ವೈದ್ಯಕೀಯ ಕೋರ್ಸ್ ಶುಲ್ಕ ಹೆಚ್ಚಳದ ಆದೇಶ ವಾಪಸ್

ಬೆಂಗಳೂರು, ಏ. 23 : ವೈದ್ಯಕೀಯ, ದಂತ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ವಾಸಪ್ ಪಡೆದಿದೆ. ಸರ್ಕಾರದ ಆದೇಶಕ್ಕೂ ಶುಲ್ಕ ಏರಿಕೆಗೂ ವ್ಯತ್ಯಾಸವಿರುವ ಹಿನ್ನಲೆಯಲ್ಲಿ ನಿರ್ಧಾರವನ್ನು ವಾಪಸ್ ಪಡೆಯಲಾಗಿದೆ.

ಶೇ 10 ರಷ್ಟು ಶುಲ್ಕ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಅದರಂತೆ ಏ.15ರಂದು ಶುಲ್ಕ ಹೆಚ್ಚಳದ ಆದೇಶ ಪ್ರಕಟವಾಗಿತ್ತು. ಆದರೆ, ಈ ಆದೇಶದಲ್ಲಿ ಗರಿಷ್ಟ ಶೇ 42ರಷ್ಟು ಶುಲ್ಕ ಹೆಚ್ಚಳವಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.[ಶುಲ್ಕ ಎಷ್ಟು ಹೆಚ್ಚಳವಾಗಿತ್ತು?]

Sharan Prakash Patil

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಸರ್ಕಾರ ಒಪ್ಪಿಗೆ ನೀಡಿದ ಶುಲ್ಕ ಹೆಚ್ಚಳಕ್ಕೂ, ಆಗಿರುವ ಶುಲ್ಕ ಏರಿಕೆಗೂ ವ್ಯತ್ಯಾಸವಿದೆ. ಆದ್ದರಿಂದ ಆದೇಶ ವಾಪಸ್ ಪಡೆಯುವಂತೆ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದರು. ಅದರಂತೆ ಆದೇಶ ವಾಪಸ್ ಆಗಿದೆ. [ರಾಜ್ಯದ ಐದು ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ]

ಬರಲಿದೆ ಹೊಸ ಆದೇಶ : ಶೀಘ್ರದಲ್ಲಿಯೇ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಹೊಸ ಶುಲ್ಕವನ್ನು ನಿಗದಿಪಡಿಸುವ ಸಂಬಂಧ ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಶುಲ್ಕದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದ್ದರಿಂದ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+