ಪೊಲೀಸ್ ಇಲಾಖೆಯಲ್ಲಿ ಬಡ್ತಿ, ವರ್ಗಾವಣೆ : ಇಲ್ಲಿದೆ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 02 : ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಿದ್ದು, 15 ಅಧಿಕಾರಿಗಳ ಬಡ್ತಿ, ವರ್ಗಾವಣೆ ಸಹಿತ ಒಟ್ಟು 42 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರನ್ನು ಸಿಐಡಿಯ ಡಿಐಜಿ ಹುದ್ದೆಗೆ ನೇಮಿಸಲಾಗಿದೆ.

ಶುಕ್ರವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ (ಕಾರಾಗೃಹ) ಕಮಲ್ ಪಂತ್ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. [ಐಎಎಸ್ ಅಧಿಕಾರಿಗಳ ಬಡ್ತಿ, ವರ್ಗಾವಣೆ ಪಟ್ಟಿ]

karnataka police

50 ಸಾವಿರ ಟನ್‌ಗಿಂತ ಕಡಿಮೆ ಪ್ರಮಾಣದ ಅಕ್ರಮ ಅದಿರು ಸಾಗಾಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಕೆ.ಎಸ್.ಆರ್. ಚರಣ್‌ ರೆಡ್ಡಿ ಅವರನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಲಾಗಿದೆ. ಚರಣ್‌ ರೆಡ್ಡಿ ಅವರ ಸ್ಥಾನಕ್ಕೆ ಮಾಲಿನಿ ಕೃಷ್ಣಮೂರ್ತಿ ಅವರನ್ನು ನೇಮಿಸಲಾಗಿದೆ. ಮಾಲಿನಿ ಕೃಷ್ಣಮೂರ್ತಿ ಅವರು ಕೆಎಸ್‌ಆರ್‌ಪಿಯ ಐಜಿಪಿಯಾಗಿದ್ದರು.

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಬಡ್ತಿ ನೀಡಿದ್ದು, ಸಿಐಡಿಯ ಡಿಐಜಿ ಹುದ್ದೆಗೆ ನೇಮಕ ಮಾಡಲಾಗಿದೆ. ಸೋನಿಯಾ ನಾರಂಗ್ ಅವರ ಸ್ಥಾನಕ್ಕೆ, ಆರ್. ರಮೇಶ್‌ ಅವರನ್ನು ನೇಮಿಸಲಾಗಿದೆ. ರಮೇಶ್‌ ಅವರು ಬೆಂಗಳೂರು ಅಪರಾಧ ವಿಭಾಗದ ಡಿಸಿಪಿಯಾಗಿದ್ದರು.

ಡಿಜಿಪಿ ಶ್ರೇಣಿಗೆ ಬಡ್ತಿ, ವರ್ಗಾವಣೆ : ಪ್ರೇಮಶಂಕರ್ ಮೀನಾ (ತರಬೇತಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕ), ಎಚ್.ಎನ್.ಸತ್ಯನಾರಾಯಣ ರಾವ್ (ಡಿಜಿಪಿ, ಕಾರಾಗೃಹ ಇಲಾಖೆ).

ಎಡಿಜಿಪಿಯಾಗಿ ಬಡ್ತಿ, ವರ್ಗಾವಣೆ : ಸುನಿಲ್ ಅಗರ್ ವಾಲ್ (ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಬೆಂಗಳೂರು), ಎನ್.ಶಿವಕುಮಾರ್ (ಎಜಿಜಿಪಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು), ಸಿ.ಎಚ್.ಪ್ರತಾಪ ರೆಡ್ಡಿ (ಎಡಿಜಿಪಿ, ಸಿಐಡಿ ಬೆಂಗಳೂರು)

ಐಜಿಪಿ ಶ್ರೇಣಿಗೆ ಬಡ್ತಿ : ಪಂಕಜ್ ಕುಮಾರ್ ಠಾಕೂರ್ (ಸಹಾಯಕ ನಿರ್ದೇಶಕ, ಗುಪ್ತಚರ ವಿಭಾಗ ನವದೆಹಲಿ), ಎಂ.ಹೇಮಂತ್ ನಿಂಬಾಳ್ಕರ್ (ಐಜಿಪಿ, ಸಿಐಡಿ [ಆರ್ಥಿಕ ವ್ಯವಹಾರಗಳು])

ಐಜಿಪಿ ಶ್ರೇಣಿಗೆ ಬಡ್ತಿ, ವರ್ಗ : ಸೌಮೇಂದು ಮುಖರ್ಜಿ (ಬೆಳಗಾವಿ ನಗರ ಪೊಲೀಸ್ ಆಯುಕ್ತ), ಎಸ್.ರವಿ (ರಾಜ್ಯ ಮೀಸಲು ಪೊಲೀಸ್, ಬೆಂಗಳೂರು), ಎಂ.ಚಂದ್ರಶೇಖರ್ (ಮಂಗಳೂರು ನಗರ ಪೊಲೀಸ್ ಆಯುಕ್ತ), ಬಿ.ಶಿವಕುಮಾರ್ (ಈಶಾನ್ಯ ವಲಯ, ಕಲಬುರ್ಗಿ).

ಡಿಐಜಿ ಶ್ರೇಣಿಗೆ ಬಡ್ತಿ, ವರ್ಗ : ಎಚ್.ಎಸ್.ವೆಂಕಟೇಶ್ (ರೈಲ್ವೆ, ಬೆಂಗಳೂರು), ಸೋನಿಯಾ ನಾರಂಗ್ (ಸಿಐಡಿ, ಬೆಂಗಳೂರು)

ಬಡ್ತಿ ವರ್ಗಾವಣೆ : ಪ್ರಕಾಶ್ ಅಮೃತ್ ನಿಕ್ಕಮ್ (ಎಸ್ಪಿ ಬೀದರ್), ಡಾ.ಭೀಮಶಂಕರ್ ಎಸ್.ಗುಳೇದ (ಎಸ್ಪಿ ದಾವಣಗೆರೆ), ಧರ್ಮೇಂದ್ರ ಕುಮಾರ್ ಮೀನಾ (ಎಸ್ಪಿ ಧಾರವಾಡ), ಜಿ.ರಾಧಿಕಾ (ಎಸ್ಪಿ ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka government on Friday reshuffled superintendents of police of many districts as part of a major surgery conducted in the police department.
Please Wait while comments are loading...