ಒಂದು ತಿಂಗಳಲ್ಲಿ ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ!

Posted By:
Subscribe to Oneindia Kannada

ಚಾಮರಾಜನಗರ, ಜೂನ್ 29 : ಕೊಳ್ಳೇಗಾಲ ತಾಲೂಕಿನ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆಯಿತು. 34 ದಿನಗಳಲ್ಲಿ ಹುಂಡಿಯಲ್ಲಿ 1.6 ಕೋಟಿ ರೂ. ಕಾಣಿಕೆ ಸಂಗ್ರಹಣೆಯಾಗಿದೆ.

ಜೂನ್ 28ರ ಮಂಗಳವಾರ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಿ.ಭಾರತಿ ಅವರ ಅಧ್ಯಕ್ಷತೆಯಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. [ಮಹದೇಶ್ವರಬೆಟ್ಟದ ಅಭಿವೃದ್ಧಿ ಬಂತು ಪ್ರಾಧಿಕಾರ]

male mahadeshwara

2016ರ ಮೇ 25ರಿಂದ ಜೂನ್ 27ರ ತನಕ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ ಒಟ್ಟು 1,06,41,623 ರೂ. ಕಾಣಿಕೆ ಸಂಗ್ರಹವಾಗಿತ್ತು. ಹಣದ ಜೊತೆಗೆ 30 ಗ್ರಾಂ ಚಿನ್ನ ಮತ್ತು 1, 320 ಗ್ರಾಂ ಬೆಳ್ಳಿಯ ಪದಾರ್ಥಗಳು ಇದ್ದವು. [ಮಲೆ ಮಹದೇಶ್ವರ ಬೆಟ್ಟ ಚಿತ್ರಗಳು]

ಹುಂಡಿಗಳ ಎಣಿಕೆ ಕಾರ್ಯದಲ್ಲಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಅಭಿಯಂತರ ಆರ್.ಎಸ್.ಮನುವಾಚಾರ್ಯ,
ಕಛೇರಿಯ ಅಧೀಕ್ಷಕರಾದ ಎಂ.ಬಸವರಾಜು, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು ಪಾಲ್ಗೊಂಡಿದ್ದರು. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]

male mahadeshwara

ಕರ್ನಾಟಕ ಸರ್ಕಾರ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರಬೆಟ್ಟದ ಅಭಿವೃದ್ಧಿಗಾಗಿ 'ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ'ವನ್ನು ರಚನೆ ಮಾಡಿದೆ. ವಾರ್ಷಿಕ ಸುಮಾರು 40 ಕೋಟಿ ರೂ. ಆದಾಯವಿರುವ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಹೊರತಂದು ಪ್ರಾಧಿಕಾರದ ನಿರ್ವಹಣೆಗೆ ಒಳಪಡಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rs 1.6 crore hundi donations collected in Sri Male Mahadeshwara Swamy Temple Chamarajanagar, during the time of May 25 to June 27, 2016.
Please Wait while comments are loading...