ಅತಿ ಹೆಚ್ಚು,ಅತಿ ಕಡಿಮೆ ಅಂತರದಿಂದ ಗೆದ್ದ ಎಂಪಿಗಳು
ಬೆಂಗಳೂರು, ಮೇ.17: ಲೋಕಸಭಾ ಚುನಾವಣೆಯೇ ಇರಲಿ ವಿಧಾನಸಭಾ ಚುನಾವಣೆ ಇರಲಿ ಶಿವಮೊಗ್ಗದಲ್ಲಿ ನಾನೇ ಕಿಂಗ್ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚಿನ ಮತಗಳಿಂದ ಯಡಿಯೂರಪ್ಪ ಜಯಗಳಿಸಿದ್ದಾರೆ.
ಹಾಗೇ ನೋಡಿದರೆ ಈ ಬಾರಿ ರಾಜ್ಯದ 15 ಬಿಜೆಪಿ ಅಭ್ಯರ್ಥಿಗಳು ಐವತ್ತು ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆದ್ದಿದ್ದಾರೆ. ಉಳಿದಂತೆ ಕಾಂಗ್ರೆಸ್‌ನಿಂದ ಆರು ಮಂದಿ ಜಿಡಿಎಸ್‌ನಿಂದ ಒಬ್ಬರು ಐವತ್ತು ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ.
ಚುನಾವಣಾ ಸಮಯದಲ್ಲಿ ಮಾಧ್ಯಮಗಳಲ್ಲಿ ಕುಟುಂಬದ ಒಳ ಜಗಳದ ಮೂಲಕ ಸುದ್ದಿಯಾಗುತ್ತಿದ್ದ ರಾಯಚೂರಿನಲ್ಲಿ ಬಿ.ವಿ.ನಾಯಕ ಅಲ್ಪ ಅಂತರದಲ್ಲಿ ಜಯಗಳಿಸಿದ್ದಾರೆ. ಹೀಗಾಗಿ ಮುಂದಿನ ಪುಟದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದು ಸಂಸತ್‌ಗೆ ಆಯ್ಕೆಯಾದ ಸದಸ್ಯರ ಮಾಹಿತಿಗಳನ್ನು ನೀಡಲಾಗಿದೆ.

ಯಡಿಯೂರಪ್ಪ
ಶಿವಮೊಗ್ಗ, ಬಿಜೆಪಿ
ಪಡೆದ ಮತಗಳು: 606216
ಗೆಲುವಿನ ಅಂತರ: 3,63,305
ಮಂಜುನಾಥ ಭಂಡಾರಿ(ಕಾಂಗ್ರೆಸ್): 2,42,911

ಡಿ.ಕೆ. ಸುರೇಶ್
ಬೆಂಗಳೂರು ಗ್ರಾಮಾಂತರ(ಕಾಂಗ್ರೆಸ್)
ಪಡೆದ ಮತಗಳು: 652723
ಗೆಲುವಿನ ಅಂತರ: 2,31,476
ಮುನಿರಾಜು(ಬಿಜೆಪಿ): 421243

ಸದಾನಂದ ಗೌಡ
ಬೆಂಗಳೂರು ಉತ್ತರ, ಬಿಜೆಪಿ
ಪಡೆದ ಮತಗಳು :7,18,326
ಗೆಲುವಿನ ಅಂತರ :2,29,764
ನಾರಾಯಣ ಸ್ವಾಮಿ(ಕಾಂಗ್ರೆಸ್)- 4,88,562

ಅನಂತ ಕುಮಾರ್
ಬೆಂಗಳೂರು ದಕ್ಷಿಣ, ಬಿಜೆಪಿ
ಪಡೆದ ಮತಗಳು : 6,33,816
ಗೆಲುವಿನ ಅಂತರ : 2,29,020
ನಂದನ್ ನಿಲೇಕಣಿ(ಕಾಂಗ್ರೆಸ್): 4,05,241

ಶೋಭಾ ಕರಂದ್ಲಾಜೆ:
ಉಡುಪಿ, ಚಿಕ್ಕಮಗಳೂರು(ಬಿಜೆಪಿ)
ಪಡೆದ ಮತಗಳು :5,81,168
ಗೆಲುವಿನ ಅಂತರ: 1,81,168
ಜಯಪ್ರಕಾಶ್ ಹೆಗ್ಡೆ(ಕಾಂಗ್ರೆಸ್): 3,99,525

ಬಿ.ವಿ ನಾಯಕ:
ರಾಯಚೂರು(ಕಾಂಗ್ರೆಸ್)
ಪಡೆದ ಮತಗಳು:4,43,659
ಗೆಲುವಿನ ಅಂತರ:1,499
ಶಿವನಗೌಡ ನಾಯಕ(ಬಿಜೆಪಿ) : 4,42,160

ಪ್ರಕಾಶ್ ಹುಕ್ಕೆರಿ
ಚಿಕ್ಕೋಡಿ(ಕಾಂಗ್ರೆಸ್)
ಪಡೆದ ಮತಗಳು: 4,74,373
ಗೆಲುವಿನ ಅಂತರ: 3003
ರಮೇಶ್ ಕತ್ತಿ: 4,71,370

ಸಿ.ಎಸ್.ಪುಟ್ಟರಾಜು
ಮಂಡ್ಯ(ಜೆಡಿಎಸ್)
ಪಡೆದ ಮತಗಳು: 524370
ಗೆಲುವಿನ ಅಂತರ: 5,518
ರಮ್ಯಾ(ಕಾಂಗ್ರೆಸ್): 518852

ವೀರಪ್ಪ ಮೊಯ್ಲಿ
ಚಿಕ್ಕ ಬಳ್ಳಾಪುರ(ಕಾಂಗ್ರೆಸ್)
ಪಡೆದ ಮತಗಳು: 4,24,800
ಗೆಲುವಿನ ಅಂತರ: 9,520
ಬಚ್ಚೇಗೌಡ(ಬಿಜೆಪಿ):4,15,280

ಜಿ.ಎಂ ಸಿದ್ದೇಶ್:
ದಾವಣಗೆರೆ(ಬಿಜೆಪಿ)
ಪಡೆದ ಮತಗಳು:5,18,894
ಗೆಲುವಿನ ಅಂತರ: 17,607
ಮಲ್ಲಿಕಾರ್ಜುನ್(ಕಾಂಗ್ರೆಸ್):5,01,287












Click it and Unblock the Notifications