ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆ ನಾಪತ್ತೆಯಾಗಿದ್ದ ಆಭರಣ ಹುಂಡಿಯಲ್ಲಿ ಪತ್ತೆ!

|
Google Oneindia Kannada News

ಮಂಡ್ಯ, ಆಗಸ್ಟ್ 13 : ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ನಾಪತ್ತೆಯಾಗಿದ್ದ ಆಭರಣಗಳ ಪೈಕಿ 8 ಆಭರಣಗಳು ಬುಧವಾರ ಪತ್ತೆಯಾಗಿವೆ. ನಾಪತ್ತೆಯಾದ ಆಭರಣಗಳು ದೇವಾಲಯದ ಹುಂಡಿಯಲ್ಲಿ ಪ್ರತ್ಯಕ್ಷವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ದೇವಾಲಯದ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯಿತು ಈ ಸಂದರ್ಭದಲ್ಲಿ ದೇವರಿಗೆ ಧರಿಸಿದ ನಂತರ ಕಾಣೆಯಾಗಿದ್ದ ಶಂಖ, ಚಕ್ರ, ಗದಾಂಗಿ ಹಾಗೂ 5 ಪದಕಗಳು ಪತ್ತೆಯಾಗಿವೆ. ದೇವಾಲಯದಿಂದ ಕಾಣೆಯಾದ 32 ಆಭರಣಗಳ ಪಟ್ಟಿಯಲ್ಲಿದ್ದ ಎರಡು ಪದಕಗಳು, ಜತೆಗೆ, ಯಾವುದೇ ದೂರಿನಲ್ಲೂ ದಾಖಲಾಗದ ಮೂರು ಪದಕಗಳು ಸಿಕ್ಕಿವೆ. [ಮೇಲುಕೋಟೆಯಿಂದ ಆಭರಣ ನಾಪತ್ತೆ]

melukote

ದೇವಾಲಯದಿಂದ 32 ಚಿನ್ನದ ಆಭರಣಗಳು ನಾಪತ್ತೆಯಾದ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆದರೆ, ಕಾಣೆಯಾಗಿದ್ದ ಆಭರಣ ಹುಂಡಿಯಲ್ಲಿ ಹೇಗೆ? ಪತ್ತೆಯಾಯಿತು ಎಂದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. [ಮೇಲುಕೋಟೆ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ]

ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಹುಂಡಿಯಲ್ಲಿ ಆಭರಣಗಳನ್ನು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೇಲುಕೋಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಅವರು ಈ ಕುರಿತು ಮಾತನಾಡಿದ್ದು, 32 ಆಭರಣಗಳ ನಾಪತ್ತೆ ಸಂಬಂಧ ವಿಚಾರಣೆ ಪ್ರಗತಿಯಲ್ಲಿದೆ. ಹುಂಡಿಯಲ್ಲಿ ಪತ್ತೆಯಾಗಿರುವ ಆಭರಣಗಳು ದೂರಿನಲ್ಲಿರುವ ಆಭರಣಗಳೇ, ಅಲ್ಲವೇ? ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

English summary
8 gold jewellery found in Melkote temple, Mandya on Wednesday. Two years ago 32 jewellery missing from temple. Case registered in Melkote police station, investigations going on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X