ಕರ್ನಾಟಕದಲ್ಲಿ ನೆರೆಯಿಂದ ಹಾನಿಗೊಳಗಾದ ಶಾಲಾ ಕಾಲೇಜುಗಳೆಷ್ಟು?

ಬೆಂಗಳೂರು, ಆಗಸ್ಟ್ 14: ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ನೆರೆ ಹಾವಳಿಯಿಂದಾಗಿ ರಾಜ್ಯದಲ್ಲಿ 5000ಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ಹಾನಿಯಾಗಿದೆ. ಚಿಕ್ಕೋಡಿ ಒಂದರಲ್ಲಿಯೇ 1681 ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಹಾನಿಯಾಗಿದೆ.

ಭಾರೀ ಮಳೆ, ನೆರೆಯಿಮದಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಕಂಡುಬಂದಿದೆ. ಉಳಿದಂತೆ ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿಯೂ ಹಲವಾರು ಶಾಲಾ ಕಾಲೇಜು ಕಟ್ಟಡಗಳಿಗೆ ಸರಿ ಇದ್ದರೂ ಹಲವು ಶಾಲಾ ಕಾಲೇಜು ಕಟ್ಟಡಗಳಿಗೆ ಹಾನಿಯಾಗಿದೆ.

ಕೆಲವು ಶಾಲಾ ಕಾಲೇಜಿನ ಕಟ್ಟಡಗಳು ಕುಸಿದು ಬಿದ್ದರೆ, ಮತ್ತಷ್ಟು ಶಾಲಾ ಕಾಲೇಜುಗಳ ಚಾವಣಿಯೇ ಕುಸಿದು ಬಿದ್ದಿದೆ. ಬೆಳಗಾವಿ 1300, ಬಾಗಲಕೋಟೆ 732, ಧಾರವಾಡ 315, ಹಾವೇರಿ 127, ಹಾಸನ 522, ವಿಜಯಪುರ 13 ಶಾಲಾ ಕಾಲೇಜುಗಳ ಕಟ್ಟಡಗಳಿಗೆ ಹಾನಿಯಾಗಿದೆ.

More Than 5 Thousand Schools And Colleges Effected By Floods

ಕೆಲವು ಶಾಲಾ ಕಟ್ಟಡಗಳು ಸರಿಯಿದ್ದರೂ ಕಟ್ಟಡದೊಳಗೆ ನೀರು ನುಗ್ಗಿರುವುದರಿಂದ ಕಸ, ಕಡ್ಡಿ, ಕೆಸರು ಸಂಗ್ರಹಗೊಂಡಿದೆ. ಕಳೆದ ಒಂದು ವಾರದಿಂದ ಬಂದಾಗಿದ್ದ ಶಾಲಾ ಕಾಲೇಜುಗಳು ಮಂಗಳವಾರದಿಂದ ಪುನರಾರಂಭವಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಸೇರಿದಂತೆ ಹಲವು ಕಡೆ ಆರಮಭವಾಗಿದೆ.ಬೆಳಗಾವಿ, ಕೊಡಗು, ಬಾಗಲಕೋಟೆ ಜಿಲ್ಲೆಗಳಲ್ಲಿ ಗುರುವಾರದವರೆಗೂ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+