ಕರ್ನಾಟಕದಲ್ಲಿ ಈ ಸಲ ಮಹಿಳೆಯರಿಂದ ಹೆಚ್ಚು ಮತದಾನ; ಯಾರಿಗೆ ಸಿಗಲಿದೆ ನಾರಿಮಣಿಯರ ವರ?
ಬೆಂಗಳೂರು, ಮೇ 31: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಎರಡು ಹಂತದಲ್ಲಿ ನಡೆದಿದ್ದು, ಚುನಾವಣಾ ಫಲಿತಾಂಶಕ್ಕಾಗಿ ರಾಜಕೀಯ ನಾಯಕರು ಕಾಯುತ್ತಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದೆ, ರಾಜಕೀಯ ಪಕ್ಷಗಳು ಮತ್ತು ವಿಶ್ಲೇಷಕರು ಹಲವು ದತ್ತಾಂಶಗಳ ಕುರಿತು ಲೆಕ್ಕಾಚಾರ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಎರಡು ಹಂತದ ಮತದಾನ ನಡೆದಿದ್ದು, 70 ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ಅಂಕಿ ಅಂಶಗಳು ತಿಳಿದು ಬಂದಿದೆ.

ಐದು ವರ್ಷಗಳ ಹಿಂದೆ, ಒಂಬತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ 22 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಾಗಿತ್ತು. 2019 ಕ್ಕೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ 21.18 ಲಕ್ಷ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿ ಮಾಡಿದೆ.
ದಕ್ಷಿಣ ಕರ್ನಾಟಕದ 61 ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದ್ದಾರೆ. ಉತ್ತರದಲ್ಲಿ ಒಂಬತ್ತು ವಿಭಾಗಗಳಲ್ಲಿ ಮಹಿಳೆಯರು ಮತದಾನದ ನೇತೃತ್ವ ವಹಿಸಿದ್ದರು. 2019 ರಲ್ಲಿ, ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿದ ಎಲ್ಲಾ 22 ವಿಧಾನಸಭಾ ಕ್ಷೇತ್ರಗಳು ದಕ್ಷಿಣ ಕರ್ನಾಟಕದ ಭಾಗದಾಗಿದೆ. ಒಟ್ಟಾರೆಯಾಗಿ, ಮತದಾನ ಮಾಡಿದ ಮಹಿಳೆಯರ ಸಂಖ್ಯೆ 2019 ಕ್ಕಿಂತ 12% ಹೆಚ್ಚಾಗಿದೆ.
ಉತ್ತರ ಕರ್ನಾಟಕದಲ್ಲಿ, 2019 ರಲ್ಲಿ, ಒಂದೇ ಒಂದು ವಿಧಾನಸಭಾ ಕ್ಷೇತ್ರವು 2019 ರಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಮತ ಚಲಾಯಿಸಲಿಲ್ಲ. ಆದರೆ ಈ ಬಾರಿ, ಒಂಬತ್ತು ಅಸೆಂಬ್ಲಿಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತಚಾಲಯಿಸಿದ್ದಾರೆ. 2019 ರ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಭದ್ರಾವತಿ ಮತ್ತು ಬೈಂದೂರು ವಿಧಾನಸಭೆಗಳಲ್ಲಿ ಮಾತ್ರ ಪುರುಷರಿಗಿಂತ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದಾರೆ.
ಮಹಿಳೆಯರ ಮತದಾನದ ಸಂಖ್ಯೆ ಹೆಚ್ಚಳಕ್ಕೆ ಕಾರಣ?
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮತದಾರರನ್ನ ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿತ್ತು. ದೇಶದಲ್ಲೇ ಮೊದಲು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದದ್ದು ಕರ್ನಾಟಕ ರಾಜ್ಯದಲ್ಲಿ, ಇನ್ನೂ ಗ್ಯಾರಂಟಿಗಳಿಂದ ಬಹುತೇಕ ಮಹಿಳೆಯರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಸಾಮಾನ್ಯ ಅರ್ಥದಲ್ಲಿ ಮಹಿಳೆಯರು ಗ್ಯಾರಂಟಿ ಯೋಜನೆಗಳ ದೊಡ್ಡ ಫಲಾನುಭವಿಗಳಾಗಿರುವುದರಿಂದ ಅವರು ಕಾಂಗ್ರೆಸ್ಗೆ ಮತ ಹಾಕುತ್ತಾರೆ ಎಂದು ಐಟಿ/ಬಿಟಿ ಸಚಿವ ಮತ್ತು ಸರ್ಕಾರದ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನನ್ನ ಸ್ವಂತ ಕ್ಷೇತ್ರದಲ್ಲಿ (ಚಿತ್ತಾಪುರ) ಮಹಿಳೆಯರು ತಮ್ಮ ಕುಟುಂಬದ ಪುರುಷರನ್ನು ಲೆಕ್ಕಿಸದೆ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಾವು ಅವರ ಮನೆಗಳಿಗೆ ತಂದ ಆರ್ಥಿಕ ಸ್ಥಿರತೆಯಿಂದಾಗಿ ಹೆಚ್ಚಿನ ಮಹಿಳೆಯರು ನಮಗೆ ಮತ ಹಾಕಿದ್ದಾರೆಂದು ಎಂದರು.
ಸಂಸತ್ತು ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ, ಉಚಿತ ವಸತಿ ಮತ್ತು ಉಜ್ವಲ ಯೋಜನೆಯಿಂದಾಗಿ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಭಾವಿಸುತ್ತದೆ. ಅಲ್ಲದೆ, ರಾಮ ಮಂದಿರವು ಮಹಿಳೆಯರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ. ಬಿಜೆಪಿಯು ಮಹಿಳೆಯರ ಬೆಂಬಲವನ್ನು ಸೆಳೆಯಲು ದೀರ್ಘಕಾಲದಿಂದ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಹೇಳಿದ್ದಾರೆ. 2006ರಲ್ಲಿ ನಾವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ನಮ್ಮ ಪಕ್ಷ ಮಹಿಳಾ ಪರ ಯೋಜನೆಗಳಲ್ಲಿ ಮುಂಚೂಣಿಯಲ್ಲಿದೆ. ಇದಲ್ಲದೆ, ಪಕ್ಷದ ಮನೆ-ಮನೆ ಪ್ರಚಾರವು ಈ ಬಾರಿ ಹೆಚ್ಚಿನ ಮಹಿಳೆಯರನ್ನು ಮತ ಚಲಾಯಿಸಲು ಸಹಾಯ ಮಾಡಿದೆ ಎಂದರು.












Click it and Unblock the Notifications