Milk Price Rise: ಟೊಮ್ಯಾಟೊ ನಂತರ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಹಾಲು- ಎಷ್ಟು ಬೆಲೆ ಏರಿಕೆ ತಿಳಿಯಿರಿ

ನವದೆಹಲಿ, ಜುಲೈ 25: ಟೊಮೊಟೊ, ಹಸಿರು ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಹಾಲಿನ ದರ ಏರಿಕೆಯು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಹಾಲಿನ ದರವು ಶೇ.5ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

1 ಲೀಟರ್ ಹಾಲಿನ ದರ ಎಷ್ಟು?

ಅಮುಲ್ ಹಾಲಿನ ಲೀಟರ್‌ಗೆ 66 ರೂ
ಮದರ್ ಡೈರಿ ಫುಲ್ ಕ್ರೀಮ್ ಪ್ರತಿ ಲೀಟರ್‌ಗೆ 66 ರೂ
ನಂದಿನಿ ಸ್ಪೆಷಲ್‌ ಹಾಲು ಲೀಟರ್‌ಗೆ 41 ರೂ
ಸುಧಾ ಫುಲ್ ಕ್ರೀಮ್ ಹಾಲು ಲೀಟರ್‌ಗೆ 62 ರೂ
ಸಾಂಚಿ ಫುಲ್ ಕ್ರೀಮ್ ಹಾಲು ಲೀಟರ್‌ಗೆ 63 ರೂ

Milk Price Rise: After tomatoes, dairy products to burn consumer’s pocket

ಬೆಲೆ ಏರಿಕೆ ಹಿಂದಿನ ಕಾರಣಗಳು

ಕಳೆದ ಮೂರು ವರ್ಷಗಳಲ್ಲಿ, ಪೂರೈಕೆಗೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿದೆ. ಜಾನುವಾರುಗಳಲ್ಲಿ ಚರ್ಮದ ಕಾಯಿಲೆ ಹೆಚ್ಚುತ್ತಿದೆ. ಇದರಿಂದಾಗಿ ಹಾಲಿನ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.

ಇದರ ಪರಿಣಾಮವಾಗಿ ಕಳೆದ ಮೂರು ವರ್ಷಗಳಲ್ಲಿ ಹಾಲಿನ ದರ ಶೇ.22ರಷ್ಟು ಏರಿಕೆಯಾಗಿದೆ. ವಾರ್ಷಿಕ ಲೆಕ್ಕದಲ್ಲಿ, ಕಳೆದ ಒಂದು ವರ್ಷದಲ್ಲಿ ಹಾಲಿನ ಬೆಲೆ ಲೀಟರ್‌ಗೆ 10 ರೂ. ಏರಿಕೆಯಾಗಿದೆ. ಮನಿ9 ಪ್ರಕಾರ ಕಳೆದ 10 ವರ್ಷಗಳಲ್ಲಿ, ಹಾಲಿನ ಬೆಲೆ 2ರಷ್ಟು ದುಪ್ಪಟ್ಟಾಗಿದೆ.

ಹವಾಮಾನ ಬದಲಾವಣೆಯ ಪರಿಣಾಮವು ಜಾನುವಾರುಗಳ ಆಹಾರದ ಬೆಲೆಯನ್ನು ಹೆಚ್ಚಿಸಿದೆ. ಎಣ್ಣೆ ತೆಗೆದ ಹೊಟ್ಟು, ಜಾನುವಾರುಗಳ ಮೇವಿನ ದರವು ಏರಿಕೆಯಾಗಿದೆ. ಈ ಹಿಂದೆ ಜಾನುವಾರುಗಳ ಮೇವು ಪ್ರತಿ ಟನ್‌ಗೆ 15,000 ರೂ.ಗೆ ಸಿಗುತ್ತಿತ್ತು. ಈಗ 18.000 ರಿಂದ 18500 ರೂ. ಆಗಿದೆ.

Milk Price Rise: After tomatoes, dairy products to burn consumer’s pocket

ಜಾನುವಾರುಗಳ ಮತ್ತೊಂದು ಪ್ರಮುಖ ಆಹಾರವಾಗಿರುವ ಜೋಳದ ಬೆಲೆ ಈಗ ಟನ್‌ಗೆ 24,5000 ರೂ. ಆಗಿದೆ. ಸದ್ಯ ರಾಗಿ ಬೆಲೆಯೂ ಗಗನಕ್ಕೇರುತ್ತಿದೆ.

ಜೂನ್ ಅಂತ್ಯದ ವೇಳೆಗೆ ಮತ್ತು ಜುಲೈನಲ್ಲಿ ಟೊಮೆಟೊ ಬೆಲೆಗಳು ಶೇಕಡಾ 400 ರಷ್ಟು ಏರಿಕೆ ಕಂಡಿದೆ. ಈ ಮೊದಲು, ದೀಪಾವಳಿಯ ಸಮಯದಲ್ಲಿ ಹಾಲಿನ ಬೆಲೆಗಳು ಕಡಿಮೆಯಾಗುವ ನಿರೀಕ್ಷೆ ಇದೆ.

ನಂದಿನಿ ಹಾಲಿನ ದರದಲ್ಲಿ ಹೆಚ್ಚಳ

ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ನಂದಿನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ.ಗಳಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಬೇಡಿಕೆಗೆ ಕರ್ನಾಟಕ ಸರ್ಕಾರವು ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಇದು ಮೊಸರು ಮುಂತಾದ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+