Munirathna Naidu ಮುನಿರತ್ನ ನಾಯ್ಡು ಪ್ಲಾನ್ ತಲೆಕೆಳಗಾಗಿಸಿದ್ದು ಆ ಒಂದು ಪೋಟೋ
Munirathna case: ಮುನಿರತ್ನ ನಾಯ್ಡು ಬಂಧನವಾಗಿ ವಿಚಾರಣೆಯೂ ನಡೆಯುತ್ತಿದೆ. ಆದರೆ, ಮುನಿರತ್ನ ಎಸ್ಕೇಪ್‌ಗೆ ಏನೆಲ್ಲ ಪ್ಲಾನ್ ಮಾಡಿದ್ದ ಆತನನ್ನು ಕರ್ನಾಟಕ ಪೊಲೀಸರು ಹೇಗೆ ಬಂಧಿಸಿದರು. ಅದಕ್ಕೆ ಕಾರಣವಾಗಿದ್ದು ಏನು ಎನ್ನುವ ಇಂಟ್ರಸ್ಟಿಂಗ್ ವಿಷಯಗಳು ಈಗ ಬೆಳಕಿಗೆ ಬರುತ್ತಿದೆ. ಮುನಿರತ್ನ ನಾಯ್ಡು ವಿಷಯ ಇದೀಗ ಬಿಜೆಪಿ - ಕಾಂಗ್ರೆಸ್‌ನ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಆದರೆ, ಮುನಿರತ್ನ ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ಆಂಧ್ರಕ್ಕೆ ಯಾಕೆ ಓಡಿ ಹೋಗಬೇಕಿತ್ತು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಮುನಿರತ್ನ ನಾಯ್ಡು ಬೆಂಗಳೂರಿನಿಂದ ಎಸ್ಕೇಪ್ ಆಗುವಾಗ ಎನೆಲ್ಲ ಪ್ಲಾನ್ ಮಾಡಿದ್ದ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆತನ ಪೊಲೀಸರಿಗೆ ತನ್ನ ಲೊಕೇಶನ್ ಸಿಗಬಾರದು ಎಂದು ಬೇಸಿಕ್ ಪೋನ್ ಬಳಸಿದ್ದು, ಕೋಲಾರ ರಾಜಕೀಯದ ಪ್ರಭಾವ ಬಳಸಿದ್ದು ಎಲ್ಲವೂ ಹಳೆಯ ವಿಷಯ. ಆದರೆ, ಆತ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದು ಹೇಗೆ, ಆ ಒಂದು ಪೋಟೋ ನೀಡಿದ ಸುಳಿವೇನು ಎನ್ನುವುದನ್ನು ಪೊಲೀಸರೇ ಬಹಿರಂಗಪಡಿಸಿದ್ದಾರೆ. ಜಾತಿ ನಿಂದನೆ, ಲಂಚಕ್ಕಾಗಿ ಕೊಲೆ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಮೇಲೆ ಇದೆ. ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮುನಿರತ್ನ ತಲೆಮರೆಸಿಕೊಂಡಿದ್ದರು. ಗುತ್ತಿಗೆದಾರನಿಗೆ ಅಶ್ಲೀಲ ಪದಗಳನ್ನು ಬಳಸಿ ಬೈದಿದ್ದ ಆಡಿಯೋ ಇರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮುನಿರತ್ನ ಎಸ್ಕೇಪ್ ಪ್ಲಾನ್ ಮಾಡಿದ್ದ ಎನ್ನಲಾಗಿದೆ.

ಆ ಒಂದು ಪೋಟೋ ನೀಡಿತ್ತು ಸುಳಿವು
ಮುನಿರತ್ನ ನಾಯ್ಡು ಬೆಂಗಳೂರಿನಿಂದ ತಪ್ಪಿಸಿಕೊಂಡು ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶದ ಚಿತ್ತೂರಿಗೆ ಎಸ್ಕೇಪ್ ಆಗಲು ಪ್ಲಾನ್ ಮಾಡಿಕೊಂಡಿದ್ದ. ಆದರೆ, ಮುನಿರತ್ನ ಪ್ಲಾನ್ ಅನ್ನು ತಲೆಕೆಳಗಾಗಿಸಿದ್ದು, ಆ ಒಂದು ಪೋಟೋ. ಮುನಿರತ್ನ ನಂಗಲಿ ಎನ್ನುವ ಪ್ರದೇಶದಲ್ಲಿ ಪೋಸು ಕೊಡುತ್ತಿದ್ದ ಪೋಟೋವೊಂದನ್ನು ಸ್ಥಳೀಯರು ತೆಗೆದು ಪೊಲೀಸರಿಗೆ ಕಳುಹಿಸಿಕೊಟ್ಟಿದ್ದರು. ಟೀ ಕುಡಿಯುತ್ತ ನಿಂತಿದ್ದ ಪೋಟೋವನ್ನು ಸಾರ್ವಜನಿಕರು ತೆಗೆದುಕಳುಹಿಸಿದ್ದರು. ಆ ಪೋಟೋವನ್ನು ಪೊಲೀಸರು ಕೋಲಾರದ ಪೊಲೀಸರಿಗೆ ಕಳುಹಿಸಿದ್ದರು. ಅಲ್ದೇ ಅದಕ್ಕೂ ಮುಂಚೆ ಟಿ.ವಿ ಚಾನೆಲ್‌ಗಳಿಗೆ ಮುನಿರತ್ನ ಅವರ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಇದರ ಮೂಲಕ ಅವರು ಇದ್ದ ಲೊಕೇಶನ್ ಸಹ ಪತ್ತೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಮುನಿರತ್ನಗೆ ಬಲೆ ಬೀಸುವುದಕ್ಕೆ ಪೊಲೀಸರಿಗೆ ಸಹಕಾರಿಯಾಗಿದೆ. ಇಲ್ಲದಿದ್ದರೆ ಅವರು ಆಂಧ್ರಗೆ ಜಂಪ್ ಆಗುವ ಎಲ್ಲ ಸಾಧ್ಯತೆಗಳು ಸಹ ಇತ್ತು.
ಮುನಿರತ್ನ ಪ್ರಕರಣ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಮೂಡಿಸಿದೆ. ಇದು ದುರುದ್ದೇಶಪೂರಿತ ಕ್ರಮ ಎಂದು ಬಿಜೆಪಿ ವಿರೋಧ ಮಾಡಿದೆ. ಆದರೆ, ಮುನಿರತ್ನ ಮಾತನಾಡಿರುವ ಮಾತುಗಳಿಗೆ ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿಯೂ ಸಹ ವಿರೋಧ ವ್ಯಕ್ತವಾಗಿದೆ. ಜನ ಸಹ ಮುನಿರತ್ನ ಮಾತುಗಳನ್ನು ಕೇಳಿ ದಂಗಾಗಿದ್ದಾರೆ.












Click it and Unblock the Notifications