ಆಕ್ರಮಣಕಾರಿಯಾಗಿ ಮಾತನಾಡಿದ ಮೋದಿ ದಿಢೀರ್ ಕದನ ವಿರಾಮಕ್ಕೆ ಒಪ್ಪಿದ್ದು ಅಚ್ಚರಿ ಎಂದ ಕರ್ನಾಟಕದ ಪ್ರಭಾವಿ ಸಚಿವ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಸಂಘರ್ಷವು ಮುಕ್ತಾಯವಾಗುತ್ತಿದೆ ಎಂದು ನಿಟ್ಟುಸಿರು ಬಿಡುವ ಸಂದರ್ಭದಲ್ಲಿಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರು ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕಾಂಗ್ರೆಸ್ ಕೆಲವು ನಾಯಕರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಕರ್ನಾಟಕದ ಪ್ರಭಾವಿ ಸಚಿವರೊಬ್ಬರು ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಡಳಿತರೂಢ ಬಿಜೆಪಿ ಪಕ್ಷದ ನಾಯಕರು ಆಕ್ರಮಣಕಾರಿಯಾಗಿ ಮಾತನಾಡಿದ್ದರು. ಈ ಎಲ್ಲಾ ಆಕ್ರಮಣಕಾರಿ ಮಾತುಕತೆಗಳ ನಂತರ ದಿಢೀರ್ ಎಂದು ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವುದು ಆಶ್ಚರ್ಯಕರವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯವನ್ನು ಘೋಷಿಸಿರುವುದು ಬೇಸರದ ಸಂಗತಿ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ #PahalgamAttack ದಾಳಿಯ ಭಯೋತ್ಪಾದಕರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಗಳು ಯಾವುದೇ ನಿರ್ಣಾಯಕ ಫಲಿತಾಂಶಗಳನ್ನು ತಲುಪಿಲ್ಲ ಅಥವಾ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು #IMF ಪಾಕಿಸ್ತಾನವನ್ನು ರಕ್ಷಿಸುತ್ತಿದೆ ಮತ್ತು ಭಾರತದ ಕ್ರಮಗಳಿಗೆ ಯಾವುದೇ ಬಲವಾದ ಅಂತರರಾಷ್ಟ್ರೀಯ ಬೆಂಬಲವಿಲ್ಲ ಎಂದು ಇದು ತೋರಿಸುತ್ತದೆ. ನಮ್ಮ ನೆರೆಹೊರೆಯವರು ಮೊದಲು (#NeighbourhoodFirst) ಎನ್ನುವ ನೀತಿಯು ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಅಲ್ಲದೇ ಪಾಕಿಸ್ತಾನ (#Pakistan) ಮತ್ತು ಚೀನಾ (#China) ನಮ್ಮ ವಿರುದ್ಧ ಒಂದಾಗಿವೆ. ವ್ಯೂಹವನ್ನು ರಚಿಸಿಕೊಂಡಿವೆ. ಇನ್ನು ನೆರೆಯ ಬಾಂಗ್ಲದೇಶ (#Bangladesh) ದೊಂದಿಗೆ ನಮ್ಮ ಸಂಬಂಧವು ಅತ್ಯಂತ ಕೆಟ್ಟದಾಗಿದೆ. ನೇಪಾಳ (#Nepal)ಈಗ ನಮಗೆ ಯಾವುದೇ ಸ್ನೇಹಪರ ಮಿತ್ರ ರಾಷ್ಟ್ರವಾಗಿಲ್ಲ. ಚೀನಾಕ್ಕೆ ಹೋಲಿಸಿದರೆ ಭೂತಾನ್ ಸಹ (#Bhutan) ಕೂಡ ತಟಸ್ಥವಾಗಿದೆ. ಚರ್ಚಿಸಬೇಕಾದ ಹಲವು ವಿಷಯಗಳಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸಂಸತ್ತಿನ ಅಧಿವೇಶನವನ್ನು ಕರೆಯುವುದು. ಎಲ್ಲಾ ವಿರೋಧ ಪಕ್ಷಗಳೊಂದಿಗೆ ಮಾತನಾಡುವುದು ಮತ್ತು ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನಮಗೆ ಈಗ ಅಗತ್ಯವಿದೆ ಎಂದಿದ್ದಾರೆ.

ಅಮೆರಿಕ ಮಧ್ಯಪ್ರವೇಶಕ್ಕೆ ವಿರೋಧ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ ಮಧ್ಯಪ್ರವೇಶ ಮಾಡಿರುವುದಕ್ಕೆ ಪರ - ವಿರೋಧ ವ್ಯಕ್ತವಾಗಿದೆ. ಅಮೆರಿಕಗೆ ಒಂದು ನೀತಿ ಭಾರತಕ್ಕೆ ಒಂದು ನೀತಿನಾ ಅಂತ ನಟ ಪ್ರಕಾಶ್ ರಾಜ್ ಅವರು ಸಹ ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಅಮೆರಿಕ ಮಾತ್ರ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬಹುದು. ಆದರೆ, ಇದೇ ಕೆಲಸವನ್ನು ಭಾರತ ಮಾಡಿದರೆ ತಪ್ಪೇ ಅಂತ ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications