆ ಆದರೂ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದರಿಂದ 5-6ಕೋಟಿ ರೂ ನಷ್ಟವಾಗುತ್ತದೆ. ಇದನ್ನು ಎಂಎಸ್‌ಐಎಲ್‌ ಹಾಗೂ ಇಲಾಖೆ ತಲಾ ಶೇ.50ರಷ್ಟು ಭರಿಸಲಿದೆ. ಹೀಗಾಗಿ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಸೀರೆ ನೀಡುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

    ವರಮಹಾಲಕ್ಷ್ಮೀ ಹಬ್ಬ ಎರಡು ದಿನ ಇರುವಾಗ ಸೀರೆ ಮಾರಾಟ

    ವರಮಹಾಲಕ್ಷ್ಮೀ ಹಬ್ಬ ಎರಡು ದಿನ ಇರುವಾಗ ಸೀರೆ ಮಾರಾಟ

    ಸರ್ಕಾರ ರಿಯಾಯಿತಿ ದರದಲ್ಲಿ ಕುಟುಂಬಕ್ಕೊಂದು ಸೀರೆ ನೀಡಲು ಚಿಂತನೆ ನಡೆಸಿದೆ. 15-16 ಸಾವಿರ ಮೌಲ್ಯದ ಸೀರೆಯನ್ನು 4500 ರೂ.ಗೆ ನೀಡಲಾಗುತ್ತಿದೆ. ಆದರೆ 5-6 ಕೋಟಿ ನಷ್ಟ ಅನುಭವಿಸಬೇಕಾಗಿರುವುದರಿಂದ ಕುಟುಂಬಕ್ಕೆ ಒಂದೇ ಸೀರೆ ನೀಡಲು ನಿರ್ಧರಿಸಲಾಗಿದೆ. ಹಬ್ಬ ಎರಡು ದಿನ ಇರುವಾಗ ಸೀರೆ ಮಾರಾಟವನ್ನು ಆರಂಭಿಸಲಾಗುತ್ತದೆ.

    ಈ ರಿಯಾಯಿತಿ ಆಗಸ್ಟ್‌ ಎರಡನೇ ವಾರದ ಬಳಿಕ ಆರಂಭ

    ಈ ರಿಯಾಯಿತಿ ಆಗಸ್ಟ್‌ ಎರಡನೇ ವಾರದ ಬಳಿಕ ಆರಂಭ

    ಆಷಾಢ ಮಾಸದ ಸಲುವಾಗಿ ಶೇ. 25 ವರೆಗೆ ರಿಯಾಯಿತಿ ಜುಲೈ 14ರಿಂದ ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಕಂತಿನ ಲೆಕ್ಕದಲ್ಲಿ ಸೀರೆ ಖರೀದಿ ಮಾಡಬಹುದು. ಅದಕ್ಕೆ ಕೆಲವು ಮುಖ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಆಷಾಢ ಮಾಸದಿಂದಾಗಿ ಕೆಲವರು ಸೀರೆಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಹಾಗಾಗಿ ಆಗಸ್ಟ್ ಎರಡನೇ ವಾರದ ಬಳಿಕ ರಿಯಾಯಿತಿ ನೀಡಲಾಗುತ್ತದೆ.

    ರಿಯಾಯ್ತಿಯಲ್ಲಿ ದೊರೆಯುತ್ತಿರುವುದು ಜರಿಯಲ್ಲ ಪ್ರಿಂಟೆಡ್‌ ರೇಷ್ಮೆ ಸೀರೆ

    ರಿಯಾಯ್ತಿಯಲ್ಲಿ ದೊರೆಯುತ್ತಿರುವುದು ಜರಿಯಲ್ಲ ಪ್ರಿಂಟೆಡ್‌ ರೇಷ್ಮೆ ಸೀರೆ

    ಸರ್ಕಾರ ರಿಯಾಯ್ತಿಯಲ್ಲಿ ಕೊಡುತ್ತಿರುವುದು ಜರಿ ಸೀರೆ ಅಲ್ಲ ಬದಲಾಗಿ ಪ್ರಿಂಟೆಡ್‌ ರೇಷ್ಮೆ ಸೀರೆ, ಜರಿ ಇರುವುದಿಲ್ಲ ಆದರೂ ಉತ್ತಮ ಸೀರೆ, ಸದ್ಯಕ್ಕೆ ಎಲ್ಲಾ ಕಡೆಗಳಲ್ಲಿಯೂ ರಿಯಾಯ್ತಿ ದರದ ಸೀರೆ ಮಾರಾಟ ಆರಂಭವಾಗಿಲ್ಲ.

    ಮೈಸೂರು ಸಿಲ್ಕ್ ಹುಟ್ಟು ಯಾವಾಗ

    ಮೈಸೂರು ಸಿಲ್ಕ್ ಹುಟ್ಟು ಯಾವಾಗ

    1942ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಇಂಗ್ಲೆಂಡಿಗೆ ಭೇಟಿ ನೀಡಿದರು, ಅಲ್ಲಿ ನೇಯ್ಗೆ ಯಂತ್ರಗಳನ್ನು ಕೊಂಡು ಅದರ ಬಗ್ಗೆ ವಿವರಗಳನ್ನು ಪಡೆದರು 1912ರಲ್ಲಿ 32 ನೇಯ್ಗೆ ಯಂತ್ರಗಳನ್ನು ಮೈಸೂರಿಗೆ ತಂದರು. ದೇಶದಲ್ಲೇ ಯಂತ್ರದ ಮೂಲಕ ನೇಯ್ಗೆಯನ್ನು ಆರಂಭಿಸಿದ ಮೊದಲ ರಾಜ್ಯ ಮೈಸೂರು ಎಂಬ ಕೀರ್ತಿ ದೊರೆಯುವಂತಾಯಿತು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Sericulture minister S.R.Mahesh said the department is thinking to sale Mysore silk sarees on rebate on the basis of one family one saree to avoid loss on the silk board and the department.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more