1951 ರಿಂದ 2024 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ವಿವರ!
ಬೆಂಗಳೂರು, ಜೂನ್ 05 : 2024ರ ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿಕೂಟ 28 ಕ್ಷೇತ್ರಗಳನ್ನ ಗೆಲ್ಲುವ ತಂತ್ರ ಈ ಬಾರಿ ವರ್ಕೌಟ್ ಆಗಲಿಲ್ಲ. ಇತ್ತ ಕೈ ಗ್ಯಾರಂಟಿ ಅಸ್ತ್ರವೂ ಕೈ ಹಿಡಿಯಲಿಲ್ಲ.
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ, ಬಿಜೆಪಿ ಬರೋಬ್ಬರಿ 25 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಮಂಡ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ರು.ಇದೀಗ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

1951 ರಿಂದ 2024 ರಲ್ಲಿ ರಾಜ್ಯದಲ್ಲಿ ಯಾವ ಪಕ್ಷ, ಎಷ್ಟು ಕ್ಷೇತ್ರಗಳಲ್ಲಿ ಗೆಲುವು
ರಾಜ್ಯದಲ್ಲಿ ಮೊದಲು 11 ಲೋಕಸಭಾ ಕ್ಷೇತ್ರಗಳಿತ್ತು, ಇದೀಗ 28 ಲೋಕಸಭಾ ಕ್ಷೇತ್ರಗಳಿವೆ. 1951ರಲ್ಲಿ ನಡೆದ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 10 ಸ್ಥಾನದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ 28 ಕ್ಷೇತ್ರಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ. ಇನ್ನೂ 2024 ರ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಬಿಜೆಪಿ 17 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ 2 ಹಾಗೂ ಕಾಂಗ್ರೆಸ್ 9 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಹಾಗಾದರೇ 1951 ರಿಂದ 2024 ರವರೆಗೆ ರಾಜ್ಯದಲ್ಲಿ ಯಾವ ಪಕ್ಷ, ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
1951 ರಿಂದ 1971ರ ಲೋಕಸಭಾ ಚುನಾವಣೆ
* 1951 ಕಾಂಗ್ರೆಸ್ 10, ಕೆಎಂಪಿಪಿ 1 (ಒಟ್ಟು ಸ್ಥಾನ 11)
* 1956 ಕಾಂಗ್ರೆಸ್ 23, ಇತರೆ 3 (ಒಟ್ಟು 26)
* 1962 ಕಾಂಗ್ರೆಸ್ 25, ಎಲ್‌ಎಸ್‌ಎಸ್ 1 (ಒಟ್ಟು 26)
* 1967 ಕಾಂಗ್ರೆಸ್ 18, ಇತರೆ 9 (ಒಟ್ಟು 27)
* 1971 ಕಾಂಗ್ರೆಸ್ 27, ಇತರೆ 0 (ಒಟ್ಟು 27)
1977 ರಿಂದ 1989ರ ಲೋಕಸಭಾ ಚುನಾವಣೆ
* 1977 ಕಾಂಗ್ರೆಸ್ 26, ಜನತಾ ಪಕ್ಷ 2 (ಒಟ್ಟು 28)
* 1980 ಕಾಂಗ್ರೆಸ್ 27, ಜನತಾ ಪಕ್ಷ 1ಕ್ಷೇತ್ರ (ಒಟ್ಟು 28)
* 1984 ಕಾಂಗ್ರೆಸ್ 24, ಜನತಾ ಪಕ್ಷ 4 ಕ್ಷೇತ್ರ (ಒಟ್ಟು 28)
* 1989 ಕಾಂಗ್ರೆಸ್ 26, ಜನತಾ ಪಕ್ಷ 2 ಕ್ಷೇತ್ರ (ಒಟ್ಟು 28)
1991 ರಿಂದ 1999ರ ಲೋಕಸಭಾ ಚುನಾವಣೆ
* 1991 ಕಾಂಗ್ರೆಸ್ 23, ಬಿಜೆಪಿ 4, ಜನತಾದಳ 1 (ಒಟ್ಟು 28)
* 1996 ಜನತಾದಳ 16, ಬಿಜೆಪಿ 6, ಕಾಂಗ್ರೆಸ್ 5, ಕೆಸಿಪಿ 1 (ಒಟ್ಟು 28)
* 1998 ಬಿಜೆಪಿ 13, ಲೋಕಶಕ್ತಿ 3, ಕಾಂಗ್ರೆಸ್ 9, ಜನತಾದಳ 3 (ಒಟ್ಟು 28)
* 1999 ಕಾಂಗ್ರೆಸ್ 18, ಬಿಜೆಪಿ 7, ಜೆಡಿಯು 3 (ಒಟ್ಟು 28)
2004 ರಿಂದ 2014ರ ಲೋಕಸಭಾ ಚುನಾವಣೆ
* 2004 ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2 (ಒಟ್ಟು 28)
* 2009 ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 2 (ಒಟ್ಟು 28)
* 2014 ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 (ಒಟ್ಟು 28)
* 2019 ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 1 (ಒಟ್ಟು 28)
* 2024 ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2( ಒಟ್ಟು 28)












Click it and Unblock the Notifications