ಅಗತ್ಯವಸ್ತುಗಳ ಖರೀದಿಗೆ ವಾಹನದಲ್ಲಿ ಹೋಗುವಂತಿಲ್ಲ, ಗೊಂದಲ ಮೂಡಿಸಿದ ನಿರ್ಬಂಧ
ಬೆಂಗಳೂರು, ಮೇ 07: ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್ ನಿಯಮಗಳು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಾಹನಗಳ ಓಡಾಟದ ನಿರ್ಬಂಧಕ್ಕೆ ಮುಂದಾಗಿರುವ ಸರ್ಕಾರ ಅಗತ್ಯ ವಸ್ತುಗಳ ಖರೀದಿಗೂ ವಾಹನ ಬಳಸಕೂಡದು ಎಂದು ಹೇಳಿರುವುದು ಗೊಂದಲ ಮೂಡಿಸಿದೆ.
ಬೆಳಗ್ಗೆ 6 ರಿಂದ 10 ಗಂಟೆ ಸೀಮಿತ ಅವಧಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಖಾಶ ನೀಡಲಾಗಿದೆ, ಹಾಗೂ ಸಂಜೆಯವರೆಗೂ ಹಾಲು ಖರೀದಿಗೆ ಸೌಕರ್ಯ ನೀಡಲಾಗಿದೆ. ಆದರೆ ಇದಕ್ಕೆ ಸಾರ್ವಜನಿಕರು ನಡೆದುಕೊಂಡೇ ಹೋಗಬೇಕೆಂದು ಹೇಳಿರುವುದು ಗೊಂದಲ ಮೂಡಿಸಿದೆ.

ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಅವಕಾಶ ನೀಡಲಾಗಿದೆ.
ಬೆಂಗಳೂರಿನ ಹೊರ ವಲಯಗಳಲ್ಲಿ ಹಾಗೂ ರಾಜ್ಯದ ಎರಡು ಮೂರನೇ ಹಂತದ ನಗರಗಳಲ್ಲಿ ಮನೆಯಿಂದ ಸಾಕಷ್ಟು ದೂರದಲ್ಲಿ ದಿನಸಿ ಅಂಗಡಿಗಳು ಇರುತ್ತವೆ ಹೀಗಿರುವಾಗ ವಾಹನದಲ್ಲಿ ಸಂಚರಿಸಲು ಅವಕಾಶ ನೀಡದೇ ನಡೆದುಕೊಂಡೇ ಹೋಗಬೇಕು ಎಂದು ಹೇಳಿರುವುದು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.
ಈ ಬಾರಿಯ ಕೊರೊನಾ ಗಾಳಿಯಲ್ಲೂ ಹರಡುವುದುರಿಂದ ನಡೆಸದುಕೊಂಡು ಹೋಗುವುದರಿಂದ ಇನ್ನಷ್ಟು ಸಮಸ್ಯೆಯಾಗಲಿದೆ. ಹಾಗೆಯೇ ನಡೆದುಕೊಂಡು ಹೋದರೆ ಅಗತ್ಯಕ್ಕಿಂತ ಹೆಚ್ಚಿನ ಸಮಯಗಳ ಕಾಲ ಮನೆಯಿದ ಹೊರಗೆ ಇರಬೇಕಾಗುತ್ತದೆ.
ಇದರಿಂದ ಜನರು ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ವಾಹನದ ಸಂಚಾರದ ಕುರಿತಂತೆ ಏರ್ಪಟ್ಟಿರುವ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.












Click it and Unblock the Notifications