ಹೌ ಈಸ್ ದಿ ಜೋಶ್?: ಗೆಲುವಿನ ಖುಷಿಯಲ್ಲಿ ಬೀಗಿದ ಬಿಜೆಪಿ
ಬೆಂಗಳೂರು, ಮೇ 23: 'ಹೌ ಈಸ್ ದಿ ಜೋಶ್?', 'ಹೈ ಸರ್'. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ ಪದ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಎಲ್ಲೆಡೆ ಸಂಭ್ರಮಾಚರಣೆ ಶುರುವಾಗಿದೆ. ರಾಜ್ಯದಲ್ಲಿಯೂ ಬಿಜೆಪಿ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಬಿಜೆಪಿ ಕಚೇರಿಗಳಲ್ಲಿ ಕಾರ್ಯಕರ್ತರು ಹರ್ಷೋದ್ಗಾರ ಮಾಡುತ್ತಿದ್ದಾರೆ.
ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಂಭ್ರಮವನ್ನು ಹಂಚಿಕೊಳ್ಳುತ್ತಿದೆ. 'ಡಿಯರ್ ಕರ್ನಾಟಕ, ಹೌ ಈಸ್ ದಿ ಜೋಶ್?' ಎಂದು ಟ್ವೀಟ್ ಮಾಡಲಾಗಿದೆ. ಬಿಜೆಪಿ ಸರಣಿ ಟ್ವೀಟ್‌ಗಳಲ್ಲಿ ಗೆಲುವಿನ ಸಿಹಿ ಹಂಚಿದೆ.
ಎಲ್ಲಿಯೂ ಮೋದಿ ಅಲೆ ಇಲ್ಲವೇ? ಖಚಿತವಾಗಿ ಹೇಳುತ್ತೀರಾ? ಹೋಗಿ ಮನೆಗೆಲಸ ಮಾಡಿ' ಎಂದು ವಿರೋಧಿಗಳನ್ನು ಲೇವಡಿ ಮಾಡಿದ್ದಾರೆ. ಜತೆಗೆ 'ಸಿದ್ದರಾಮಯ್ಯ ಯಾರು?' ಎಂದು ಕೇಳುವ ಮೂಲಕ 'ಮೋದಿ ಯಾರು?' ಎಂದು ವ್ಯಂಗ್ಯವಾಡಿದ್ದ ಸಿದ್ದರಾಮಯ್ಯ ಅವರ ಕಾಲೆಳೆಯಲಾಗಿದೆ.

'ಮಂಡ್ಯ ಅಪ್ಡೇಟ್: ನಿಖಿಲ್ ಎಲ್ಲಿದ್ದೀಯಪ್ಪಾ?' ಎಂದು ಸೋಲಿನತ್ತ ಸಾಗಿರುವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ್ದಾರೆ.
Dear Karnataka,
— BJP Karnataka (@BJP4Karnataka) 23 May 2019
How is the Josh ?
ಕಾಂಗ್ರೆಸ್‌ನ ದುರಹಂಕಾರ ಮತ್ತು ಭ್ರಷ್ಟ ರಾಜಕೀಯ ಇತಿಹಾಸಕ್ಕೆ ಕನ್ನಡಿಗರು ಅಂತ್ಯ ಹಾಡಿದ್ದಾರೆ ಎಂದು ಬಿಜೆಪಿ ಈ ಗೆಲುವನ್ನು ಬಣ್ಣಿಸಿದೆ. ನಮ್ಮ ತಂತ್ರ ಮತ್ತು ಜನರ ಪ್ರೀತಿ ಕಾಂಗ್ರೆಸ್‌ಅನ್ನು ಸೋಲಿಸಿರುವುದಾಗಿ ಹೇಳಿದೆ.












Click it and Unblock the Notifications