liquor in Winter: ಚಳಿಗಾಲದಲ್ಲಿ ಬೆಸ್ಟ್ ಮದ್ಯಗಳಿವು, ಚಳಿಗಾಲದಲ್ಲಿ ಮದ್ಯ ಸೇವನೆ ಒಳ್ಳೆಯದೇ ?
liquor in Winter: ಕರ್ನಾಟಕದಲ್ಲಿ ಚಳಿ ಹೆಚ್ಚಳವಾಗುತ್ತಿದೆ. ಈ ರೀತಿ ಇರುವಾಗಲೇ ಕೆಲವೊಂದು ಮದ್ಯಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಚಳಿಗಾಲಕ್ಕೆ ಅತ್ಯುತ್ತಮವಾದ ಮದ್ಯಗಳಲ್ಲಿ Warm Cocktails ಸಹ ಒಂದಾಗಿದೆ. ರಮ್‌ಗೆ ಸಹ ಭಾರೀ ಬೇಡಿಕೆ ಇದೆ. ವಿಸ್ಕಿ, ರಮ್ ಮತ್ತು ಬ್ರಾಂಡಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ. ಒಟ್ಟಾರೆ ಚಳಿಗಾಲದಲ್ಲಿ ಯಾವ ಮದ್ಯ ಬೆಸ್ಟ್. ಯಾವುದನ್ನು ಜನ ಇಷ್ಟಪಡುತ್ತಾರೆ ಅನ್ನೋದನ್ನ ನೋಡೋಣ.
Hot Toddy: ಈ ಮದ್ಯ ವಿಸ್ಕಿಯು ಜೇನುತುಪ್ಪ, ನಿಂಬೆ ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳಿಂದ ತಯಾರಿಸಲಾಗಿದ್ದು, ಚಳಿಗಾಲಕ್ಕೆ ಬೆಸ್ಟ್ ಎಂದು ಪರಿಗಣಿಸಲಾಗುತ್ತದೆ.
Hot Buttered Rum: ಹಾಟ್ ಬಟರ್ಡ್ ರಮ್ ಅನ್ನು ಬೆಣ್ಣೆ, ಸಕ್ಕರೆ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ರಿಚ್ ಕಾಕ್ಟೈಲ್ ಇದಾಗಿದ್ದು ಚಳಿಗಾಲಕ್ಕೆ ಬೆಚ್ಚಗಿನ ರಮ್ ಇದಾಗಿದೆ.

Brandy: ಬ್ರಾಂಡಿ ಸಹ ಬೆಚ್ಚಗಿನ ಬ್ರ್ಯಾಂಡ್ ಆಗಿದೆ. ಚಳಿ ಹೆಚ್ಚಾಗಿರುವ ರಾತ್ರಿ ಸಮಯದಲ್ಲಿ ಇದನ್ನು ಕುಡಿಯಲಾಗುತ್ತದೆ. ಬ್ರಾಂಡಿಯಲ್ಲಿ ಉತ್ಕರ್ಷಣವಾದ ಅಂಶಗಳಿದ್ದು, HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುವಂತಹ ಪ್ರಯೋಜನಗಳನ್ನು ನೀಡುತ್ತದೆ. ಶೀತಗಳಂತಹ ಸಾಮಾನ್ಯ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ ಎನ್ನುವ ಮಾತಿದೆ.
Spiked Mexican Hot Chocolate: ಇನ್ನು ಚಳಿಗಾದಲ್ಲಿ ಮದ್ಯ ಪ್ರಿಯರು ರೆಫರ್ ಮಾಡುವ ಮದ್ಯಗಳಲ್ಲಿ ಸ್ಪೈಕ್ಡ್ ಮೆಕ್ಸಿಕನ್ ಹಾಟ್ ಚಾಕೊಲೇಟ್ ಸಹ ಒಂದಾಗಿದೆ. ಮಸಾಲೆಯುಕ್ತ, ಮೆಣಸಿನಕಾಯಿ ಮತ್ತು ಕೋಕೋವನ್ನು ಇದರಲ್ಲಿ ಸೇರಿಸಲಾಗುತ್ತದೆ.
Whisky: ಚಳಿಗಾಲದಲ್ಲಿ ಅದರಲ್ಲೂ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ಮದ್ಯಗಳಲ್ಲಿ ವಿಸ್ಕಿ ಸಹ ಪ್ರಮುಖವಾಗಿದೆ. ಕಾಕ್‌ಟೇಲ್‌ನೊಂದಿಗೆ ವಿಸ್ಕಿಗೂ ಹೆಚ್ಚಿನ ಡಿಮ್ಯಾಂಡ್ ಇರುತ್ತದೆ. ಚಳಿಗಾಲದಲ್ಲಿ ಈ ಮದ್ಯವನ್ನು ಸೇವಿಸುವುದರಿಂದ ದೇಹದಲ್ಲಿ ಬೆಚ್ಚಗಿನ ಅನುಭವ ಆಗುತ್ತದೆ ಎನ್ನುವ ಅಭಿಪ್ರಾಯ ಹಲವರಲ್ಲಿದೆ.
Rum: ವಿಸ್ಕಿಯ ನಂತದ ರಮ್‌ಗೆ ಹೆಚ್ಚೆಚ್ಚು ಬೇಡಿಕೆ ಇದೆ. ಇದನ್ನು ಚಳಿಗಾಲದ ಪ್ರಮುಖ ಹಾಗೂ ಬೆಸ್ಟ್ ಡ್ರಿಂಕ್ಸ್‌ಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತದೆ.
Mulled Wine: ಮಲ್ಲ್ಡ್ ವೈನ್ ದಾಲ್ಚಿನ್ನಿ, ಲವಂಗ ಮತ್ತು ಸ್ಟಾರ್ ಸೋಂಪು ಮುಂತಾದ ಮಸಾಲೆಗಳೊಂದಿಗೆ ಕೆಂಪು ವೈನ್ ತಯಾರಿಸಲಾಗುತ್ತದೆ. ಬೆಚ್ಚಗಿನ ಅನುಭವ ನೀಡುವ ಹಾಗೂ ಮಿತವಾಗಿ ಸೇವಿಸಿದರೆ ಕೆಲವೊಂದು ಒಳ್ಳೆಯ ಅಂಶಗಳೂ ಈ ಮದ್ಯದಲ್ಲಿ ಅಡಗಿದೆ.
Wine: ವೈನ್ ಸಂಜೆ ಸಮಯದಲ್ಲಿ ಪಾರ್ಟಿಗಳಲ್ಲಿ ಸೇವಿಸುವ ಮದ್ಯಗಳಲ್ಲಿ ವೈನ್ ಸಹ ಪ್ರಮುಖವಾಗಿದೆ. ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ವೈನ್ ಹೆಚ್ಚಿಸಲಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುವುದು, ಅರಿವು ಹೆಚ್ಚಿಸುವ ಅಂಶ ಇದರಲ್ಲಿ ಇದೆ. ಆದರೆ ಮುಖ್ಯವಾಗಿ ಮಿತವಯ ಸೇವನೆ ಮಾಡುವುದು ಉತ್ತಮ.
ವಿಶೇಷ ಸೂಚನೆ: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮದ್ಯ ಸೇವನೆ ಮಾಡುವುದನ್ನು ಈ ಲೇಖನ ಪ್ರೋತ್ಸಾಹಿಸುವುದಿಲ್ಲ.












Click it and Unblock the Notifications