ವಿದ್ಯುತ್ ಉತ್ಪಾದನೆಗೆ ಬಲ ತುಂಬಿದ ಜುಲೈ ತಿಂಗಳ ಮಳೆ!

ಬೆಂಗಳೂರು, ಜುಲೈ 31 : ಜುಲೈ ತಿಂಗಳಿನಲ್ಲಿ ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದ ಜನರು ಸಂಕಷ್ಟ ಅನುಭವಿಸಿದರು. ಆದರೆ, ರಾಜ್ಯದ ವಿದ್ಯುತ್ ಉತ್ಪಾದನೆಗೆ ಮಳೆ ಸಹಾಯಕವಾಗಿದೆ. ಎಲ್ಲಾ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ.

ಲಿಂಗನಮಕ್ಕಿ, ಸೂಪಾ, ಮಾಣಿ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಮೂರು ಜಲಾಶಯಗಳು ರಾಜ್ಯದ ಜಲವಿದ್ಯುತ್ ಉತ್ಪಾದನೆಗೆ ಪ್ರಮುಖ ಮೂಲಗಳಾಗಿವೆ. ಜಲಾಶಯಗಳು ಭರ್ತಿಯಾದರೆ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಲಿದೆ.

ಮೂರು ಜಲಾಶಯಗಳು ಸೇರಿ ಒಟ್ಟು 327 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಪ್ರಸ್ತುತ 230 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಜುಲೈ ಅಂತ್ಯದ ವೇಳೆಗೆ ಮೂರು ಜಲಾಶಯಗಳು ಸೇರಿ ಕೇವಲ 133 ಟಿಎಂಸಿ ನೀರಿನ ಸಂಗ್ರಹವಿತ್ತು.

Monsoon rain brought cheer to power sector

ಮೂರು ಜಲಾಶಯಗಳು ಭರ್ತಿಯಾದರೆ 8,689 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಪ್ರಸ್ತುತ 6,192 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದೆನೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಿಂದಲೇ 3,387 ಮಿಲಿಯನ್ ಯೂನಿಟ್ ವಿದ್ಯುತ್ ದೊರೆಯುತ್ತಿದೆ.

ಜಲಾಶಯಗಳ ನೀರಿನ ಮಟ್ಟ : ಲಿಂಗನಮಕ್ಕಿ ಜಲಾಶಯದಲ್ಲಿ ಪಸ್ತುತ 1,806 ಅಡಿ ನೀರಿನ ಸಂಗ್ರಹವಿದೆ (1,819 ಪೂರ್ಣಮಟ್ಟ). ಸೂಪಾ ಜಲಾಶಯದಲ್ಲಿ 552 ಮೀಟರ್ ನೀರಿದೆ (564 ಮೀಟರ್ ಪೂರ್ಣ ಮಟ್ಟ), ಮಾಣಿ ಜಲಾಶಯದಲ್ಲಿ 588 ಅಡಿ ನೀರಿದೆ (594 ಮೀಟರ್) ಪೂರ್ಣ ಮಟ್ಟ.

ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಲಿಂಗನಮಕ್ಕಿ, ಮಾಣಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಆದ್ದರಿಂದ, ಎಲ್ಲಾ ಜಲಾಶಯಗಳ ಒಳಹರಿವು ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+