ಹಾವೇರಿ: ₹110 ಕೋಟಿಯ UHT ಹಾಲು- ಸ್ಯಾಚೆಟ್ ಪ್ಯಾಕಿಂಗ್ ಘಟಕಕ್ಕೆ ಚಾಲನೆ, ಜಿಲ್ಲೆಯ ರೈತರ ಕನಸ ನನಸು: ಬೊಮ್ಮಾಯಿ

ಹಾವೇರಿ, ಮಾರ್ಚ್ 10: ಯಾವುದಕ್ಕೆ ನಾವು ಹೋರಾಟ ಮಾಡಿದ್ದೇವೋ ಆ ಕಾರಣವು ಸಾಕಾರಗೊಂಡಿದೆ. ರೈತರ ಆಶೋತ್ತರಗಳನ್ನು ಈಡೇರಿಸಿದ್ದರ ಬಗ್ಗೆ ಸಮಾಧಾನವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮತ್ತು ಎಸ್‌ಕೆಎ ಪುಡ್ಸ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಇವರ ವತಿಯಿಂದ ಜಂಗಮನಕೊಪ್ಪದಲ್ಲಿ ಆಯೋಜಿಸಿದ್ದ 110 ಕೋಟಿ ರೂಪಾಯಿ ವೆಚ್ಚದ ''ಯುಎಚ್‌ಟಿ ಹಾಲು ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕ'ವನ್ನು ಶುಕ್ರವಾರ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

Mega Dairy: District of Haveri people dreams was come true, CM Bommai

ನಮ್ಮ ಜಿಲ್ಲೆಯಲ್ಲಿ ಮೆಗಾಡೈರಿ ಘಟಕವನ್ನು ಸ್ಥಾಪಿಸಬೇಕು ಎಂಬುದು ಹಾವೇರಿ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿತ್ತು, ಕನಸಾಗಿತ್ತು. ಇದೀಗ ಆ ಕನಸು ನನಸಾಗಿದೆ. ಈ ಬಗ್ಗೆ ಹಾಲು ಉತ್ಪಾದಕ ರೈತರ ಆಶೋತ್ತರಗಳನ್ನು ಈಡೇರಿಸಿದ ಸಮಾಧಾನವಿದೆ. ನಾವು ಯಾವುದಕ್ಕೆ ಹೋರಾಟ ಮಾಡಿದ್ದೇವೋ ಆ ಕಾರಣವನ್ನು ಸಾಕಾರಗೊಳಿಸುವ ಸೌಭಾಗ್ಯ ನಮಗೆ ದೊರೆತಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಅವರು ಹೇಳಿದರು.

ಬಿಜೆಪಿಗು ಮೊದಲಿದ್ದ ಸರ್ಕಾರಗಳಲ್ಲಿ ಈಡೇರಿಸಲು ಆಗದಂತಹ ಅವಕಾಶ ನನಗೆ ಸಿಕ್ಕಿದೆ. ಹೀಗಾಗಿ ಇದನ್ನು ಮಾಡಲೇ ಬೇಕು ಎಂಬ ದೃಢ ನಿರ್ಧಾರ ಮಾಡಿದೆವು. ಉದ್ದೇಶದಂತೆ ಇಂದು ಮೆಗಾಡೈರಿ, ಯುಎಚ್‌ಟಿ ಹಾಗೂ ಸ್ಯಾಚೆಟ್ ಘಟಕಗಳು ಪ್ರಾರಂಭವಾಗಿವೆ. ಇದರ ನನಗೂ ಮತ್ತು ಜಿಲ್ಲೆಯ ಜನರ ಸಂತಸ ಹೆಚ್ಚಿಸಿದೆ ಎಂದರು.

ಜಿಲ್ಲೆಯಲ್ಲಿ ಲಕ್ಷ ಲೀಟರ್ ಹಾಲು ಉತ್ಪಾದನೆ

ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಲೀಟರ್ ಗೂ ಮೀರಿ ಹಾಲು ಉತ್ಪಾದನೆ ಆಗುತ್ತಿದೆ. ಡೈರಿ ಮಾಡುವ ಮೊದಲು 75 ಲಕ್ಷ ಲೀಟರ್ ಇತ್ತು. ಘಟಕ ಸಂಪೂರ್ಣವಾಗಿ ಕಾರ್ಯಗತವಾದರೆ ನಮ್ಮದೇ ಪ್ಯಾಕೇಜಿಂಗ್ ಹಾಗೂ ಮಾರ್ಕೆಟಿಂಗ್ ಮಾಡಿದಾಗ ಇನ್ನೂ ಹೆಚ್ಚಿನ ಹಾಲು ಕೊಳ್ಳಬಹುದು ಮತ್ತು ರೈತರಿಗೆ ಹೆಚ್ಚಿನ ಸೌಲಭ್ಯ ಗಳನ್ನು ನೀಡಬಹುದು ಎಂದು ಹೇಳಿದರು.

Mega Dairy: District of Haveri people dreams was come true, CM Bommai

ಹಾವೇರಿ ಜಿಲ್ಲೆಯಲ್ಲಿ ಈ ಮುಂಚೆ ಟೆಟ್ರಾ ಪ್ಯಾಕ್ ಯುಹೆಚ್ ಟಿ ಹಾಲು ಸ್ಥಾವರ ಹಾಗೂ ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕಕ್ಕೂ ಅಡಿಗಲ್ಲು ಹಾಕಲಾಗಿತ್ತು. ರೈತರಲ್ಲಿ ಅದರ ಉದ್ಘಾಟನೆಯ ಕಾತರತೆ ಹೆಚ್ಚಿತ್ತು. ಟೆಟ್ರಾ ಪ್ಯಾಕ್‌ನ ಯುಹೆಚ್ ಟಿ ಹಾಲು ಸ್ಥಾವರದಲ್ಲಿ ಸುಮಾರು 80 ಸಾವಿರ ದಿಂದ 1 ಲಕ್ಷದವರೆಗೂ ಸಾಮರ್ಥ್ಯವಿದೆ. ಸ್ಯಾಚೆಟ್ ಹಾಲು ಘಟಕದ ಸಾಮರ್ಥ್ಯ 25 ರಿಂದ 50 ಸಾವಿರ ಲೀಟರ್‌ವರೆಗೆ ಇದೆ ಎಂದು ಬೊಮ್ಮಾಯಿ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+