Liquor license: ಮದ್ಯದಂಗಡಿ ಲೈಸೆನ್ಸ್‌ ಇ-ಹರಾಜಿಗೆ ತೀವ್ರ ವಿರೋಧ, ಕಾರಣವೇನು?

ಅಬಕಾರಿ ಇಲಾಖೆಯು 579 ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಗೆ ಮುಂದಾಗಿದೆ. ಈ ಹೊತ್ತಿನಲ್ಲೇ ಇದಕ್ಕೆ ದೊಡ್ಡ ವಿಘ್ನ ಎದುರಾಗಿದೆ. ಕೂಡಲೇ ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಯನ್ನು ಕೈಬಿಡುವಂತೆ ಬೆಂಗಳೂರು ಹೋಟೆಲ್‌ಗಳ ಸಂಘ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಪತ್ರ ಬರೆದಿದೆ. ಸಂಪನ್ಮೂಲ ಕ್ರೂಢೀಕರಿಸುವ ಉದ್ದೇಶದಿಂದ ಸರ್ಕಾರ ಇ-ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಅಸಮಂಜಸ ಎಂದು ವಿರೋಧ ವ್ಯಕ್ತಪಡಿಸಿದೆ.

ಈಗಾಗಲೇ ನಮ್ಮ ರಾಜ್ಯದಲ್ಲಿ 13,972 ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಈ ಸಂದರ್ಭದಲ್ಲಿ ಹೊಸದಾಗಿ 579 ಮದ್ಯದಂಗಡಿಗಳಿಗೆ (CL 2A 483 ಮತ್ತು CL 9A- 96) ಲೈಸೆನ್ಸ್‌ ಅನ್ನು ಇ-ಹರಾಜು ಮುಖಾಂತರ ಅಂದಾಜು 1,500 ಕೋಟಿ ಸಂಪನ್ಮೂಲ ಕ್ರೂಢೀಕರಿಸುವ ಉದ್ದೇಶದಿಂದ ಸರ್ಕಾರ ಇ-ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದೆ.

Liquor License E-Auction Faces Hoteliers Strong Opposition In Karnataka

ಹೆಚ್ಚು ತೆರಿಗೆಯಿಂದ ವ್ಯಾಪಾರಕ್ಕೆ ಹೊಡೆತ

ಮದ್ಯದ ಮೇಲೆ ಹಾಕಿರುವ ಹೆಚ್ಚುವರಿ ತೆರಿಗೆಗಳಿಂದ ನಮ್ಮ ವ್ಯಾಪಾರ ಕುಂಠಿತವಾಗಿರುತ್ತದೆ. ಇದರ ಜೊತೆಗೆ ಈ ಬಾರಿ ಅಂದಾಜು 5 ಲಕ್ಷದಷ್ಟು ಅಬಕಾರಿ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ. ಇದಲ್ಲದೆ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ ಅಂದಾಜು 40 ಸಾವಿರ ಕೋಟಿಯಷ್ಟು ಅಬಕಾರಿ ತೆರಿಗೆ ಆದಾಯ ಕೂಡ ದೊರಕಿಸುತ್ತಿದ್ದೇವೆ. ಹೀಗಿದ್ದರೂ ಇ-ಹರಾಜು ಮೂಲಕ ಪರವಾನಗಿಗಳನ್ನು ನೀಡುವ ಕ್ರಮವು ಉದ್ಯಮದ ಅಳಿವು-ಉಳಿವಿನ ಸಮಸ್ಯೆಯನ್ನು ಉಂಟುಮಾಡಲಿದೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಕಾರಣದಿಂದ ಈಗಿರುವ ಮದ್ಯದಂಗಡಿಗಳಿಗೆ ಆರ್ಥಿಕ ಹೊಡೆತವಾಗದಿರಲು ತಕ್ಷಣ ಇ-ಹರಾಜು ಪ್ರಕ್ರಿಯೆಯನ್ನು ಕೈಬಿಡಬೇಕು ಮತ್ತು ಪರವಾನಗಿ ಪಡೆದಿರುವ ಮದ್ಯದಂಗಡಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ಪ್ಲ್ಯಾನ್‌ ಏನು?

ಬಾರ್‌ ಲೈಸೆನ್ಸ್‌ ಪಡೆಯುವ ವಿಚಾರವಾಗಿ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿತ್ತು. ರಾಜ್ಯ ಹಣಕಾಸು ಇಲಾಖೆಯು ನಿಷ್ಕ್ರಿಯ ಅಬಕಾರಿ ಪರವಾನಗಿಗಳನ್ನು ಹರಾಜು ಮಾಡಲು ಮುಂದಾಗಿದ್ದು, ಈ ಸಂಬಂಧ ಕರಡು ನಿಯಮಗಳನ್ನು ಸಹ ಹೊರಡಿಸಿತ್ತು. ಕರ್ನಾಟಕ ಸರ್ಕಾರವು ಇದೀಗ ಬಾಕಿ ಉಳಿದಿರುವ ಮದ್ಯದ ಲೈಸೆನ್ಸ್‌ ಹರಾಜು ಹಾಕುವ ಬಗ್ಗೆ ಬಿಗ್‌ ಅಪ್ಡೇಟ್‌ ನೀಡಿತ್ತು. ಹಣಕಾಸು ಇಲಾಖೆಯು ಸದ್ಯ ಬಾಕಿ ಉಳಿದಿರುವ ಅಬಕಾರಿ ಲೈಸೆನ್ಸ್‌ಗಳನ್ನ ಹರಾಜು ಮಾಡುವ ಕುರಿತು ಕರಡು ನಿಯಮಗಳನ್ನು ಹೊರಡಿಸಿತ್ತು.

ರಾಜ್ಯ ಸರ್ಕಾರವು ಆದಾಯದ ನಿರೀಕ್ಷೆಯಿಂದ ಮದ್ಯದ ಲೈಸೆನ್ಸ್‌ಗಳ ಹರಾಜಿಗೆ ಮುಂದಾಗಿದೆ. ಈ ಮೂಲಕ ಹೆಚ್ಚುವರಿ ಸಂಪನ್ಮೂಲಗಳನ್ನು ಒಗ್ಗೂಡಿಸಲು ನಿಷ್ಕ್ರಿಯವಾಗಿ ಉಳಿದಿರುವ ಚಿಲ್ಲರೆ ಮದ್ಯದ ಅಂಗಡಿ (CL-2) ಲೈಸೆನ್ಸ್‌ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ (CL-9) ಲೈಸೆನ್ಸ್‌ಗಳನ್ನು ಹರಾಜು ಹಾಕಲು ಮುಂದೆ ಬಂದಿದೆ. ಚಿಲ್ಲರೆ ಮಾರಾಟ ಮಳಿಗೆಗಳಿಗೆ ನೀಡಲಾಗುವ CL-11(C) ಲೈಸೆನ್ಸ್‌ಗಳನ್ನು ಕೂಡ ಅಧಿಕಾರಿಗಳು ಹರಾಜು ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+