• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಲುಕೋಟೆಗೆ ಕೇಳಿದ್ದು 500 ಕೋಟಿ ರು ಸಿಕ್ಕಿದ್ದು 20 ಕೋಟಿ

By Mahesh
|

ಮೇಲುಕೋಟೆ, ಅ.06: ವೈಷ್ಣವರ ಪವಿತ್ರಕ್ಷೇತ್ರ ಮೇಲುಕೋಟೆ ಅಭಿವೃದ್ಧಿ ಹಾಗೂ ವಿಶಿಷ್ಟಾದೈತ ಪ್ರತಿಪಾದಕ ಶ್ರೀರಾಮಾನುಜಾಚಾರ್ಯರ ಜಯಂತಿ ಆಚರಣೆಗಾಗಿ 500 ಕೋಟಿ ರು ಕೇಳಿದ್ದ ಜಿಲ್ಲಾಡಳಿತಕ್ಕೆ 20ಕೋಟಿ ರು ಮಾತ್ರ ಮಂಜೂರಾಗಿದೆ.

ಇತಿಹಾಸ ಪ್ರಸಿದ್ಧ ಕ್ಷೇತ್ರ ಮೇಲುಕೋಟೆಯಲ್ಲಿ 20 ಕೋಟಿ ರು ವೆಚ್ಚದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದ್ದಾರೆ. ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಡಾ.ಅಜಯ್ ನಾಗಭೂಷಣ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಈ ವಿಷಯ ಹಂಚಿಕೊಂಡಿದ್ದಾರೆ.

ಮೇಲುಕೋಟೆ ಅಭಿವೃದ್ಧಿ ಕಾರ್ಯ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಇಪ್ಪತ್ತು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಯ ನೀಲನಕ್ಷೆ ತಯಾರಿಸಿ ಅಕ್ಟೋಬರ್ 20 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುತ್ತದೆ. ಅನುದಾನದ ಮೊತ್ತ ಶೀಘ್ರವೇ ಬಿಡುಗಡೆ ಮಾಡಿಸಲಾಗುತ್ತದೆ ಎಂದರು. [ಮೇಲುಕೋಟೆ ವೈರಮುಡಿ ಕ್ಷೇತ್ರ ಪುರಾಣ]

ವಿವಿಧ ಯೋಜನೆ: ವಸತಿಸಮುಚ್ಚಯಗಳ ನಿರ್ಮಾಣ, ಮೇಲುಕೋಟೆ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು, ಒಳಚರಂಡಿ ವ್ಯವಸ್ಥೆ, ವ್ಯವಸ್ಥಿತವಾದ ಅಂಗಡಿಗಳ ನಿರ್ಮಾಣ, ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪ್ರವಾಸಿ ಮಾಹಿತಿ ಕೇಂದ್ರ ಸ್ಥಾಪನೆ, ಕಲ್ಯಾಣಿ ಮತ್ತು ದೇವಸ್ಥಾನದ ಬಳಿ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ ಅಳವಡಿಕೆ, ಅನ್ನದಾನ ಭವನ, ಹೈಟೆಕ್ ಶೌಚಾಲಯಗಳ ನಿರ್ಮಾಣ, ಕಲ್ಯಾಣಿ ನೀರಿನಲ್ಲಿ ಸುರಕ್ಷತಾ ತಂತಿ ಅಳವಡಿಕೆ, ಯೋಗನರಸಿಂಹಸ್ವಾಮಿ ಬೆಟ್ಟದ ರಾಜಗೋಪುರ ನವೀಕರಣ, ಮೆಟ್ಟಿಲುಗಳ ದುರಸ್ತಿ, ಹಾಗೂ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ, ಹೇಮಾವತಿ ವಸತಿಗೃಹಗಳನ್ನು ವಶಕ್ಕೆ ಪಡೆದು ಯಾತ್ರಿ ನಿವಾಸ ಮಾಡುವುದು ಪ್ರಮುಖ ಯೋಜನೆಗಳಾಗಿವೆ. [ರಾಮಾನುಜಾಚಾರ್ಯ 1000ನೇ ಜಯಂತಿಗೆ 500 ಕೋಟಿ ರು]

ಸಹಸ್ರಮಾನೋತ್ಸವ : 2017 ರಲ್ಲಿ ನಡೆಯುವ ಆಚಾರ್ಯ ರಾಮಾನುಜರ ಸಹಸ್ರಮಾನೋತ್ಸವನ್ನು ಅದ್ದೂರಿಯಾಗಿ ನಡೆಸಲು ಮಂಡ್ಯ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಾಥಮಿಕ ಅಭಿವೃದ್ಧಿಯ ಜೊತೆಗೆ ಹಲವಾರು ವಿಶೇಷ ಯೋಜನೆಗಳನ್ನು ಸಹ ಹಮ್ಮಿಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕೂ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ ಈ ಬಗ್ಗೆ ಮುಜರಾಯಿ ಮಂತ್ರಿ ಹಾಗೂ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿದ್ದಾರೆ ಎಂದರು.

ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ನಾಗರಾಜು, ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್, ಪ್ರವಾಸೋದ್ಯಮ ಇಲಾಖೆಯ ಮಂಡ್ಯ ಸಹಾಯಕ ನಿರ್ದೇಶಕ ಹರೀಶ್,ಪಾಂಡವಪುರ ತಹಶೀಲ್ದಾರ್ ಶಂಕರಪ್ಪ, ಮಂಡ್ಯ ಚುನಾವಣಾ ತಹಸೀಲ್ದಾರ್ ದಿನೇಶ್ ಚಂದ್ರ, ಸಾಹಿತಿ ತೈಲೂರು ವೆಂಕಟಕೃಷ್ಣ, ಮೇಲುಕೋಟೆ ಎಸ್.ಐ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಪಿಡಿಒ ಶೈಲಜಾ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mandya District Administration and Melukote MLA KS Puttanaiah sought funds from Karnataka Government to celebrate the 1,000th birth anniversary of Sri Ramanujacharya in 2017. A development proposal will be submitted soon, Government has promised Rs 20 cr for the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more