CP Yogeshwar: ಚನ್ನಪಟ್ಟಣ ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸಿ ಪಿ ಯೋಗೇಶ್ವರ್;‌ ಕೈ ನಾಯಕರು ಎಡವಿದ್ದೆಲ್ಲಿ?

ರಾಮನಗರ, ನವೆಂಬರ್‌ 15: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿತ್ತು. ಡಿ ಕೆ ಬ್ರದರ್ಸ್‌ ಗೆ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯಾಗಿದ್ರೆ, ಇತ್ತ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಅಬ್ಬರ ಪ್ರಚಾರದ ನಡುವೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರವನ್ನ ನಡೆಸಿದ್ದಾರೆ. ಇದೀಗ ಚುನಾವಣಾ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್‌ ಸೋಲೊಪ್ಪಕೊಂಡ್ರಾ ಎನ್ನುವ ಪ್ರಶ್ನೆ ಮೂಡಿದೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದ್ದು ಇದೀಗ ಯಾರು ಗೆಲ್ಲಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ. ಈ ನಡುವೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ.

My Political Career Like IPL Match Says Congress Candidate CP Yogeshwar

ಚುನಾವಣಾ ಫಲಿತಾಂಶದ ಕುರಿತು ಕಾಂಗ್ರೆಸ್‌ ಅಭ್ಯರ್ಥಿ ಸಿ ಪಿ ಯೋಗೇಶ್ವರ್‌ ಅವರು ಮಾತನಾಡಿ, ಕ್ಷೇತ್ರದಲ್ಲಿ ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿ ಫಲಿತಾಂಶ ಬರಬಹುದು. ಆದರೆ ಕಾಂಗ್ರೆಸ್ ಗಿಂತ ಬಿಜೆಪಿ, JDS ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ ಎಂದು ಹೇಳುವ ಮೂಲಕ ಸೋಲಿನ ಸುಳಿವು ಕೊಟ್ಟಿದ್ದಾರೆ. ಅಲ್ಲದೇ ಜಮಿರ್ ಅಹಮ್ಮದ್ ಖಾನ್ ಕರಿಯ ಕುಮಾರಸ್ವಾಮಿ ಹಾಗೂ ಮುಸ್ಲಿಂರೆಲ್ಲಾ ಪೈಸೆ ಪೈಸೆ ಕೂಡಿ ಹಾಕಿ ಹೆಚ್ ಡಿ ದೇವೇಗೌಡ ಅವರ ಕುಟುಂಬವನ್ನೇ ಖರೀದಿ ಮಾಡುತ್ತೇವೆ ಎಂಬ ಹೇಳಿಕೆಗಳು ಸೋಲಿಗೆ ಕಾರಣವಾಗಬಹುದು ಎನ್ನುವ ಅರ್ಥದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ ಪಿ ಯೋಗೇಶ್ವರ್‌ ಹೇಳಿದ್ದಾರೆ.

ಇನ್ನೂ ನಾನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌, ಸಚಿವರು ಹಾಗೂ ಮಾಜಿ ಸಂಸದರಾದ ಡಿ.ಕೆ.ಸುರೇಶ್​ಗೆ ಧನ್ಯವಾದ ಹೇಳುತ್ತೇನೆ. ಆದರೆ ತಮ್ಮ ಮೊಮ್ಮಗ ಗೆಲ್ಲಲೇಬೇಕೆಂದು ಮಾಜಿ ಪ್ರಧಾನಿ ದೇವೇಗೌಡರೇ ರಣಕಣದಲ್ಲಿ ಹೋರಾಡಿದ್ದಾರೆ. ಇನ್ನು ಸಚಿವ ಜಮೀರ್ ಮಾತಿನಿಂದ ಕಾಂಗ್ರೆಸ್ ಗೆ ಮುಸ್ಲಿಮರಿಂದ ಸ್ವಲ್ಪ ಮತ ಬಂದರೂ. ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು ಬಂದಿಲ್ಲ ಅನ್ನಿಸುತ್ತೆ ಎಂದು ಪರೋಕ್ಷವಾಗಿ ಜಮೀರ್​ ಅಹಮ್ಮದ್ ಖಾನ್ ಕುಮಾರಸ್ವಾಮಿ ಬಗ್ಗೆ ಕರಿಯ ಎಂದು ಆಡಿದ ಮಾತಿನಿಂದ ಸೋಲಾಗಬಹುದು ಎಂದು ಪರೋಕ್ಷವಾಗಿ ಸಿ ಪಿ ಯೋಗೇಶ್ವರ್‌ ಹೇಳಿಕೆ ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 15 ಸಾವಿರ ಮತ ಪಡೆದಿತ್ತು. ಬಿಜೆಪಿಯಿಂದ ನಾನು ಸೋತಿದ್ದರೂ 85 ಸಾವಿರ ಮತ ಬಂದಿತ್ತು. ನಾನು ಗೆಲ್ಲಬೇಕೆಂದರೆ ಈ ಚುನಾವಣೆ 1 ಲಕ್ಷ ಮತ ತೆಗೆದುಕೊಳ್ಳಬೇಕು. ಇಲ್ಲಿ ಸಮಬಲದ ಹೋರಾಟ ಇದೆ. ಒಕ್ಕಲಿಗ ಮತ ಕ್ರೋಢೀಕರಣ ಆಗಿದ್ದರೆ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ. ಡಿಕೆ ಸುರೇಶ್, ಡಿಕೆ ಶಿವಕುಮಾರ್, ‌ನಾನು ಒಕ್ಕಲಿಗನಾಗಿದ್ರೂ ನಮ್ಮನ್ನು ಜನರು ಮಾಸ್ ಲೀಡರ್ ಅಂತ ಒಪ್ಪಲ್ಲ. ಆದರೆ ದೇವೇಗೌಡರನ್ನು ಕುಮಾರಸ್ವಾಮಿಯನ್ನು ಒಪ್ಪುತ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸೋಲಿನ ಸುಳಿವನ್ನ ಸಿ ಪಿ ಯೋಗೇಶ್ವರ್‌ ಅವರು ನೀಡಿದ್ದಾರೆ.

ಕೈ ನಾಯಕರು ಎಡವಿದ್ದೆಲ್ಲಿ?

ಕಳೆದು ಎರಡು ಚುನಾವಣೆಯಲ್ಲಿ ಸೋಲು ಕಂಡ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು. ಹೀಗಾಗಿ ಶತಾಯಗತಾಯ ನಿಖಿಲ್‌ ಕುಮಾರಸ್ವಾಮಿ ಅವರನ್ನ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ದಳಪತಿಗಳು ಶ್ರಮವಹಿಸಿದ್ದಾರೆ. ಹೇಳಿ ಕೇಳಿ ಚನ್ನಪಟ್ಟಣ ಕ್ಷೇತ್ರ ದಳಪತಿಗಳ ಭದ್ರಕೋಟೆಯಾಗಿದೆ. ಒಕ್ಕಲಿಗರಲ್ಲಿ ಪ್ರಮುಖ ನಾಯಕ ಎಂದರೇ ಅದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ್ರು ಹಾಗೂ ಹೆಚ್‌ ಡಿ ಕುಮಾರಸ್ವಾಮಿ. ಈ ನಿಟ್ಟಿನಲ್ಲಿ ಒಕ್ಕಲಿಗರ ಪ್ರಬಲ್ಯವಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕರು ಒಕ್ಕಲಿಗರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಚುನಾವಣಾ ಪ್ರಚಾರದಲ್ಲಿ ಜಮಿರ್ ಅಹಮ್ಮದ್ ಖಾನ್ ಅವರು ಒಕ್ಕಲಿಗ ನಾಯಕ ಹಾಗೂ ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ಕರಿಯ ಎಂಬ ಪದ ಬಳಕೆ ಒಕ್ಕಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಮುಸ್ಲಿಂರೆಲ್ಲಾ ಪೈಸೆ ಪೈಸೆ ಕೂಡಿ ಹಾಕಿ ಹೆಚ್ ಡಿ ದೇವೇಗೌಡ ಅವರ ಕುಟುಂಬವನ್ನೇ ಖರೀದಿ ಮಾಡುತ್ತೇವೆ ಎಂಬ ಹೇಳಿಕೆಗಳು ಸೋಲಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+