ಸ್ಥಳೀಯ ಸಂಸ್ಥೆಗಳ ಚುನಾವಣೆ ಅಂಕಿ ಸಂಖ್ಯೆಗಳ ಲೆಕ್ಕ

ಬೆಂಗಳೂರು, ಆಗಸ್ಟ್ 02 : ಕರ್ನಾಟಕದಲ್ಲಿ ಮತ್ತೊಂದು ಚುನಾವಣೆ ಎದುರಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ಗುರುವಾರ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಅವರು ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು. 2013ರಲ್ಲಿ 208 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಈಗ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ 29 ನಗರ ಸಭೆ (927 ವಾರ್ಡ್), 53 ಪುರಸಭೆ (1247 ವಾರ್ಡ್), 23 ಪಟ್ಟಣ ಪಂಚಾಯಿತಿ (400 ವಾರ್ಡ್‌)ಗಳು ಸೇರಿ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. 25 ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿಲ್ಲ. ಈ ಜಿಲ್ಲೆಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಗಳ ಚುನಾವಣಾ ದಿನಾಂಕ ಘೋಷಣೆಯಾಗಿಲ್ಲ... ಚುನಾವಣಾ ಅಂಕಿ ಸಂಖ್ಯೆಗಳ ಲೆಕ್ಕ ಚಿತ್ರಗಳಲ್ಲಿ..

ಮತದಾನ, ಫಲಿತಾಂಶ

ಮತದಾನ, ಫಲಿತಾಂಶ

* ಆಗಸ್ಟ್ 10ರಂದು ಅಧಿಸೂಚನೆ ಪ್ರಕಟ
* ಆಗಸ್ಟ್ 17 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ಆಗಸ್ಟ್ 18 ನಾಮಪತ್ರ ಪರಿಶೀಲನೆ
* ಆಗಸ್ಟ್ 20 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
* ಆಗಸ್ಟ್ 29 ಮತದಾನ (ಬೆಳಗ್ಗೆ 7 ರಿಂದ ಸಂಜೆ 5 ಗಂಟೆ)
* ಒಟ್ಟು ಮತಗಟ್ಟೆ 3897
* ಸೆಪ್ಟೆಂಬರ್ 1ರಂದು ಮತ ಎಣಿಕೆ

ಮತದಾರರ ಸಂಖ್ಯೆ

ಮತದಾರರ ಸಂಖ್ಯೆ

105 ಸ್ಥಳೀಯ ಸಂಸ್ಥೆಗಳಲ್ಲಿನ ಮತದಾರರ ಸಂಖ್ಯೆ
* ಪುರುಷರು 17,96,001
* ಮಹಿಳೆ 18,07,336
* ಇತರೆ 354
* ಒಟ್ಟು 36,03691

ಚುನಾವಣಾ ವೆಚ್ಚ

ಚುನಾವಣಾ ವೆಚ್ಚ

* ನಗರಸಭೆ 2 ಲಕ್ಷ
* ಪುರಸಭೆ 1.5 ಲಕ್ಷ
* ಪಟ್ಟಣ ಪಂಚಾಯಿತಿ 1 ಲಕ್ಷ

ಶಿವಮೊಗ್ಗ, ಮೈಸೂರು, ತುಮಕೂರು ಮಹಾನಗರ ಪಾಲಿಕೆಗಳ ಚುನಾವಣೆ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿ ವಿಚಾರಣೆ ಮುಗಿದ ಬಳಿಕ ಚುನಾವಣಾ ದಿನಾಂಕ ಘೋಷಣೆಯಾಗಲಿದೆ.

ನೋಟಾಕ್ಕೆ ಮೊದಲ ಬಾರಿಗೆ ಅವಕಾಶ

ನೋಟಾಕ್ಕೆ ಮೊದಲ ಬಾರಿಗೆ ಅವಕಾಶ

ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೋಟಾ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರವನ್ನು ಬಳಸಲಾಗುತ್ತದೆ. ಅದರಲ್ಲಿರುವ ನೋಟಾ ಬಟನ್ ಒತ್ತುವ ಮೂಲಕ ನೋಟಾ ಮತ ಚಲಾವಣೆ ಮಾಡಬಹುದಾಗಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+