Alcohol Price Hike: ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ: ಹೊಸ ಬೆಲೆ ಜನವರಿ 20ರಿಂದಲೇ ಜಾರಿ!

ಕರ್ನಾಟಕದಲ್ಲಿ ಮದ್ಯ ಪ್ರಯರಿಗೆ ರಾಜ್ಯ ಸರ್ಕಾರವು ಹೊಸ ವರ್ಷದ ಮೊದಲ ವಾರವೇ ದೊಡ್ಡ ಶಾಕ್‌ವೊಂದನ್ನು ಕೊಟ್ಟಿದೆ. ರಾಜ್ಯದಲ್ಲಿ ಈಗಾಗಲೇ ಹಲವು ವಸ್ತುಗಳ ಬೆಲೆ ಏರಿಕೆಯ ಶಾಕ್‌ ಅನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊಟ್ಟಿದೆ. ಇದೀಗ ಮದ್ಯ ಪ್ರಿಯರಿಗೆ ಅದರಲ್ಲೂ ಬಿಯರ್‌ ಪ್ರಿಯರಿಗೆ ಶಾಕ್‌ ಕೊಡಲಾಗಿದೆ. ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಹೊಸ ವರ್ಷದ ಪ್ರಾರಂಭದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ ನಿಜ. ಆದರೆ ವರ್ಷ ಪೂರ್ತಿ ನಿರೀಕ್ಷಿತ ಆದಾಯ ಬಂದಿಲ್ಲ. ಹೀಗಾಗಿ ಇದೀಗ ರಾಜ್ಯ ಸರ್ಕಾರವು ಮದ್ಯದ ಬೆಲೆ ಏರಿಕೆ ಮಾಡುವುದಕ್ಕೆ ಮುಂದಾಗಿದೆ. ಯಾವ ಮದ್ಯದ ಬೆಲೆ ಹಾಗೂ ಎಷ್ಟು ಬೆಲೆ ಏರಿಕೆ ಮಾಡಲಾಗುತ್ತಿದೆ ಎನ್ನುವ ವಿವರ ಇಲ್ಲಿದೆ.

ಮದ್ಯ ಮಾರಾಟದಲ್ಲಿ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರವು ಮದ್ಯದ ಮೇಲೆ ಬೆಲೆ ಏರಿಕೆ ಮಾಡುವುದಕ್ಕೆ ಮುಂದಾಗಿದೆ. ಅದರಲ್ಲೂ ಬಿಯರ್‌ ಬೆಲೆ ಏರಿಕೆ ಆಗಲಿದೆ. ಈಗಾಗಲೇ ವಿವಿಧ ವಸ್ತುಗಳ ಬೆಲೆ ಏರಿಕೆ ನಡೆದಿದ್ದು. ಕಿಕ್‌ ಪ್ರಿಯರಿಗೆ ಬೆಲೆ ಏರಿಕೆಯ ಕಿಕ್‌ ಕೊಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಪ್ರೀಮಿಯಂ (ಸ್ಟ್ರಾಂಗ್ ಬಿಯರ್‌) ಮದ್ಯ ಬಾಟಲ್​ವೊಂದಲಕ್ಕೆ ಕನಿಷ್ಠ 15 ರಿಂದ 50 ರೂ.ವರೆಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

Liquor Price Hike Strong Beer Price Hike New Price Effect From January 20

ಕಳೆದ ವರ್ಷದಿಂದಲೇ ಪ್ರಸ್ತಾವನೆ: ಕರ್ನಾಟಕದಲ್ಲಿ ಬಿಯರ್‌ ಬೆಲೆ ಹೆಚ್ಚಳ ಮಾಡಬೇಕು ಎಂದು 2024ರ ಆಗಸ್ಟ್‌ನಿಂದಲೂ ಚರ್ಚೆ ನಡೆದಿದೆ. ಕಳೆದ ವರ್ಷವೇ ಈ ನಿಟ್ಟಿನಲ್ಲಿ ಕರಡು ಅಧಿಸೂಚನೆಯನ್ನು ಸಹ ಹೊರಡಿಸಲಾಗಿತ್ತು. ಆದರೆ, ಕಳೆದ ವರ್ಷ ರಾಜ್ಯ ಸರ್ಕಾರವು ಬೆಲೆ ಏರಿಕೆಗೆ ಅನುಮತಿ ಕೊಟ್ಟಿರಲಿಲ್ಲ. ಇದೀಗ ಹೊಸ ಬೆಲೆಯು ಜನವರಿ 20ದಿಂದಲೇ ಜಾರಿಗೆ ಬರಲಿದ್ದು, ಪ್ರತಿ ಬಿಯರ್​ನ ಬೆಲೆಯು ಅಲ್ಕೋಹಾಲ್​ ಅಂಶದ ಅನುಸಾರ ಏರಿಕೆಯಾಗಲಿದೆ ಎನ್ನಲಾಗಿದೆ.

ಬೆಲೆ ಏರಿಕೆಗೆ ವಿರೋಧ: ಇನ್ನು ಬಿಯರ್‌ ಬೆಲೆ ಏರಿಕೆ ಮಾಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಪ್ರೀಮಿಯಂ ಬಿಯರ್​ ಬೆಲೆ ಏರಿಕೆ ಮಾಡುತ್ತಿರುವ ವಿಚಾರವಾಗಿ ಈಗಾಗಲೇ ಕೆಲವು ಪ್ರಮುಖ ಬಿಯರ್‌ ಸಂಸ್ಥೆಗಳು ತಮ್ಮ ವಿರೋಧ ಹಾಗೂ ಅಸಮಾಧಾನ ವ್ಯಕ್ತಪಡಿಸಿದೆ. ಈಗಾಗಲೇ ದೇಶದಲ್ಲೇ ಬಿಯರ್‌ ಬೆಲೆ ಹೆಚ್ಚಳವಾಗಿದೆ. ಇದೀಗ ಹೊಸ ಬೆಲೆಯಿಂದ ಇನ್ನಷ್ಟು ಹೆಚ್ಚಳವಾದಂತೆ ಆಗುತ್ತದೆ. ಈ ರೀತಿ ಬೆಲೆ ಏರಿಕೆ ಮಾಡುವುದರಿಂದಾಗಿ ಬಿಯರ್‌ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಬ್ರೂವರ್ಸ್ ಹೇಳಿದೆ.

Liquor Price Hike Strong Beer Price Hike New Price Effect From January 20

ಬಜೆಟ್‌ಗೂ ಮುನ್ನವೇ ಶಾಕ್‌: ಇನ್ನು ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಮಾರ್ಚ್‌ - ಏಪ್ರಿಲ್‌ಗೂ ಮುನ್ನವೇ ಶಾಕ್‌ ಕೊಟ್ಟಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಬಜೆಟ್‌ ಮಂಡನೆ ಮಾಡುವಾಗ ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರವು ಪರಿಷ್ಕರಿಸುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟ ಪರಿಷ್ಕರಣೆ ಮಾಡಿರುವುದಕ್ಕೆ ಮದ್ಯ ಪ್ರಿಯರಿಂದಲೂ ವಿರೋಧ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಅಬಕಾರಿ ಇಲಾಖೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂದು ಹೇಳಲಾಗಿದೆ. ಅದಕ್ಕೆ ಬೆಲೆ ಏರಿಕೆಯೂ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಜೆಟ್‌ಗೂ ಮುನ್ನವೇ ಬೆಲೆ ಏರಿಕೆ: ಇನ್ನು ಬಜೆಟ್‌ಗೂ ಮುನ್ನವೇ ಬೆಲೆ ಏರಿಕೆಯಾದಂತಾಗಿದೆ. ಸಾಮನ್ಯವಾಗಿ ರಾಜ್ಯ ಸರ್ಕಾರವು ಬಜೆಟ್‌ ಮಂಡಿಸುವಾಗ ವಿವಿಧ ಯೋಜನೆ ಹಾಗೂ ಅನುದಾನಗಳನ್ನು ಸರಿದೂಗಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಮದ್ಯ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯನ್ನ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+