ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫ್ತು ಮಾಡುವ ಕೈಗಾರಿಕೆಗಳಿಗೆ ಜೂನ್ 3ರಿಂದ ಅನುಮತಿ: ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜೂನ್ 02: ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವ ಕುರಿತು ಇಂಗಿತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಫ್ತು ಮಾಡುವ ಕೈಗಾರಿಕೆಗಳಿಗೆ ಜೂನ್ 3 ರಿಂದ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣ ಆಗಿಲ್ಲ, ಹೀಗಾಗಿ ಲಾಕ್‌ಡೌನ್ ವಿಸ್ತರಣೆ ಮಾಡಿ, ಕೆಲವು ಕಠಿಣ ನಿಯಮ ಜಾರಿಗೆ ತಂದು ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

 ಅನ್ ಲಾಕ್ ಮೂಡ್ ನಲ್ಲಿದ್ದ ರಾಜ್ಯಕ್ಕೆ ಶಾಕ್: 3 ಷರತ್ತು ಹಾಕಿದ ಕೇಂದ್ರ? ಅನ್ ಲಾಕ್ ಮೂಡ್ ನಲ್ಲಿದ್ದ ರಾಜ್ಯಕ್ಕೆ ಶಾಕ್: 3 ಷರತ್ತು ಹಾಕಿದ ಕೇಂದ್ರ?

ಬೆಂಗಳೂರಿನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ಈ ತಿಂಗಳಲ್ಲಿ ಹೆಚ್ಚು ಜನರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

Karnataka Lockdown : CM Yeddyurappa Says Export Business Will Be Allowed From June 3rd

ಹೀಗಾಗಿ ಈಗಾಗಲೇ ಜಾರಿಯಲ್ಲಿರುವ ಲಾಕ್​ಡೌನ್​ ಮುಂದುವರಿಸಬೇಕಾ, ಬೇಡವಾ ಎಂದು ಸರ್ಕಾರ ನಿರ್ಧರಿಸಲಿದೆ. ಹಲವರು ಲಾಕ್​ಡೌನ್​ ಮುಂದುವರಿಸುವುದು ಸೂಕ್ತ ಎಂದರೆ, ಇನ್ನು ಕೆಲವರು ನಿಧಾನವಾಗಿ ಸಡಿಲಿಕೆ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟಿರುವುದು ತಿಳಿದುಬಂದಿದೆ.

ರಾಜ್ಯದಲ್ಲಿ ಕೊರೊನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣ ಆಗಿಲ್ಲ. ಅದನ್ನು ಸರಿದೂಗಿಸಿಕೊಂಡು ಹೇಗೆ ಹೋಗಬೇಕೆಂದು ಚರ್ಚೆ ಮಾಡಲಾಗುತ್ತದೆ. ಮತ್ತಷ್ಟು ವಲಯಗಳಿಗೆ ವಿನಾಯಿತಿ ನೀಡಿಕೆ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಎರಡನೇ ಪ್ಯಾಕೇಜ್ ಇನ್ನೊಂದೆರಡು ದಿನಗಳಲ್ಲಿ ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಲಾಕ್​ಡೌನ್​ ಸಡಿಲಿಕೆ ಬಗ್ಗೆ ನಾಳೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂದು ಸಂಜೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡುತ್ತೇವೆ.

Recommended Video

Modi ಪರೀಕ್ಷೆ ರದ್ದು ಮಾಡಿದರೂ Suresh Kumar ಮನಸು ಮಾಡ್ತಿಲ್ಲ | Oneindia Kannada

ಲಾಕ್​ಡೌನ್​ ವಿಸ್ತರಣೆ ಮಾಡಿ ಬಿಗಿ ಕ್ರಮಗಳ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ. ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ರಫ್ತು ಮಾಡುವ ಉದ್ಯಮಗಳಿಗೆ ಗುರುವಾರದಿಂದ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
Cheif Minister Yediyurappa Says Export Business Will Be Allowed From June 3rd In Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X