Get Updates
Get notified of breaking news, exclusive insights, and must-see stories!

ಮಂಗಳೂರು ಬಾಂಬ್ ಪ್ರಕರಣ ಮತ್ತು ಕುಮಾರಸ್ವಾಮಿಯ 'ಮಿಣಿಮಿಣಿ' ಪದ ಟ್ರೋಲ್ ಆದ ಕಥೆ

ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ಎಷ್ಟು ಎಚ್ಚರ ವಹಿಸಿದರೂ ಕಮ್ಮಿಯೇ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಬಾಯಿತಪ್ಪಿನಿಂದ ಅಥವಾ ಜನರನ್ನು ಓಲೈಸಲು ಅವರಾಡುವ ಮಾತುಗಳು ಕೆಲವೊಮ್ಮೆ ಯಾವಮಟ್ಟಿಗೆ ಟ್ರೋಲ್ ಆಗುತ್ತವೆ ಎನ್ನುವುದಕ್ಕೆ ಕುಮಾರಸ್ವಾಮಿಗಿಂತ ಇನ್ನೊಂದು ಉದಾಹರಣೆ ಸಿಗಲಾರದು.

ಕಳೆದ ಲೋಕಸಭಾ ಚುನಾವಣೆಯ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪಾ' ಎನ್ನುವ ಕುಮಾರಸ್ವಾಮಿಯವರ ಹೇಳಿಕೆ, ಅಂತರಾಷ್ಟ್ರೀಯ ಮಟ್ಟದಲ್ಲೂ ಟ್ರೋಲ್ ಆಗಿತ್ತು. ಇದು ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಗೂ ಭಾರೀ ಮುಜುಗರವನ್ನೂ ತಂದೊಡ್ಡಿತ್ತು.

ಇದಾದ ಮೇಲೆ, ಈಗ ಇನ್ನೊಂದು ಕುಮಾರಸ್ವಾಮಿಯವರು ಬಳಸಿದ ಪದವೊಂದು ಭರ್ಜರಿಯಾಗಿ ಟ್ರೋಲಿಗರಿಗೆ ಆಹಾರವಾಗುತ್ತಿದೆ. ಸಾಮಾಜಿಕ ತಾಣದಲ್ಲಿ ಈಗ ಅದರದ್ದೇ ಸದ್ದು. ಅದುವೇ 'ಮಿಣಿಮಿಣಿ'.

ಮಂಗಳೂರು ಬಾಂಬ್ ಪ್ರಕರಣದ ವಿಚಾರದ ಮೇಲೆ ಕುಮಾರಸ್ವಾಮಿಯವರು ಮಾತನಾಡುತ್ತಿರಬೇಕಾದರೆ, ಈ ಮಿಣಿಮಿಣಿ ಪದವನ್ನು ಕುಮಾರಸ್ವಾಮಿ ಬಳಸಿದ್ದರು. ಇದನ್ನಿಟ್ಟುಕೊಂಡು ಟ್ರೋಲಿಗರು ವಿಧವಿಧವಾದ ಟ್ರೋಲ್ ಗಳಲ್ಲಿ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸುತ್ತಿದ್ದಾರೆ.

ಮಂಗಳೂರು ಬಾಂಬ್ ನಿಷ್ಕ್ರಿಯ

ಮಂಗಳೂರು ಬಾಂಬ್ ನಿಷ್ಕ್ರಿಯ

ಮಂಗಳೂರು ಬಾಂಬ್ ನಿಷ್ಕ್ರಿಯದ ಬಗ್ಗೆ ಕುಮಾರಸ್ವಾಮಿ ಹೇಳಿಕೆಯನ್ನು ನೀಡುತ್ತಿದ್ದರು. "ಪಟಾಕಿ ತುಂಬುವಂತಹ ಮಿಣಿಮಿಣಿ ಪೌಡರ್ ಅನ್ನು ಬಾಕ್ಸ್ ನಲ್ಲಿ ತುಂಬಲಾಗಿತ್ತು" ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಕುಮಾರಣ್ಣನ ಈ ಹೇಳಿಕೆ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಮಿಣಿಮಿಣಿ ಅಂದರೆ, ಮಿಂಚು ಅಥವಾ ಹೊಳಪು. ಇದೊಂದು ಆಡುಭಾಷೆಯಲ್ಲಿ ಬಳಸುವ ಪದ

ಮಿಣಿಮಿಣಿ ಅಂದರೆ, ಮಿಂಚು ಅಥವಾ ಹೊಳಪು. ಇದೊಂದು ಆಡುಭಾಷೆಯಲ್ಲಿ ಬಳಸುವ ಪದ

ಸಾಮಾನ್ಯವಾಗಿ ಮಿಣಿಮಿಣಿ ಅಂದರೆ, ಒಂದು ಮಿಂಚು ಅಥವಾ ಹೊಳಪು. ಇದೊಂದು ಆಡುಭಾಷೆಯಲ್ಲಿ ಬಳಸುವ ಪದ. ಸಾಮಾನ್ಯವಾಗಿ ಜಾತ್ರೆಗೆ ಹೋದಾಗ, ಮಿಣಿಮಿಣಿ ಕೊಡಿಸು ಎಂದು ಮಕ್ಕಳು, ಪೋಷಕರಲ್ಲಿ ಒತ್ತಾಯ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹೆಣ್ಣುಮಕ್ಕಳು, ಈ ಮಿಣಿಮಿಣಿಯನ್ನು ಮುಖಕ್ಕೆ ಹಚ್ಚಿಕೊಳ್ಳುವುದನ್ನು ನೋಡಬಹುದಾಗಿದೆ.

ಶಿವಣ್ಣ ಅಭಿನಯದ ಜನುಮದ ಜೋಡಿ ಸಿನಿಮಾದ 'ಮಣಿಮಣಿ' ಹಾಡು

ಶಿವಣ್ಣ ಅಭಿನಯದ ಜನುಮದ ಜೋಡಿ ಸಿನಿಮಾದ 'ಮಣಿಮಣಿ' ಹಾಡು

ಕುಮಾರಸ್ವಾಮಿಯವರು ಮಿಣಿಮಿಣಿ ಪದವನ್ನು ಬಳಸಿದ ನಂತರ, ಅದೀಗ ಭಾರೀ ಸದ್ದು ಮಾಡುತ್ತಿದೆ. ತರಹೇವಾರಿ ಟ್ರೋಲ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಶಿವರಾಜ್ ಕುಮಾರ್ ಅಭಿನಯದ ಜನುಮದ ಜೋಡಿ ಸಿನಿಮಾದ 'ಮಣಿಮಣಿ ಮಣಿಯೊಂದು ದಾರಾ' ಎನ್ನುವ ಹಾಡನ್ನು ಜೋಡಿಸಿ, ವೈರಲ್ ಮಾಡುತ್ತಿದ್ದಾರೆ.

ಕುಮಾರಸ್ವಾಮಿ ಬಿಫೋರ್ ಮಿಣಿಮಿಣಿ ಪೌಡರ್, ಆಫ್ಟರ್ ಮಿಣಿಮಿಣಿ ಪೌಡರ್

ಕುಮಾರಸ್ವಾಮಿ ಬಿಫೋರ್ ಮಿಣಿಮಿಣಿ ಪೌಡರ್, ಆಫ್ಟರ್ ಮಿಣಿಮಿಣಿ ಪೌಡರ್

ಇನ್ನು ಕುಮಾರಸ್ವಾಮಿವರ ಒಂದು ಫೋಟೋ ಮತ್ತು ಕ್ರಾಪ್ ಮಾಡಲಾದ ಇನ್ನೊಂದು ಫೋಟೋ ಹಾಕಿ 'ಕುಮಾರಸ್ವಾಮಿ ಬಿಫೋರ್ ಮಿಣಿಮಿಣಿ ಪೌಡರ್, ಆಫ್ಟರ್ ಮಿಣಿಮಿಣಿ ಪೌಡರ್' ಎನ್ನುವ ಒಕ್ಕಣೆಯನ್ನು ಬರೆದು, ಟ್ರೋಲ್ ಮಾಡಲಾಗುತ್ತಿದೆ ಮತ್ತು ಇದು ಸಿಕ್ಕಾಪಟ್ಟೆ ಶೇರ್ ಬೇರೆ ಆಗುತ್ತಿದೆ.

ಪಾಂಡ್ಸ್ ಪೌಡರ್ ಒಂದು ಕಡೆ ಮಿಣಿಮಿಣೀ ಪೌಡರ್

ಪಾಂಡ್ಸ್ ಪೌಡರ್ ಒಂದು ಕಡೆ ಮಿಣಿಮಿಣೀ ಪೌಡರ್

ಇನ್ನೊಂದು ಮಣಿಮಣಿ ಎನ್ನುವ ಐಟಂ ಸಾಂಗ್ ಒಂದರ ಮಧ್ಯೆ ಕುಮಾರಸ್ವಾಮಿಯವರ ಮಿಣಿಮಿಣಿ ಪದವನ್ನು ಜೋಡಿಸಿ, ಜೊತೆಗೆ, ಸಿದ್ದರಾಮಯ್ಯ, 'ಕಳ್ಸೋ ಆಚೆಗೆ ಅವನನ್ನಾ' ಪದವನ್ನು ಸೇರಿಸಿ ಮಾಡಲಾಗಿರುವ ವಿಡಿಯೋ ಕೂಡಾ ಟ್ರೋಲ್ ಆಗುತ್ತಿದೆ. ಇನ್ನೊಂದು ಟ್ರೋಲ್ ನಲ್ಲಿ, ಪಾಂಡ್ಸ್ ಪೌಡರ್ ಒಂದು ಕಡೆ ಮಿಣಿಮಿಣಿ ಪೌಡರ್ ಎಂದು ಬರೆದು ಇನ್ನೊಂದು ಕಡೆ, ಅದಕ್ಕೆ ಎಚ್ಡಿಕೆ ಫೋಟೋ ಹಾಕಿರುವ ಪೋಸ್ಟ್ ಗಳೂ ಹರಿದಾಡುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+