40 ಪತ್ರಕರ್ತರಿಗೆ 2017ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Posted By:
Subscribe to Oneindia Kannada

ಕರ್ನಾಟಕ ಮಾಧ್ಯಮ ಅಕಾಡೆಮಿ 2017ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರುಪಾಯಿ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಸಕ್ತ ಸಾಲಿಗೆ ನಲವತ್ತು ಮಂದಿ ಪತ್ರಕರ್ತರಿಗೆ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತ್ರಿಪುರ: ಪತ್ರಕರ್ತನ ಸಾವಿಗೆ ಕಪ್ಪು ಸಂಪಾದಕೀಯದ ಪ್ರತಿಭಟನೆ

ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅರಗಿಣಿ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಜೊತೆಗೆ ತಲಾ ಹತ್ತು ಸಾವಿರ ರುಪಾಯಿ ನಗದು ಬಹುಮಾನ ಒಳಗೊಂಡಿದೆ.

ಅಭಿಮಾನಿ ಪ್ರಶಸ್ತಿ ಮತ್ತು ಮೈಸೂರು ದಿಗಂತ ಪ್ರಶಸ್ತಿಗಳನ್ನು ನಂತರ ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ದರಾಜು ಅವರು ತಿಳಿಸಿದ್ದಾರೆ.

Madhyama academy annual award announced for 2017

ಎಂ. ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿ ಇದೇ ತಿಂಗಳ 27ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ

ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಕಂಡಂತಿದೆ:

ಮಾಳಪ್ಪ ಅಡಸಾರೆ ಅಂತರಂಗ ಸುದ್ದಿ

ಶಿವಲಿಂಗಪ್ಪ ಕರ್ನಾಟಕ ಸಂಧ್ಯಾಕಾಲ

ಚೆನ್ನಬಸವಣ್ಣ ಈಟಿವಿ ಕನ್ನಡ

ಶಿವಪ್ಪ ಮಡಿವಾಳ ರಾಯಚೂರು ವಾಣಿ

ದತ್ತು ಸರ್ಕಿಲ್ ಜನಕೂಗು

ಸಾದಿಕ್ ಅಲಿ ಲೋಕದರ್ಶನ

ಸಿ. ಮಂಜುನಾಥ್ ಈಶಾನ್ಯ ಟೈಮ್ಸ್

ಸಂಗಮೇಶ ಚೂರಿ ವಿಜಯ ಕರ್ನಾಟಕ

ಮಹೇಶ ಅಂಗಡಿ ಸಂಜೆ ದರ್ಶನ

ರಾಮು ವಗ್ಗಿ ಛಾಯಾಚಿತ್ರಗ್ರಾಹಕರು

ವಿಜಯಕುಮಾರ್ ಪಾಟೀಲ್ ದಿ ಹಿಂದು

ಬಾಲಕೃಷ್ಣ ರಾಮಚಂದ್ರ ವಿಭೂತೆ ಇಂಡಿಯನ್ ಎಕ್ಸ್‌ಪ್ರೆಸ್

ಉಗಮ ಶ್ರೀನಿವಾಸ್ ಕನ್ನಡಪ್ರಭ

ಗಣಪತಿ ಗಂಗೊಳ್ಳಿ ಸಂಜೆ ದರ್ಪಣ

ಶಿವಕುಮಾರ್ ಕಣಸೋಗಿ ಪ್ರಜಾವಾಣಿ

ಬಸವರಾಜ ದೊಡ್ಡಮನಿ ಟಿ.ವಿ9

ರವಿ ಬಿದನೂರು ಸಮಯ ನ್ಯೂಸ್

ಷ. ಮಂಜುನಾಥ ಸುದ್ದಿಗಿಡುಗ

ಎಚ್.ಎನ್. ಮಲ್ಲೇಶ್ ಉದಯಟಿವಿ

ಮಹಮದ್ ಯೂನುಸ್ ಈ ಮುಂಜಾನೆ

ಕೋ.ನ. ಮಂಜುನಾಥ್ ಪ್ರಿಯ ಪತ್ರಿಕೆ

ಕೆ.ಆರ್. ಮಂಜುನಾಥ್ ಹಿರಿಯ ಪತ್ರಕರ್ತರು

ಬಾಳ ಜಗನ್ನಾಥ ಶೆಟ್ಟಿ ಜಯಕಿರಣ

ಡಾ.ಯು.ಪಿ. ಶಿವಾನಂದ ಸುದ್ದಿ ಬಿಡುಗಡೆ

ರಮೇಶ ಕುಟ್ಟಪ್ಪ ವಿಜಯವಾಣಿ

ಬಸವಣ್ಣ ಛಾಯಾಗ್ರಾಹಕರು

ಶಿವಣ್ಣ ವಿಜಯವಾಣಿ

ಗೋವಿಂದ ಆಂದೋಲನ

ವಸಂತಕುಮಾರ್ ಹಿರಿಯ ಪತ್ರಕರ್ತರು

ಡಿ.ಎಸ್. ಶಿವರುದ್ರಪ್ಪ ಹಿರಿಯ ಪತ್ರಕರ್ತರು

ಜಯಕುಮಾರ್ ಜಯಮಿತ್ರ

ವೈ.ಎಸ್.ಎಲ್. ಸ್ವಾಮಿ ಸಂಜೆ ವಾಣಿ

ಬಾಗೇಶ್ರೀ ದಿ ಹಿಂದು

ಸೌಮ್ಯ ಅಜಿ ಎಕನಾಮಿಕ್ ಟೈಮ್ಸ್

ಎಂ.ಸಿ. ಶೋಭಾ ಸುವರ್ಣ ಟಿ.ವಿ

ಬಿ.ಎನ್. ಶ್ರೀಧರ ಪ್ರಜಾವಾಣಿ

ಸ್ಟಾಲಿನ್ ಪಿಂಟೊ ಛಾಯಾಗ್ರಾಹಕರು

ಆದಿ ನಾರಾಯಣ ಈ ನಾಡು

ಮುಮ್ತಾಜ್ ಅಲೀಂ ಸುದ್ದಿ. ಟಿ.ವಿ

ಟಿ. ಅಶ್ವತ್ಥರಾಮಯ್ಯ ವಾಲ್ಮೀಕಿ ರೈಟ್ಸ್ ಆಫ್ ಇಂಡಿಯಾ

ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2017

ಡಾ. ಬರಗೂರು ರಾಮಚಂದ್ರಪ್ಪ ಖ್ಯಾತ ಸಾಹಿತಿಗಳು

ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ-2017

ಆಂದೋಲನ ಪ್ರಶಸ್ತಿ - ನಗರವಾಣಿ, ದಾವಣಗೆರೆ

ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ 2017

ಕೆ.ಎಂ. ವಿರೇಶ್. ಸಿನಿಮಾ ಪತ್ರಕರ್ತರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Madhyama Academy annual award announced for 2017. 40 journalists selected for this year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ