ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್ನಲ್ಲಿ ಧರಂಸಿಂಗ್ಗೆ ಕೈಕೊಟ್ಟ ಮತದಾರ
ಬೀದರ್,ಮೇ.16: ಎರಡನೇ ಬಾರಿ ಸಂಸತ್ನ ಪ್ರವೇಶದ ಕನಸು ಕಾಣುತ್ತಿದ್ದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಕನಸು ನುಚ್ಚು ನೂರಾಗಿದೆ. ಬೀದರ್ನ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಕೈ ಹಿಡಿಯುವ ಮೂಲಕ ಕಾಂಗ್ರೆಸ್ಗೆ ಕೈ ಕೊಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ 92,222 ಮತಗಳಿಂದ ಧರಂ ಸಿಂಗ್ರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಸಂಸತ್ಗೆ ಆಯ್ಕೆಯಾಗಿದ್ದಾರೆ.
ಬೀದರ್ನಲ್ಲಿ ನರೇಂದ್ರ ಮೋದಿ ಮಾಡಿದ ಚುನಾವಣಾ ಪ್ರಚಾರ ಭಾಷಣ ಭಗವಂತ್ ಖೂಬಾ ಜಯಗಳಿಸಲು ನೆರವಾಗಿದೆ. ಆರಂಭದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಮೂಡಿದ್ದರೂ ಬೀದರ್ ಜನತೆ ಐದನೇ ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.
2009ರ ಲೋಕಸಭಾ ಚುನಾವಣೆಯಲ್ಲಿ 39,619 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪಲ್ಲಿ ಸೋಲಿಸಿದ್ದ ಧರಂಸಿಂಗ್ ಈ ಬಾರಿ 92,222 ಮತಗಳ ಅಂತರದಿಂದ ಸೋತಿದ್ದಾರೆ. 2009ರ ಚುನಾವಣೆಯಲ್ಲಿ ಶೇ.53ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.60.15ರಷ್ಟು ಮತದಾನ ಬೀದರ್ನಲ್ಲಾಗಿತ್ತು.
ಬೀದರ್ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
ಭಗವಂತ್ ಖೂಬಾ | 1 | ಬಿಜೆಪಿ | 4,59,290 |
ಧರಂ
ಸಿಂಗ್ | 2 | ಕಾಂಗ್ರೆಸ್ | 3,67,068 |
ಬಂಡೆಪ್ಪ ಕಾಶಂಪೂರ | 3 | ಜೆಡಿಎಸ್ | 58,728 |
ಶಂಕರ್ ಭಯ್ಯ | 4 | ಬಿಎಸ್ಪಿ | 13,079 |
Comments