3 ರಿಂದ 4 ರೂ. ಹಾಲಿನ ದರ ಹೆಚ್ಚಳಕ್ಕೆ ನಡೆದಿದೆ ಮಾತುಕತೆ

ಬೆಂಗಳೂರು, ಮಾ. 29 : ಹಾಲಿನ ದರವನ್ನು ಏರಿಕೆ ಮಾಡಲು ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಳದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಲೀಟರ್ ಹಾಲಿನ ದರವನ್ನು 3 ರಿಂದ 4 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ.

ಕೆಎಂಎಫ್ ಮೂರು ತಿಂಗಳ ಹಿಂದೆಯೇ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ ಹೆಚ್ಚಳದ ನಿರ್ಧಾರವನ್ನು ತೆಗೆದುಕೊಂಡು ಸರ್ಕಾರಕ್ಕೆ ಕಳಿಸಿದೆ. ಪಶುಸಂಗೋಪನಾ ಇಲಾಖೆ ಎಲ್ಲಾ ಒಕ್ಕೂಟಗಳಿಗೂ ದರ ಹೆಚ್ಚಳವಾದರೆ ರೈತರಿಗೆ ಎಷ್ಟು ಲಾಭ ದೊರೆಯಲಿದೆ? ಎಂಬ ಮಾಹಿತಿ ಕೇಳಿದೆ. [ಹಾಲಿನ ದರ ಹೆಚ್ಚಳ ಸಾಧ್ಯತೆ]

Milk

ಲೀಟರ್ ಹಾಲಿಗೆ 2 ರಿಂದ 3 ರೂ. ಹೆಚ್ಚಳ ಮಾಡಿದರೆ ಅದರಲ್ಲಿ ನೀವು ರೈತರಿಗೆ ಎಷ್ಟು ಹಂಚಿಕೆ ಮಾಡುತ್ತೀರಿ? ಎಂದು ಎಲ್ಲಾ ಹಾಲು ಒಕ್ಕೂಟಗಳಿಂದ ಇಲಾಖೆ ಮಾಹಿತಿ ಕೇಳಿದ್ದು, ಕೆಲವು ಒಕ್ಕೂಟಗಳು ವರದಿ ನೀಡಿವೆ. ಸೋಮವಾರ ಉಳಿದ ಒಕ್ಕೂಟಗಳು ಸರ್ಕಾರಕ್ಕೆ ಮಾಹಿತಿಯನ್ನು ಕಳಿಸಲಿವೆ. [ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಅಮಾನತು ವಾಪಸ್!]

ಎಲ್ಲಾ ಒಕ್ಕೂಟಗಳು ನೀಡುವ ವರದಿ ಆಧರಿಸಿ ಹಾಲಿನ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಅವರು ಈಗಾಗಲೇ ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದಾರೆ.

ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಕುರಿತು ಮಾಹಿತಿ ನೀಡಿದ್ದು, ಹಾಲಿನ ದರ ಏರಿಕೆ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಕಳಿಸಿದೆ. ವಿವರ ಕೇಳಿ ಒಕ್ಕೂಟಗಳಿಗೆ ಮರಳಿ ಪತ್ರ ಬರೆಯಲಾಗಿದೆ. ಅವರಿಂದ ಸೂಕ್ತ ವಿವರಣೆ ಬಂದ ನಂತರ ಹಾಲಿನ ದರ ಹೆಚ್ಚಳ ಅನಿವಾರ್ಯವೇ ಎಂದು ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ.

2014ರ ಸೆ.11ರಂದು ಕೆಎಂಎಫ್ ಹಾಲಿನ ದರವನ್ನು ಏರಿಕೆ ಮಾಡಿತ್ತು. ಎಲ್ಲಾ ರೀತಿಯ ಹಾಲಿನ ದರವನ್ನು 2 ರೂ. ಮತ್ತು ಅರ್ಧ ಲೀಟರ್ ಮೊಸರಿನ ಬೆಲೆಯನ್ನು 1 ರೂ. ಹೆಚ್ಚಳ ಮಾಡಲಾಗಿತ್ತು. ಸದ್ಯ 3 ರಿಂದ 4 ರೂ. ಹೆಚ್ಚಳದ ಪ್ರಸ್ತಾವನೆ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+