ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಸಂಕ್ಷಿಪ್ತ ಪರಿಚಯ

ಮಂಡ್ಯ, ಮಾ. 19 : ಕನ್ನಡ ಚಿತ್ರರಂಗದ ನಂಬರ್ ಒನ್ ನಟಿಯಾಗಿದ್ದ ರಮ್ಯಾ, ಮಂಡ್ಯ ಕ್ಷೇತ್ರದಲ್ಲಿ ಕಳೆದ ಆಗಸ್ಟ್ ನಲ್ಲಿ ನಡೆದ ಉಪ ಚುನಾವಣೆಗೆ ಸ್ಪರ್ಧಿಸುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು. ಮೊದಲ ಚುನಾವಣೆಯಲ್ಲಿಯೇ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದ ಅವರು 2014ರ ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.

ಮಂಡ್ಯ ಕ್ಷೇತ್ರದ ಸಂಸದರಾಗಿದ್ದ ಜೆಡಿಎಸ್ ಪಕ್ಷದ ಚೆಲುವರಾಯ ಸ್ವಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರಿಂದ ತಮ್ಮ ಸಂಸದ ಸ್ಥಾನ ತೊರೆದರು. ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಹುಡುಕಾಟ ನಡೆಸಿದ ಕಾಂಗ್ರೆಸ್, 2011ರಿಂದ ಯುವ ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಟಿ ರಮ್ಯಾ ಅವರನ್ನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿತು. [ಬಿರುಸಿನ ಮತಯಾಚನೆ ಚಿತ್ರಗಳು]

ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ರಮ್ಯಾ (ದಿವ್ಯ ಸ್ಪಂದನಾ) ಕಾಂಗ್ರೆಸ್ ನಾಯಕರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಆ.21 2013ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರ ವಿರುದ್ಧ 47,622 ಮತಗಳ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದರು. ಸದ್ಯ, 2014ರ ಲೋಕಸಭೆ ಚುನಾವಣೆಯಲ್ಲಿಯೂ ರಮ್ಯಾ ಅವರಿಗೆ ಪಕ್ಷ ಅವಕಾಶ ನೀಡಿದ್ದು, ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ರಮ್ಯಾ ರಾಜಕೀಯ ಬದುಕಿನ ಚಿತ್ರಣ

ರಮ್ಯಾ ಎದುರಾಳಿಗಳು ಯಾರು?

ರಮ್ಯಾ ಎದುರಾಳಿಗಳು ಯಾರು?

ಮಂಡ್ಯ ಕ್ಷೇತ್ರದಿಂದ 2014ರ ಲೋಕಸಭೆ ಚುನಾವಣೆ ರಮ್ಯಾ ಸ್ಪರ್ಧಿಸುತ್ತಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶಿವಲಿಂಗಯ್ಯ ಮತ್ತು ಉಪ ಚುನಾವಣೆಯಲ್ಲಿ ರಮ್ಯಾ ವಿರುದ್ಧ ಸೋಲುಂಡಿದ್ದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಈ ಬಾರಿಯ ಚುನಾವಣೆಯಲ್ಲಿ ರಮ್ಯಾ ಅವರಿಗೆ ಪ್ರತಿಸ್ಪರ್ಧೆ ನೀಡುತ್ತಿದ್ದಾರೆ.

ರೈತರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು

ರೈತರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು

* ಸಂಸತ್ ಪ್ರವೇಶ ಮಾಡಿದ ರಮ್ಯಾ, ತಮಗೆ ಸಿಕ್ಕ ಸೀಮಿತ ಕಾಲಾವಕಾಶದಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.
* ಮಂಡ್ಯದಲ್ಲಿಯೇ ಮನೆ ಮಾಡಿ ಅಲ್ಲಿಯೇ ನೆಲೆಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪರಿಹಾರ ಮಾಡಲು ಪ್ರಯತ್ನಿಸಿದರು.
* ಅಧಿವೇಶನದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಅವರು, ಮಂಡ್ಯದ ಕಬ್ಬುಬೆಳೆಗಾರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು.

ಬಹುಬೇಗ ಜನಪ್ರಿಯತೆ ಗಳಿಸಿದರು

ಬಹುಬೇಗ ಜನಪ್ರಿಯತೆ ಗಳಿಸಿದರು

* ಸಂಸದೆಯಾದ ನಂತರ ಕ್ಷೇತ್ರದ ತುಂಬಾ ಸಂಚರಿಸಿ ಬಹುಬೇಗ ಜನಪ್ರಿಯತೆ ಗಳಿಸಿದರು.
* ಸಾಮಾಜಿಕ ಜಾಲ ತಾಣ ಟ್ವಿಟ್ವರ್ ಮೂಲಕ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಾ, ಪ್ರಸಿದ್ಧಿ ಪಡೆದಿದ್ದಾರೆ.
* ಮಾರ್ಚ್ 20ರಂದು ಗೂಗಲ್ ಹ್ಯಾಂಗೌಟ್ ನಲ್ಲಿ ಸಂವಾದ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದಾರೆ.

ಸಾಮಾಜಿಕ ತಾಣಗಳಲ್ಲೂ ಸಕ್ರಿಯ

ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ

ಚಿತ್ರರಂಗಕ್ಕೆ ಗುಡ್ ಬೈ

ಚಿತ್ರರಂಗಕ್ಕೆ ಗುಡ್ ಬೈ

ಉಪ ಚುನಾವಣೆ ವೇಳೆ ರಮ್ಯಾ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಆದರೆ, ಈಗ ತಮ್ಮ ಕೈಲಿದ್ದ ಚಿತ್ರಗಳನ್ನು ಮುಗಿಸಿರುವ ರಮ್ಯಾ ಸಂಪೂರ್ಣವಾಗಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ.

ರಾಯಭಾರಿಯಾಗಿದ್ದರು

ರಾಯಭಾರಿಯಾಗಿದ್ದರು

* 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು.
* 2011ರಲ್ಲಿ ರಮ್ಯಾ ಯುವ ಕಾಂಗ್ರೆಸ್ ಸೇರಿದದರು.

ನಾಯಕರ ಪ್ರರವಾಗಿ ಪ್ರಚಾರ

ನಾಯಕರ ಪ್ರರವಾಗಿ ಪ್ರಚಾರ

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಪರವಾಗಿ ರಮ್ಯಾ ಪ್ರಚಾರ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+