ಮದುರೈ ವಿವಿ ಸಹಾಯಕ ಪ್ರೊಫೆಸರ್ ಗೆ ಚೂರಿ ಇರಿತ
ಮದುರೈ, ಸೆ. 26: ಇಲ್ಲಿನ ಮದುರೈ ಕಾಮರಾಜನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿರುವ ಎಸ್ ಜೆನೆಫಾ ಆವರ ಮೇಲೆ ಅನೇಕ ಬಾರಿ ಚೂರಿಯಿಂದ ಇರಿದ ಘಟನೆ ಮಂಗಳವಾರ ನಡೆದಿದೆ. ಮದುರೈ ವಿವಿಯಲ್ಲಿ ಅತಿಥಿ ಉಪನ್ಯಾಸಕರೊಬ್ಬರು ಈ ಕೃತ್ಯ ಎಸಗಿದ್ದಾರೆ.
ಕುಲಮಂಗಲಂನ ನಿವಾಸಿ, ಇದೇ ವಿವಿಯ ಹಳೆ ವಿದ್ಯಾರ್ಥಿಯಾಗಿದ್ದ ಜೋತಿಮುರುಗನ್ ಎಂಬಾತನಿಗೆ ಅತಿಥಿ ಉಪನ್ಯಾಸಕನ ಹುದ್ದೆ ತಾತ್ಕಲಿಕವಾಗಿ ಲಭಿಸಿತ್ತು.

ಒಂದು ವರ್ಷದ ಬಳಿಕ ಆತನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ವಿವಿ ಮನಸ್ಸು ಮಾಡಿರಲಿಲ್ಲ. ಇದೇ ಸಿಟ್ಟಿನಲ್ಲಿ ಅನೇಕ ಬಾರಿ ಸಹಾಯಕ ಪ್ರೊಫೆಸರ್ ಜೆನೆಫಾ ಜತೆ ಜಗಳವಾಡಿಕೊಂಡಿದ್ದ.
ಮಂಗಳವಾರ ಬೆಳಗ್ಗೆ ಜೆನೆಫಾ ಅವರು ವಿವಿ ಕಚೇರಿಗೆ ಬರುತ್ತಿದ್ದಂತೆ ಚಾಕುವಿನಿಂದ ಹೊಟ್ಟೆ, ಕುತ್ತಿಗೆ ಸೇರಿದಂತೆ ಅನೇಕ ಕಡೆ ಚುಚ್ಚಿ ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಆತನಿಗೆ ಧರ್ಮದೇಟು ಕೊಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications