ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ: ಜಲ್ಲಿಕಟ್ಟುವಿನಂತೆ ಕಂಬಳವೂ ನಡೆಯಲಿ

Posted By:
Subscribe to Oneindia Kannada

ಬೆಂಗಳೂರು, ಜ 21: ಜಲ್ಲಿಕಟ್ಟು ವಿಚಾರದಲ್ಲಿ ತಮಿಳಿಗರ ಹೋರಾಟ ಮೇಲುಗೈ ಸಾಧಿಸಿದ ಹೊತ್ತಿನಲ್ಲಿ ದಕ್ಷಿಣಕನ್ನಡದ ಕಂಬಳ ಕ್ರೀಡೆಗೂ ಅನುಮತಿ ನೀಡಬೇಕು ಎನ್ನುವ ಕೂಗು ಅಲ್ಲಲ್ಲಿ ಕೇಳಿ ಬರಲಾರಂಭಿಸಿದೆ.

ನವರಸ ನಾಯಕ ಜಗ್ಗೇಶ್, ಕಂಬಳ ಕ್ರೀಡೆ ನಡೆಯಬೇಕೆಂದು ಸಾಲು ಸಾಲು ಟ್ವೀಟ್ ಮಾಡಿದ್ದು, ಕನ್ನಡಿಗರಿಗೆ ಒಗ್ಗಟ್ಟಿನ ಕೊರತೆಯಿದೆ. (ತಮಿಳರ ಸಾಂಸ್ಕೃತಿಕ ಆಶಯ ಪೂರೈಸಲು ಕಟಿಬದ್ಧ)

Like Jallikattu, Kambala also should allow to Play, Jaggesh tweet

ಈಗಲಾದರು ಒಂದಾಗಿ!ಕನ್ನಡಿಗರು ಯಾವುದರಲ್ಲೂ ಕಮ್ಮಿಯಿಲ್ಲಾ, ಶುರುವಾಗಲಿ ಒಗ್ಗಟ್ಟಿನಮಂತ್ರ, ಒಂದಾಗಿ ಹೋರಾಡಲಿ ನ್ಯಾಯಕ್ಕಾಗಿ ಎಂದು ಟ್ವೀಟ್ ಮಾಡಿದ್ದಾರೆ.

ಯಾರು ಒಪ್ಪುತ್ತಾರೊ ಬಿಡುತ್ತಾರೋ, ನಾನು ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ ಕಂಬಳ ಬೇಕು ಅಂತ ಕೂಗಾಕುತ್ತೇನೆ. ನಮ್ಮಹಕ್ಕು, ನಮ್ಮ ಪದ್ದತಿ ನಿಲ್ಲಿಸಲು ಯಾರಿಗೂ ಹಕ್ಕಿಲ್ಲಾ ಎಂದು ಜಗ್ಗೇಶ್ ಹೇಳಿದ್ದಾರೆ.

Like Jallikattu, Kambala also should allow to Play, Jaggesh tweet

ಯಾಕೆ ಕಂಬಳಕ್ಕೆ ತಿಲಾಂಜಲಿ? ಜಲ್ಲಿಕಟ್ಟುವಿನಂತೆ ಕಂಬಳವೂ ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆ.

ತಮಿಳರಂತೆ ಒಗ್ಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಇಡೀ ವಿಶ್ವದ ಕನ್ನಡಿಗರು ಒಂದಾಗಿ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಜಗ್ಗೇಶ್ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Like Jallikattu, Kambala also should allow to Play, Navarasa Nayaka Jaggesh tweet.
Please Wait while comments are loading...