ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ; ದರಪಟ್ಟಿ
ಬೆಂಗಳೂರು, ಜೂನ್ 22; ಕಸ್ತೂರ ಬಾ ಆಸ್ಪತ್ರೆ ಮಣಿಪಾಲ್ 'ಮಣಿಪಾಲ್ ಆರೋಗ್ಯ ಕಾರ್ಡ್ 2021' ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕಾರ್ಡ್ ಹೊಂದಿರುವ ಜನರಿಗೆ ಚೆಕ್ಅಪ್, ಚಿಕಿತ್ಸೆ ಸೇರಿದಂತೆ ವಿವಿಧ ಸೇವೆಯಲ್ಲಿ ರಿಯಾಯಿತಿ ಸಿಗಲಿದೆ.
ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯಲು ಯಾವುದೇ ವಯೋಮಿತಿ ಇಲ್ಲ. ಈಗಾಗಲೇ ಸುಮಾರು 3.6 ಲಕ್ಷ ಜನರು ಆರೋಗ್ಯ ಕಾರ್ಡ್ ಅಥವ ಮಣಿಪಾಲ್ ಕಾರ್ಡ್ ಪಡೆದಿದ್ದಾರೆ.
ಮೊದಲು ಈ ಕಾರ್ಡ್ ಸೇವೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಈಗ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ 12 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿದೆ. ಕೇರಳ ಮತ್ತು ಗೋವಾ ರಾಜ್ಯಗಳಲ್ಲೂ ಈ ಸೇವೆ ಲಭ್ಯವಿದೆ.

ಕಾರ್ಡ್ಗಳ ದರ ಪಟ್ಟಿ; 1 ವರ್ಷದ ಯೋಜನೆ ಸದಸ್ಯತ್ವ ಪಡೆಯಲು ಒಬ್ಬರು 300 ರೂ. ಪಾವತಿ ಮಾಡಬೇಕು. ಕೌಟುಂಬಿಕ ಕಾರ್ಡ್ ಪಡೆದರೆ ಕಾರ್ಡ್ ಹೊಂದಿರುವ ವ್ಯಕ್ತಿ, 25 ವರ್ಷದ ಮಕ್ಕಳಿಗೆ 600 ರೂ. ಹೆಚ್ಚುವರಿ ಪಾವತಿಸಬೇಕು. ಕೌಟುಂಬಿಕ ಪ್ಲಸ್ ಯೋಜನೆಗೆ 750 ರೂ. ದರವಿದೆ.
2 ವರ್ಷದ ಯೋಜನೆಯನ್ನು ಪಡೆಯಲು 500 ರೂ., ಕುಟುಂಬಕ್ಕೆ 800 ರೂ., ಕೌಟುಂಬಿಕ ಪ್ಲಸ್ ಯೋಜನೆಗೆ 950 ರೂ. ವೆಚ್ಚವಿದೆ. ಕಾರ್ಡ್ ಪಡೆದರೆ ಹೊರ ರೋಗಿಗಳಿಗೂ ಸಹ ಸಹಾಯಕವಾಗಲಿದೆ.
ಕಾರ್ಡ್ ಪಡೆದರೆ ವೈದ್ಯರ ಸಮಾಲೋಚನೆ ಶೇ 50, ಲ್ಯಾಬ್ಗೆ ಪರೀಕ್ಷೆಗೆ ಶೇ 30, ಸಿಟಿ/ ಎಂಆರ್ಐ/ ಅಲ್ಟ್ರಾ ಸೌಂಡ್ ಪರೀಕ್ಷೆಗೆ/ ಮಧುಮೇಹಕ್ಕೆ ಶೇ 20ರಷ್ಟು ರಿಯಾಯಿತಿ ಸಿಗಲಿದೆ. ಮೆಡಿಕಲ್ ಶಾಪ್ಗಳಲ್ಲಿ ಶೇ 12ರಷ್ಟು ರಿಯಾಯಿತಿ ಇದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ಗೆ ಭೇಟಿ ನೀಡಿ https://manipalhealthcard.com/
-
ಬೇಸಿಗೆಯ ಸಂಜೀವಿನಿ ಈ ನಿಂಬೆ ಹಣ್ಣು: ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಅಪಾರ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
ಸರ್ಕಾರಿ ಆಸ್ಪತ್ರೆಗಳಲ್ಲಿ ನಾಳೆ OPD ಸೇವೆ ಬಂದ್? ವೈದ್ಯರ ರಾಜ್ಯವ್ಯಾಪಿ ಪ್ರತಿಭಟನೆ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ











Click it and Unblock the Notifications