ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ, ಸಿಎಂ ಆದ: ಕಾಂಗ್ರೆಸ್‌ ಶಾಸಕನ ವಿಡಿಯೋ ವೈರಲ್‌

ಆಳಂದ ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ್‌ ಅವರು ಇತ್ತೀಚೆಗಷ್ಟೇ ಸರ್ಕಾರವನ್ನೇ ಅಲುಗಾಡಿಸುವ ಮಾತುಗಳನ್ನಾಡಿದ್ದರು. ವಸತಿ ಇಲಾಖೆಯಲ್ಲಿ ಸಚಿವ‌ ಜಮೀರ್‌ ಅಹ್ಮದ್‌ ಖಾನ್‌ ಅವರು ಹಣ ಕೊಟ್ಟವರಿಗಷ್ಟೇ ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಈ ಸತ್ಯ ಹೊರಬಂದರೆ ಸರ್ಕಾರವೇ ಬಿದ್ದು ಹೋಗಲಿದೆ ಎಂದಿದ್ದ ಆಡಿಯೋ ಕೂಡ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಬಿ.ಆರ್.ಪಾಟೀಲ್‌ ಅವರ ಮತ್ತೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಿಆರ್.ಪಾಟೀಲ್‌ ಏಕವಚನದಲ್ಲೇ ಮಾತನಾಡಿದ್ದಾರೆ.

ಬಿ.ಆರ್‌.ಪಾಟೀಲ್‌ ಮಾತನಾಡುವಾಗ ಈ ವಿಡಿಯೋ ಬೇರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದರಲ್ಲಿ ಪಾಟೀಲ್‌ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲೇ ಮಾತನಾಡಿದ್ದಾರೆ. ಇದು ಮಂಡ್ಯ ಜಿಲ್ಲೆಯ ಕೆಆರ್‌.ಪೇಟೆಗೆ ಬಂದಾಗ ಮಾತನಾಡಿರುವ ವಿಡಿಯೋ ಎನ್ನಲಾಗಿದೆ. ಇದರಲ್ಲಿ ಫೋನ್‌ನಲ್ಲಿ ಮಾತನಾಡುತ್ತಿರುವ ಬಿಆರ್‌ ಪಾಟೀಲ್‌ ಅವರು, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ, ಮುಖ್ಯಮಂತ್ರಿ ಆದ. ನಾನು ಸೋನಿಯಾಗಾಂಧಿ ಅವರನ್ನು ಮೊದಲಿಗೆ ಭೇಟಿ ಮಾಡಿಸಿದ್ದೇ ನಾನು. ಅವನ ಗ್ರಹಚಾರ ಚೆನ್ನಾಗಿತ್ತು. ಆತ ಸಿಎಂ ಆಗಿಬಿಟ್ಟ. ನನಗೆ ಗಾಡ್‌ ಇಲ್ಲ, ಫಾದರ್‌ ಕೂಡ ಇಲ್ಲ, ಗಾಡ್‌ಫಾದರ್‌ ಯಾರೂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

mla-br-patil-says-siddaramaiah-hit-lucky-lottery-to-become-cm-video-goes-viral

ಮೊದಲಿಗೆ ಸ್ವಪಕ್ಷದ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಸಿಎಂ ವಿರುದ್ಧವೂ ಪಾಟೀಲ್‌ ಅವರಿಗೆ ಅಸಮಾಧಾನ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತಿಗೆ ವೈರಲ್‌ ಆಗಿರುವ ವಿಡಿಯೋ ಪುಷ್ಟಿ ನೀಡುವಂತಿದೆ. ಮೊದಲಿಗೆ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದ ಆಡಿಯೋ ವೈರಲ್‌ ಆಗಿತ್ತು. ಬಳಿಕ ವೈರಲ್ ಆಗಿರುವ ಆಡಿಯೋ ನನ್ನದೇ, ನಾನು ಸತ್ಯವನ್ನೇ ಮಾತನಾಡಿದ್ದೇನೆ ಎಂದು ಪಾಟೀಲ್ ಸಮರ್ಥಿಸಿಕೊಂಡಿದ್ದರು. ಇದೀಗ ಸಿಎಂ ವಿರುದ್ಧವೂ ಅವರ ಅಸಮಾಧಾನ ಹೊರಬಿದ್ದಿದೆ.

ಅಲ್ಲದೆ ರಂದೀಪ್‌ ಸುರ್ಜೆವಾಲ ಅವರನ್ನು ಭೇಟಿ ಮಾಡಿ ಎಲ್ಲ ವಿಷಯ ತಿಳಿಸಿದ್ದೇನೆ. ನಾನು ಹೇಳಿದ್ದನ್ನ ಸುರ್ಜೇವಾಲ ಅವರು ತುಂಬಾ ಗಂಭೀರವಾಗಿ ಕೇಳಿಸಿಕೊಂಡಿದ್ದಾರೆ. ಹೈಕಮಾಂಡ್ ಮುಂದೆ ಏನು ನಿರ್ಧಾರ ತೆಗೆದುಕೊಳ್ಳುತ್ತೋ ನೋಡೋಣ ಎಂದು ಮಾತನಾಡಿದ್ದಾರೆ. ಈ ಹಿನ್ನೆಲೆ ಪಾಟೀಲ್‌ ಅವರು ಸಿದ್ದರಾಮಯ್ಯ ಅವರ ವಿರುದ್ಧವೂ ಹೈಕಮಾಂಡ್‌ ನಾಯಕನಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇತ್ತೀಚೆಗೆ ಸ್ವಪಕ್ಷದವರ ವಿರುದ್ಧವೇ ಬಿ.ಆರ್‌.ಪಾಟೀಲ್‌ ಗುಡುಗುತ್ತಿದ್ದಾರೆ. ಸತ್ಯ ಹೊರಬಂದರೆ ಸರ್ಕಾರವೇ ಅಲ್ಲಾಡುತ್ತೆ, ಬಿದ್ದು ಹೋಗುತ್ತೆ ಎಂದೂ ಅವರು ಹೇಳಿರುವುದು ಸಂಚಲನ ಸೃಷ್ಟಿಸಿದೆ.

ವೈರಲ್‌ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಹೌದು ನಾನು ಅದೃಷ್ಟಶಾಲಿ ಆಗಿರುವುದಕ್ಕೇ ಮುಖ್ಯಮಂತ್ರಿಯಾದೆ. ನಾನು ಅವರು ಒಟ್ಟಿಗೆ ಶಾಸಕರಾಗಿದ್ದು, ಅದಕ್ಕೆ ಆ ರೀತಿ ಹೇಳಿರಬಹುದು. ಅದರ ಬಗ್ಗೆ ನಾನೇನು ಮಾತನಾಡಲಿ. ಈ ಬಗ್ಗೆ ಬಿ.ಆರ್​.ಪಾಟೀಲ್ ಅವರನ್ನು ಕರೆಸಿ ಮಾತಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+