ಲೋಕಲ್ ವಾರ್ ಮುಗೀತು ಫಲಿತಾಂಶಕ್ಕೆ ಕ್ಷಣಗಣನೆ
ಬೆಂಗಳೂರು, ಸೆಪ್ಟೆಂಬರ್ 1: ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತೆಣಿಗಕೆ ಪ್ರಕ್ರಿಯ ಸೆಪ್ಟೆಂಬರ್ 3ರಂದು ಆಯಾ ನಗರ ಪಟ್ಟಣಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಪ್ರಕ್ರಿಯೆಗೆ ಸಿದ್ಧತೆ ಪೂರ್ಣಗೊಂಡಿದೆ.
ಸೋಮವಾರ ಬೆಳಗ್ಗೆ 8ಗಂಟೆಯಿಂದ ಮತೆಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 2ಗಂಟೆಯ ಒಳಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ಆಗಸ್ಟ್ 31ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ 105 ಸ್ಥಳೀಯ ಸಂಸ್ಥೆಗಳಲ್ಲಿ ಶೇ,67 ರಷ್ಟು ಮತದಾನವಾಗಿದೆ. ಈಗಾಗಲೇ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳ ಎಲ್ಲಾ 45 ವಾರ್ಡ್ ಗಳಿಗೆ ಚುನಾವಣೆ ನಡೆದಿರಲಿಲ್ಲ, ಇನ್ನು ಕಲಬುರಗಿ ಜಿಲ್ಲೆಯ ಅಫ್ ಜಲ್ ಪುರ ಪುರಸಭೆಯ ವಾರ್ಡ್ ನಂಬರ್ 19ರಲ್ಲಿ ಎಲ್ಲಾ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದ್ದರಿಂದ ಚುನಾವಣೆ ಇರಲಿಲ್ಲ.
ಚಾಮರಾಜನಗರದ ಕೊಳ್ಳೇಗಾಲದಲ್ಲಿ ಬಿಎಸ್ ಪಿ ಅಭ್ಯರ್ತೀ ನಿಧನದಿಂದಾಗಿ ಚುನಾವಣೆ ನಿಂತಿದೆ, ಇನ್ನು ವಿವಿಧ ನಗರಸಭೆಯ 12 ವಾರ್ಡ್ ಗಳಿಂದ ಹಾಗೂ ಪುರಸಭೆಯ 18 ವಾರ್ಡ್ ಗಳಿಂದ ಒಟ್ಟು 30ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಯಾಗಿದ್ದಾರೆ.












Click it and Unblock the Notifications