ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಒನ್ ನನ್ನ ಅನಿಸಿಕೆ: ಶ್ರೀಹರ್ಷ ಸಾಲಿಮಠ

By ಶ್ರೀಹರ್ಷ ಸಾಲಿಮಠ, ಪ್ರೊಎಕ್ಸ್ ಕನ್ಸಲ್ಟೆನ್ಸಿ, ಬೆಂಗಳೂರು
|
Google Oneindia Kannada News

ಸರ್ಕಾರ, ಖಾಸಗಿ ವಲಯದ ವಿವಿಧ ರೀತಿಯ ಸೇವೆ­ಯನ್ನು ಮೊಬೈಲ್‌ ಮೂಲಕ ನೀಡುವ ಮೊಬೈಲ್ ಒನ್ ಯೋಜನನೆ ಈಗ ವಿಶ್ವದ ಗಮನ ಸೆಳೆದಿದೆ. ಈ ರೀತಿ ಯೋಜನೆ ದೇಶದಲ್ಲೇ ಪ್ರಥಮ, ವಿಶ್ವದಲ್ಲೇ ನೂತನ ಯೋಜನೆ ಎಂದು ಎಲ್ಲೆಡೆ ಚರ್ಚೆಗೊಳಪಡುತ್ತಿದೆ. ಸಿದ್ದರಾಮಯ್ಯ ಅವರ ಎಂ ಆಡಳಿತದ ಕನಸಿನ ಈ ಯೋಜನೆ ಪರ ವಿರೋಧಿ ಪ್ರತಿಕ್ರಿಯೆಗಳು ಬರುತ್ತಲೇ ಇದೆ. ಮೊಬೈಲ್ ಒನ್ ಅಪ್ಲಿಕೇಷನ್ ಬಗ್ಗೆ ಒನ್ ಇಂಡಿಯಾ ಓದುಗರೊಬ್ಬರು ಕಳಿಸಿರುವ ವಿಮರ್ಶೆ ಇಲ್ಲಿದೆ. ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಇ ಮೇಲ್ ಮೂಲಕ ಕಳಿಸಬಹುದು.

ಸರಕಾರದ ಮತ್ತು ಖಾಸಗಿಯವರ ಸೇವೆಗಳು ಜನರನ್ನು ವೇಗವಾಗಿ ತಲುಪಲು ತಂತ್ರಜ್ಞಾನದ ಸಹಾಯ ಪಡೆದ ರಾಜ್ಯ ಸರಕಾರದ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗುವಂಥದ್ದು. ಸುಮಾರು 9.48 ಎಂ ಬಿ ಯಷ್ಟಿರುವ ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಆರು ನೂರನೆಯ ಬಳಕೆದಾರನಾಗಿ ಮೊದಲನೆ ದಿನವೇ ಇದನ್ನು ಮೊಬೈಲಿಗೆ ಇಳಿಸಿಕೊಂಡೆ. [ಸೇವೆ ಕನ್ನಡದಲ್ಲಿದ್ರೆ ಮಾತ್ರ 'ಎಂ ಆಡಳಿತ' ಸ್ವಾಗತಾರ್ಹ]

ಇಳಿಸಿಕೊಂಡ ನಂತರ ನಮ್ಮ ಫೋನ್ ನಂಬರನ್ನು ರಿಜಿಸ್ಟರ್ ಮಾಡಿಕೊಳ್ಳುವಾಗ ಮೊಬೈಲಿಗೆ ನಾಲ್ಕು ಅಂಕಿಯ ಪಾಸ್ ವರ್ಡ್ ಅನ್ನು ಕಳಿಸಲಾಗುತ್ತದೆ. ಲಾಗಿನ್ ಆಗುವಾಗ ಕನ್ನಡ ಅಥವಾ ಇಂಗ್ಲೀಷ್ ಅನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವಿದೆ.

ನಾಲ್ಕುಸಾವಿರದಷ್ಟು ಸೇವೆಗಳನ್ನು ಒಂದೇ ಸೂರಿನಡಿ ಕೊಡುವುದು ಅತ್ಯಂತ ಸವಾಲಿನ ಕೆಲಸವೇ ಸರಿ. ಜಾಣ ಮೊಬೈಲ್ ಗಳು ಪ್ರತಿಯೊಬ್ಬರ ಕೈಯಲ್ಲೂ ಸಾಮಾನ್ಯವಾಗಿರುವ ಈ ದಿನಗಳಲ್ಲಿ ಇಂತಹದೊಂದು ಪ್ರಯತ್ನ ವೇಗದ ಆಡಳಿತಕ್ಕೆ ನಾಂದಿಯಾಗಬಲ್ಲದು

Karnataka Mobile One service from Government of Karnataka a User review on App

ಈ ಆಪ್ ಅನ್ನು ಬಳಸುವಾಗ ನಾನು ಕಂಡುಕೊಂಡ ಕೆಲ ಅಂಶಗಳು ಇಂತಿವೆ.

ಮೊಬೈಲ್ ನಲ್ಲಿ ಆಪ್ ಅನ್ನು ಇನ್ ಸ್ಟಾಲ್ ಮಾಡುವಾಗ ಕಾಂಟಾಕ್ಟ್ ಗಳಲ್ಲದೇ ನಮ್ಮ ಫೋಟೋ ಗ್ಯಾಲರಿ ಸೇರಿದಂತೆ ಎಲ್ಲ ವಿವರಗಳ access ಅನ್ನು ಕೇಳುತ್ತದೆ. ಇಷ್ಟೆಲ್ಲದರ access ಏಕೆ ಅವಶ್ಯಕ ಎಂಬುದು ಅರ್ಥವಾಗದ ಸಂಗತಿ.

ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿಯನ್ನು ನಮ್ಮಿಂದ ಪಡೆಯಲು ಸರಕಾರ ಯತ್ನಿಸುತ್ತಿದೆಯೆನಿಸುತ್ತದೆ. ಪಡೆದ ಮಾಹಿತಿಯ ಗೋಪ್ಯತೆಯ ಬಗ್ಗೆ ಒಪ್ಪಂದವಿದೆಯಾದರೂ ನಮ್ಮ ಮಾಹಿತಿ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಅನುಮಾನಗಳಿದ್ದೇ ಇರುತ್ತವೆ. [ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]

1. ಸರಕಾರಿ ಕಛೇರಿಗಳ ಕಟ್ಟಡಗಳಂತೆಯೇ ಆಪ್ ನ ವಿನ್ಯಾಸ ಅನಾಕರ್ಷಕವಾಗಿದೆ.

2. ಸರಕಾರಿ ಕೆಲಸಗಳಂತೆಯೇ ಈ ಆಪ್ ಕೂಡ ನಿಧಾನ. ಮೊದಲ ದಿನ ರಿಜಿಸ್ಟ್ರರ್ ಮಾಡಿದ ನನಗೆ ಕಡಿಮೆ ವೇಗದ ಅನುಭವವಾಗದಿದ್ದರೂ ಎರಡು ಮತ್ತು ಮೂರನೆಯ ದಿನ ಇಳಿಸಿಕೊಂಡವರಿಗೆ ಈ ಅನುಭವವಾಗಿದೆ. ಇವತ್ತು ಪಾಸ್ ವರ್ಡ್ ಬದಲಿಸಲು ಪ್ರಯತ್ನಿಸಿದಾಗ ನನ್ನ ಮೊಬೈಲ್ ಗೆ ಹೊಸ ಪಾಸ್ ವರ್ಡ್ ಬರಲು ಸುಮಾರು ಹದಿನೈದು ನಿಮಿಷ ತೆಗೆದುಕೊಂಡಿತು.

3. ಆಪ್ ನ ಒಳಗಿನ ಕೆಲ ಸೇವೆಗಳು ತೆರೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಹತ್ತು ಸಾವಿರ ಲಾಗಿನ್ ಗಳಿಗೇ ಹೀಗಾದರೆ ಮುಂದೆ ಬಳಕೆದಾರರ ಸಂಖ್ಯೆ ಲಕ್ಷಗಳನ್ನು ದಾಟಿದಾಗ ಹೇಗಾಗಬಹುದು? ಈ ಕುರಿತು ತಂತ್ರಜ್ಞರು ನಿಗಾ ವಹಿಸುವುದು ಒಳಿತು.

4. ಸಾಕಷ್ಟು ಸೇವೆಗಳು ಸಧ್ಯಕ್ಕೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ವಿಸ್ತರಿಸುವಅವಕಾಶ ಇದ್ದೇ ಇದೆ.

5. ಬೆಸ್ಕಾಂ, ಹೆಸ್ಕಾಂ ಮತ್ತು ನೀರಿನ ಬಿಲ್ ಅನ್ನು ಕಟ್ಟುವಾಗ ನಾವು ನಮ್ಮದಲ್ಲದೇ ಯಾರ ಬಿಲ್ ವಿವರಗಳನ್ನಾದರೂ ನೋಡಬಹುದು ಮತ್ತು ಬಿಲ್ ಪಾವತಿ ಮಾಡಬಹುದು! ರಿಜಿಸ್ಟರ್ ಆಗಿರುವ ಮೊಬೈಲ್ ನೊಂದಿಗೆ ತಾಳೆ ನೋಡಿ ಬಿಲ್ ಪಾವತಿಸಲು ಅವಕಾಶ ನೀಡಿದರೆ ಸೂಕ್ತ.

6. ಕನ್ನಡದ ಬಳಕೆ ದಯನೀಯವಾಗಿದೆ. ಮೊದಲು ಇಂಗ್ಲೀಷ್ ನಲ್ಲಿ ಬರೆದು ನಂತರ ಟ್ರಾನ್ಸ್ ಲೇಟರ್ ಗಳನ್ನು ಬಳಸಿ ಕನ್ನಡಕ್ಕಿಳಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ.

M one app

7. ಪಾವತಿಗಳಿಗೆ ಪಾವತಿ ಶುಲ್ಕ ಇಟ್ಟಿದ್ದಾರೆ. ನೆಟ್ ಬ್ಯಾಂಕಿಂಗ್ ಗೆ 5-10 ರೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಿಗೆ ಶೇ 0.5 ರಿಂದ ಶೇ 1, ಕ್ಯಾಶ್ ಕಾರ್ಡ್ ಗಳಿಗೆ ವಾಲೆಟ್ ಗಳಿಗೆ ರೂ 10 ರವರೆಗೆ ಶುಲ್ಕ ನಿಗದಿಯಾಗಿದೆ. ಈ ಹೊರೆಯನ್ನು ಕಂಪನಿಗಳಿಗೆ ದಾಟಿಸಿದ್ದರೆ ಒಳ್ಳೆಯದಿತ್ತು.

8. ಪೋಲೀಸ್ ಸ್ಟೇಷನ್ ನ ವಿವರ ಪಡೆಯುವ ಮತ್ತು ನೇರವಾಗಿ ಪೋಲೀಸ್ ಕಂಪ್ಲೇಂಟನ್ನು ಕೊಡುವ ವ್ಯವಸ್ಥೆ ಇದರಲ್ಲಿದೆ. ಆದರೆ ಪೋಲೀಸರ ಕಡೆಯಿಂದ ಈ ಆಪ್ ಹೇಗೆ ಬಳಕೆಯಾಗುತ್ತದೆ ಮತ್ತು ಯಾವ ರೀತಿಯಿಂದ ಉತ್ತರ ಸಿಗುತ್ತದೆ ಎಂಬುದು ಬಳಸಿ ನೋಡಿದಾಗಲೇ ಗೊತ್ತಾಗುವುದು.

9. ಬಿ ಎಮ್ ಟಿ ಸಿ ವಿಭಾಗದಲ್ಲಿ ಬಹುಷಃ ಯಾವ ಮಾಹಿತಿಯನ್ನೂ ಲೋಡ್ ಮಾಡಿದ ಹಾಗೆ ಕಾಣುತ್ತಿಲ್ಲ ಯಾಕೆಂದರೆ ಯಾವ ಸೇವೆಗಳೂ ಇಲ್ಲಿ ಕೆಲಸ ಮಾಡುತ್ತಿಲ್ಲ.

10. ರೇಲ್ವೇ ಬುಕಿಂಗ್ ಸೌಲಭ್ಯವಿದೆಯಾದರೂ ಟ್ರಾಫಿಕ್ ಸಮಸ್ಯೆ ಇದ್ದೇ ಇದೆ. ಮುಕ್ಕಾಲು ಭಾಗ ಸಮಯ ಈ ಸೇವೆ ಲಭ್ಯವಿರುವುದಿಲ್ಲ. ಇದನ್ನು ಹೇಗೆ ನಿವಾರಿಸಿಕೊಳ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು.

11. ಹೆಣ್ಣುಮಕ್ಕಳ ಸುರಕ್ಷತೆಗಾಗಿ SAFE ಆಪ್ ಅನ್ನು ಕೂಡಿಸಿಕೊಳ್ಳಲಾಗಿದೆ. ಇದು ಒಳ್ಳೆಯ ಯತ್ನ.

12. ಲಾಯರ್ ಗಳಿಗಾಗಿ ಆಸ್ಪತ್ರೆ ಕ್ಯಾಬ್ ಇತ್ಯಾದಿ ಈಗಾಗಲೇ ಬಹು ಬಳಕೆಯಲ್ಲಿರುವ ಸೇವೆಗಳನ್ನು ಇದರಲ್ಲೂ ಒದಗಿಸಿಕೊಡಲಾಗಿದೆ. ಕೆಲ ಅನವಶ್ಯಕ ಸೇವೆಗಳನ್ನು ತೆಗೆದುಹಾಕಿದಲ್ಲಿ ಸರ್ವರ್ ಮೇಲಿನ ಭಾರ ಕಡಿಮೆಯಾಗಬಹುದು.

ಒಟ್ಟಾರೆ ಹೇಳುವುದಾದರೆ ಇದೊಂದು ಅದ್ಭುತ ಪ್ರಯತ್ನ. ದೊಡ್ಡ ವ್ಯವಸ್ಥೆಯನ್ನು ನಿರ್ಮಿಸುವಾಗ ಬರುವ ಚಿಕ್ಕ ಪುಟ್ಟ ದೋಷಗಳನ್ನು ನಿವಾರಿಸಿಕೊಂಡರೆ ಇದು ಜಗತ್ತಿಗೇ ಮಾದರಿಯಾಗಬಲ್ಲದು. ಈ ವ್ಯವಸ್ಥೆ ಆಡಳಿತ ಯಂತ್ರವನ್ನು ಹೇಗೆ ಬಲಗೊಳಿಸುತ್ತದೆ, ಸರಕಾರದ ಕೆಲಸದ ವೇಗವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಕಾಲವೇ ಹೇಳಬೇಕು. ತಂತ್ರಜ್ಞಾನವನ್ನು ಯುಕ್ತಿಯಿಂದ ಬಳಸಿಕೊಂಡರೆ ಏನೆಲ್ಲಾ ಸಾಧಿಸಲು ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿಕೊಡಲು ಇದು ಸಹಾಯಕವಾಗಿದೆ

English summary
Karnataka Mobile One service was launched by The Government of Karnataka recently. According to press release it provides 4500 services on a single app. Here is an user review by Sriharsha Salimath founder P r o E x Consultancy Pvt Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X