PM Modi Video Conference: ಮುಂದಿನ 25 ವರ್ಷ ದೇಶಕ್ಕೆ ಅಮೃತ ಕಾಲದ ಅವಧಿ- ಮೋದಿ ಭರವಸೆ
ಬೆಂಗಳೂರು ಏಪ್ರಿಲ್ 27: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಕಾರ್ಯಕರ್ತರೊಂದಿಗೆ ಮೋದಿ ಇಂದು ಸಂವಾದ ನಡೆಸಿದರು. ನರೇಂದ್ರ ಮೋದಿಯವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿಲು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಬಿಜೆಪಿ ಕಾರ್ಯಕರ್ತರು ನಮೋ ಸಂವಾದದಲ್ಲಿ ಭಾಗಿಯಾದರು.
ಈ ವೇಳೆ ಕೆಲ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಿದರು. ಇದಕ್ಕೂ ಮೊದಲು ಕರ್ನಾಟಕದಲ್ಲಿ ಬಿಜೆಪಿ ಗೆಲುವು ಎಷ್ಟು ಮುಖ್ಯ ಹಾಗೂ ಗೆಲುವಿಗೆ ಏನು ಮಾಡಬೇಕು ಎನ್ನುವುದನ್ನು ಮೋದಿ ವಿವರಿಸಿದರು. 'ಕರುನಾಡಿನಲ್ಲಿ ಬಿಜೆಪಿ ಗೆಲ್ಲೋದು ಮುಖ್ಯವಾಗಿದೆ. ಹೀಗಾಗಿ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಬೂತ್ ಮಟ್ಟದಲ್ಲಿ ಗೆದ್ದರೆ ಚುನಾವಣೆ ಗೆಲ್ಲಲು ಸಾಧ್ಯ. ಕರ್ನಾಟಕದ ಜನರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಹತ್ತು ಪುರುಷ ಹಾಗೂ ಹತ್ತು ಮಹಿಳಾ ಕಾರ್ಯಕರ್ತರು ಸೇರಿ ಟೀಂ ಆಗಿ ಕೆಲಸ ಮಾಡಬೇಕು. ವಯಸ್ಸಾದವರು, ಮಕ್ಕಳು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ. ಕರ್ನಾಟಕದಲ್ಲಿ ಯುವ ಜನತೆಗೆ ಉತ್ತಮ ಭವಿಷ್ಯ ಇದೆ' ಎಂದು ಸಂವಾದ ಕಾರ್ಯಕ್ರಮದಲ್ಲಿ ಮೋದಿ ಹೇಳಿದರು.

ಈ ಸಮಯದಲ್ಲಿ ಚಿತ್ರದುರ್ಗದಿಂದ ಪಕೀರಪ್ಪ ಪ್ರಶ್ನೆಗೆ ಮೋದಿ ಉತ್ತರ ನೀಡಿದರು. ಡಬಲ್ ಇಂಜಿನ್ ಸರ್ಕಾರದಿಂದ ಏನು ಲಾಭವಾಗಲಿದೆ ಎಂದು ಪಕೀರಪ್ಪ ಪ್ರಶ್ನೆ ಮಾಡಿದರು. ಇದರಕ್ಕೆ ಉತ್ತರಿಸಿದ ಮೋದಿ,'ಕೊರೊನಾ ಸಂದರ್ಭದಲ್ಲಿ ಸಹಕಾರ ಮಾಡಿದ್ದು ಡಬಲ್ ಇಂಜಿನ್ ಸರ್ಕಾರ. ಹಲವು ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಸ್ಟಾರ್ಟಅಪ್ ಕೊಡುಗೆ ಅಪಾರವಾಗಿದೆ. ಹಲವು ಯೋಜನೆಗಳ ಲಾಭವನ್ನು ಜನ ಪಡೆದಿದ್ದಾರೆ. ಯೋಜನೆಗಳು ಯಶಸ್ವಿಯಾಗಿವೆ. ಡಬಲ್ ಇಂಜಿನ್ ಸರ್ಕಾರದ ಲಾಭವನ್ನು ಕರ್ನಾಟಕ ಪಡೆದಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ' ಎಂದರು.
ಹಿಂದೆ ಒಂದು ಮನೆ ನಿರ್ಮಿಸಲು ಮುನ್ನೂರು ದಿನ ಬೇಕಿತ್ತು. ಆದರೀಗ ಅವಾಸ್ ಯೋಜನೆ ಅಡಿ ಬಡವರಿಗೆ ಸುಸಜ್ಜಿತ ಮನೆಯನ್ನು ನೂರು ದಿನಗಳಲ್ಲಿ ಕಟ್ಟಿಕೊಡಲಾಗುತ್ತಿದೆ. ದೇಶದ ಮೆಡಿಕಲ್ ಕಾಲೇಜು ಸಂಖ್ಯೆ ಹೆಚ್ಚಳವಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಿಂದ ರೈತರು ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಆರು ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕದ ಬೆಂಗಳೂರು ಬ್ಲೋಬಲ್ ಹಬ್ ಆಗಿ ಪರಿವರ್ತನೆ ಆಗಿದೆ ಎಂದರು.

ಇದೇ ವೇಳೆ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ಅಂದ್ರೆ ಕುಟುಂಬವಾದ, ಭ್ರಷ್ಟಾಚಾರದ ಭರವಸೆ ಎಂದು ಹೇಳಿದರು.
ವಿಜಯನಗರ ಚಂದ್ರ ಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಮೋದಿ, 'ಕರ್ನಾಟಕ ಸಾಹಿತ್ಯ, ಸಂಸ್ಕೃತಿ ಹೀಗೆ ಎಲ್ಲಾ ವಿಚಾರದಲ್ಲಿ ಕರ್ನಾಟಕ ತುಂಬಾ ಸಂಮೃದ್ಧವಾಗಿದೆ. ಆದ್ಯಾತ್ಮಿಕ ವಿಚಾರದಲ್ಲೂ ಮೇಲಿದೆ. ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶ್ರಮಿಸುತ್ತದೆ. ಅಭಿವೃದ್ದಿ ಮಂತ್ರವೇ ನಮ್ಮ ಗುರಿಯಾಗಿದೆ. ದಾಖಲೆ ಮಟ್ಟದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ' ಎಂದು ಮೋದಿ ಹೇಳಿದರು.
ಐದು ವರ್ಷದಲ್ಲಿ ರಾಜ್ಯವನ್ನು ಯಾವ ಸ್ಥಾನದಲ್ಲಿ ನೋಡುತ್ತೇವೆ ಎಂದು ಬೆಂಗಳೂರಿನ ದಿಯಾರ್ ಯೋಗೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಮೋದಿ, 'ಬರುವ ಐದು ವರ್ಷ ದೇಶಕ್ಕೆ ಅಮೃತ್ ಕಾಲವಿದೆ. ಇದು ಯಾವುದೇ ಬೇರೆ ಸರ್ಕಾರ ಮಾತಲ್ಲ. ಇದು ದೇಶದ ಮಾತಾಗಿದೆ. ಮುಂಬರುವ ವರ್ಷ ದೇಶಕ್ಕೆ ಅಮೃತಕಾಲವಾಗಿದೆ. ಹೀಗಾಗಿ ಮತದಾದರಲ್ಲಿ ಕೇಳುವುದೇನೆಂದರೆ ಯಾರ ಬಳಿ ಅಮೃತ್ ಕಾಲ ನೋಡುವ ಬ್ಲೂ ಪ್ರಿಂಟ್ ಇದಿಯೋ ಅವರು ಬಿಜೆಪಿ ಮತ ಹಾಕಬೇಕು ಎಂದರು. ಜೊತೆಗೆ ಈ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಅಭಿವೃದ್ಧಿ ಮಾಡುತ್ತಿದೆ. ಕರ್ನಾಟಕದ ವಿಕಾಸ ಭಾರತದ ವಿಕಾಸವಾಗಿದೆ. ಮುಂದಿನ 25 ವರ್ಷಗಳ ಕಾಲ ಅಮೃತ ಕಾಲದ ಅವಧಿ ಇರಲಿದೆ. ಇದನ್ನು ನಾನು ಶಪತ ಮಾಡುತ್ತೇನೆ ಎಂದರು.












Click it and Unblock the Notifications