ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಕರೆಂಟ್ ಕೈಕೊಡಲ್ಲ ಎಂದ ಡಿಕೆಶಿ

|
Google Oneindia Kannada News

ಬೆಂಗಳೂರು,ಮಾರ್ಚ್, 25: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಸಮಯ ಮುಗಿಯುವವರೆಗೂ ಮತ್ತು ರೈತರ ಪಂಪ್ ಸೆಟ್ ಗಳಿಗೂ 6 ರಿಂದ 7 ಗಂಟೆ ವಿದ್ಯುತ್‌ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ದು ಬೆಳಗ್ಗೆ 6 ರಿಂದ 9 ರವೆರೆಗ ವಿದ್ಯುತ್‌ ಕಡಿತ ಮಾಡುವುದಿಲ್ಲ. ಕುಡಿಯುವ ನೀರಿನ ಸಂಪರ್ಕಕ್ಕೆ ತಕ್ಷಣ ವಿದ್ಯುತ್‌ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.[ಹೆಸ್ಕಾಂ ಕರೆಂಟ್ ಬಿಲ್ ಕಟ್ಟಲು ಆನ್‌ಲೈನ್ ವ್ಯವಸ್ಥೆ ಗತಿಯಿಲ್ಲ!]

karnataka

ವಿಧಾನಸಭೆಯಲ್ಲಿ ಮಾತನಾಡಿದ ಶಿವಕುಮಾರ್, ಪರೀಕ್ಷಾ ಸಮಯದಲ್ಲಿ ಬೆಂಗಳೂರಿನ ಕೆಲ ಭಾಗಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಅಡಚಣೆಯಾಗುತ್ತಿದೆ. ಅದನ್ನೂ ಸರಿಪಡಿಸಲು ಸೂಚಿಸಲಾಗಿದೆ. ಉಳಿದಂತೆ ಎಲ್ಲಿಯೂ ವಿದ್ಯುತ್‌ ಕಡಿತ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಜೋಗದಲ್ಲಿ ಸುಟ್ಟುಹೋಗಿದ್ದವಿದ್ಯುತ್ ಉತ್ಪಾದನಾ ಘಟಕ ಪುನರ್ ಆರಂಭವಾಗಿದೆ. ಶರಾವತಿ ಜಲ ವಿದ್ಯುತ್‌ ಘಟಕ, ಬಳ್ಳಾರಿ ಥರ್ಮಲ್‌ ಘಟಕಗಳಲ್ಲಿನ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗಿದ್ದು ಜೂನ್‌ ವೇಳೆಗೆ ನಮ್ಮ ನಿರೀಕ್ಷೆಯಂತೆ ವಿದ್ಯುತ್‌ ಉತ್ಪಾದನೆಯಾಗಲಿದೆ ಎಂದು ಶಿವಕುಮಾರ್ ತಿಳಿಸಿದರು.[ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]

ಸೋಲಾರ್‌ ವಿದ್ಯುತ್‌ ಉತ್ಪಾದನೆ ವಿಚಾರದಲ್ಲಿ ನಾವು ಇತರರಿಗಿಂತ ಮುಂದೆ ಇದ್ದೇವೆ. ವಿರೋಧ ಪಕ್ಷಗಳು ಜನಪರವಾಗಿದ್ದರೆ ಅದನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ. ಜನರ ಹಿತ ಕಾಯಲು ನಾವು ಸದಾ ಬದ್ಧರಿದ್ದೇವೆ ಎಂದು ಶಿವಕುಮಾರ್ ಹೇಳಿದರು.

English summary
Energy Minister D K Shivakumar has essentially arranged research timetable for learners planning for exam - 6 am to 10 pm - to 6 pm and 9 am by aiming energy not to lower over these hours. Responding to a unique discussion within the Legislative Assembly around the drought situation and energy scarcity while in the condition, Shivakumar mentioned he had focused representatives of the five power supply corporations that there must be no power-cuts during "study hours" of students equally in metropolitan and rural areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X