ವಸತಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸಜ್ಜು; 808 ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ!

ಬೆಂಗಳೂರು, ಅಕ್ಟೋಬರ್‌ 19: ರಾಜ್ಯದಲ್ಲಿನ ವಸತಿ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಹೊಸದಾಗಿ ಹತ್ತು ಶಾಲೆಗಳನ್ನು ಆರಂಭದ ಜತೆಗೆ 808 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೌದು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಉನ್ನತೀಕರಣ, ವಿದ್ಯಾರ್ಥಿಗಳ ದಾಖಲಾತಿ ದ್ವಿಗುಣ, ಹೊಸದಾಗಿ ಹತ್ತು ವಸತಿ ಶಾಲೆ ಆರಂಭ ತೀರ್ಮಾನ ಹಿನ್ನಲೆಯಲ್ಲಿ 808 ಹುದ್ದೆಗಳ ಭರ್ತಿ ಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.

morarji-desai-residential-schools

ಇನ್ನೂ 808 ಹುದ್ದೆಗಳ ಪೈಕಿ 10 ಪ್ರಿನ್ಸಿಪಾಲ್, 248 ಉಪನ್ಯಾಸಕರು, 60 ಶಿಕ್ಷಕರು ಸೇರಿದ್ದಾರೆ. ಈ ಪೈಕಿ 10 ಹೊಸ ಮೊರಾರ್ಜಿ ದೇಸಾಯಿ ಶಾಲೆಗೆ 100 ಹುದ್ದೆ ಕೆಪಿ ಎಸ್ ಸಿ ಯಿಂದ ನೇಮಕಕ್ಕೂ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು, ಪ್ರಿನ್ಸಿಪಾಲ್, ಉಪನ್ಯಾಸಕರು, ಶಿಕ್ಷಕರು, ಇತರೆ ಸಿಬ್ಬಂದಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದರ ಬೆನ್ನಲ್ಲೇ 708 ಹುದ್ದೆ ಹೊರಗುತ್ತಿಗೆ, 100 ಖಾಯಂ ಹುದ್ದೆಭರ್ತಿ ಗೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಅಲ್ಲದೇ 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ರಿಂದ 12 ನೇ ತರಗತಿ ವರೆಗೆ ಉನ್ನತೀಕರಣಕ್ಕೆ 558 ಹುದ್ದೆ, 50 ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಳ ವಿದ್ಯಾರ್ಥಿಗಳ ದ್ವಿಗುಣ ಕ್ಕೆ 250 ಹುದ್ದೆ , 6 ರಿಂದ 10 ನೇ ತರಗತಿ ವರೆಗೆ 10 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲು 100 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಆಗಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.

ಕರ್ನಾಟಕ ಸಂಭ್ರಮ ಯಶಸ್ವಿಗೊಳಿಸಲು ಜಮೀರ್ ಸೂಚನೆ!

ಕರ್ನಾಟಕ ಎಂದು ನಾಮಕರಣ ಗೊಂಡು 50 ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜಿಸಲಾಗಿರುವ ಕರ್ನಾಟಕ ಸಂಭ್ರಮ -50' ಯಶಸ್ವಿ ಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಜತೆ ನವೆಂಬರ್ 2 ರಂದು ಕಾರ್ಯಕ್ರಮ ನಡೆಯಲಿರುವ ಹಂಪಿ ದೇವಾಲಯ ಆವರಣ ಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಸಭೆ ನಡೆಸಿ, ಇದೊಂದು ಮಹತ್ವ ದ ಕಾರ್ಯಕ್ರಮ. ಎಲ್ಲರೂ ಜತೆಗೂಡಿ ಅರ್ಥ ಪೂರ್ಣ ವಾಗಿ ಆಚರಿಸಬೇಕು ಎಂದು ಹೇಳಿದರು.

ಒಂದು ವರ್ಷ ಕಾಲ ನಿರಂತರವಾಗಿ ಆಚರಿಸುತ್ತಿರುವ ಈ ಹೆಮ್ಮೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದು, ಎರಡನೇ ಬಾರಿ ಮುಖ್ಯಮಂತ್ರಿ ಆದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿ ಅವರಿಗೆ ಗೌರವ ಸನ್ಮಾನ ನೀಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಸಂಭ್ರಮ ಸಂದರ್ಭಕ್ಕೆ ಸಾಕ್ಷಿ ಆಗುತ್ತಿರುವುದು ನಮ್ಮ ಪುಣ್ಯ. ನಾವೆಲ್ಲರೂ ಹೆಮ್ಮೆ ಪಡುವ ವಿಚಾರ, ಇದನ್ನು ನಮ್ಮ ಕಾರ್ಯಕ್ರಮ, ಪ್ರತಿಯೊಬ್ಬ ಕನ್ನಡಿಗರ ಕಾರ್ಯಕ್ರಮದಂತೆ ಹಬ್ಬದ ವಾತಾವರಣದಲ್ಲಿ ಮಾಡಬೇಕು. ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕರ್ನಾಟಕ ಸಂಭ್ರಮ 1973 ರ ಇತಿಹಾಸ ಹಂಪಿಯಲ್ಲಿ ಮತ್ತೆ ಮರುಕಳಿಸುವಂತೆ ಮಾಡಬೇಕು. ನವೆಂಬರ್ 2 ರಂದು ಹಂಪಿಯ ವಿರೂಪಕ್ಷ ದೇವಾಲಯ ಎದುರು ಬಸವಣ್ಣ ಮಂಟಪ ಪಕ್ಕ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಅಂದು ಕನ್ನಡ ಜ್ಯೋತಿ ಯನ್ನು ಹೊತ್ತ ಕನ್ನಡ ರಥ ಹಂಪಿ ಯಿಂದ ಕೊಪ್ಪಳ ಮಾರ್ಗ ವಾಗಿ ಗದಗ ತಲುಪಲಿದ್ದು ಸರ್ಕಾರಿ ಶಿಷ್ಟ ಚಾರ ದೊಂದಿಗೆ ತಲುಪಿಸಬೇಕು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+