ಕೋಲಾರ, ಬೆಳಗಾವಿಯಲ್ಲಿ ಆಧುನಿಕ ಕಸಾಯಿಖಾನೆ ಇನ್ನಿತರ ಸುದ್ದಿಗಳು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಸಭೆಯ ನಂತರ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಮುಖ್ಯಾಂಶಗಳು ಈ ರೀತಿ ಇವೆ:

• ಕನ್ನಡ ನಾಡು-ನುಡಿಯ ರಕ್ಷಣೆಗೆ ಪೂರಕವಾಗುವಂತೆ ಸಾಂಸ್ಕøತಿಕ ನೀತಿ ಜಾರಿಗೆಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

Modern abattoirs in Kolar and Belagavi Other cabinet decisions

ಹಿಂಬಡ್ತಿ ಭೀತಿಯಲ್ಲಿರುವ ನೌಕರರಿಗಾಗಿ ಸುಗ್ರೀವಾಜ್ಞೆ
ಜಾನುವಾರು ಲಸಿಕೆ ಉತ್ಪಾದನಾ ಘಟಕ: ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ ತಡೆಗೆ ಲಸಿಕೆ ತಯಾರಿಸುವ ನೂತನ ಉತ್ಪಾದನಾ ಘಟಕವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರಿನರಿ ಬಯಾಲಾಜಿಕಲ್ಸ್ ಆವರಣದಲ್ಲಿ ಒಂದು ನೂರು ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ.

ಕಸಾಯಿಖಾನೆಗೆ ಅನುಮೋದನೆ: ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಅತ್ಯಾಧುನಿಕ ಕಸಾಯಿ ಖಾನೆಯನ್ನು ಆರಂಭಿಸಲು ಸಂಪುಟ ನಿರ್ಧರಿಸಿದೆ. ಕೋಲಾರದ ಮುಳಬಾಗಿಲು ಹಾಗೂ ಬೆಳಗಾವಿಯ ಹಿರೇ ಬಾಗೇವಾಗಿ ಸೇರಿದೆ.

Modern abattoirs in Kolar and Belagavi Other cabinet decisions

• ಕಬ್ಬಿಣ ಅದಿರು ಗಣಿಗಾರಿಕೆ ಕುರಿತ ಮುಂದಿನ 15 ವರ್ಷಗಳವರೆಗಿನ ನೂತನ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
• ಕೇಂದ್ರ ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ರಮಣದುರ್ಗ ಬ್ಲಾಕ್‍ನ ವ್ಯಾಪ್ತಿಯಲ್ಲಿ 150 ಎಕರೆ ಪ್ರದೇಶವನ್ನು ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲುಕಿನ ನಿಟ್ಟೂರು ಹೋಬಳಿಯ ಬಿದರಹಳ್ಳಿ ಕಾವಲ್‍ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೆಚ್. ಎ. ಎಲ್ ಸಂಸ್ಥೆಯ ಹೆಲಿಕ್ಯಾಪ್ಟರ್ ಘಟಕಕ್ಕೆ ಕಡಬಕೆರೆಯಿಂದ ನೀರು ಹಂಚಿಕೆ ಮಾಡಲು ಸಂಪುಟ ಅನುಮೋದನೆ ನೀಡಿದೆ.

• ರಾಜ್ಯದ ಏಳು ನೀರಾವರಿ ಯೋಜನೆಗಳಿಗೆ ಬ್ಯಾರೇಜು, ಬಾಂದಾರ ನಿರ್ಮಾಣ ಮಾಡುವ ಕಾಮಗಾರಿಗೆ ಸಚಿವ ಸಂಪುಟ ಸಮ್ಮತಿ ನೀಡಿದೆ.

• ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 100 ಎಕರೆ ಜಾಗದಲ್ಲಿ ಹಿಂದುಳಿದ ವರ್ಗದವರ ಕಲ್ಯಾಣ ಇಲಾಖೆಗೆ ಭೂಮಿ ಮಂಜೂರು ಮಾಡಿದೆ. ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪನೆ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Kolar : Mulbagal Sangam Theater Is Haunted | Oneindia Kannada

• ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು 10 ಕೋಟಿ ರೂ. ಸಾಲ ಪಡೆಯುವ ಯೋಜನೆಗೆ ರಾಜ್ಯ ಸರ್ಕಾರ ಪ್ರತಿ ಖಾತರಿಗೆ ಒಪ್ಪಿಗೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Modern abattoirs to be set up in Mulbagal taluk in Kolar and Hire bagewadi in Belagavi a cost of Rs 29 crore this and many Other cabinet decisions
Please Wait while comments are loading...