Get Updates
Get notified of breaking news, exclusive insights, and must-see stories!

Prajwal Revanna case: ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ವರ್ಕೌಟ್ ಆಗ್ಲಿಲ್ಲ ನಿಂಬೆಹಣ್ಣಿನ ಪವರ್....!

ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಚಾರ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮನುಕುಲವೇ ತಲೆತಗ್ಗಿಸುವಂತಹ ದೃಶ್ಯಗಳು ಎಲ್ಲೆಡೆ ಹರಿದಾಡ ತೊಡಗಿವೆ. ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದು ಸ್ಪಷ್ಟ ಎಂದು ದೂರಲಾಗಿದೆ. ಆದರೆ ಇದರ ತ್ವರಿತ ವಿಚಾರಣೆ, ಕ್ರಮಕ್ಕೆ ಮೀನಾಮೇಷ ಎಣಿಸುತ್ತಿರುವುದು ವಿಪರ್ಯಾಸ. ಇದು ದಳಪತಿಗಳ ದರ್ಬಾರ್ ಅಲ್ಲದೆ ಮತ್ಯೇನು ಅಲ್ಲ ಎಂದು ಆಡಳಿತ ಪಕ್ಷ ಟೀಕಿಸಿದೆ.

ಹೋದಲ್ಲಿ ಬಂದಲ್ಲಿ ಲಿಂಬೆಹಣ್ಣು ಹಿಡಿದುಕೊಳ್ಳುತ್ತಿದ್ದ ಹೆಚ್‌ಡಿ ರೇವಣ್ಣ ಅವರ ಪುತ್ರ ಈ ಪ್ರಜ್ವಲ್ ರೇವಣ್ಣ. ಈ ಹಿಂದೆ ಪ್ರಧಾನಿ ಆಗಿದ್ದ ಎಚ್‌ಡಿ ದೇವೇಗೌಡ ಅವರ ಪ್ರೀತಿಯ ಮೊಮ್ಮಗ. ಈತನ ಮೇಲೀಗ ಲೈಂಗಿಕ ವ್ಯಸನಿ ಎನ್ನುವ ಗಂಭೀರ ಆರೋಪವಿದೆ. ಯಾಕೆಂದರೆ ವೈರಲ್ ಆದ ವಿಡಿಯೋದಲ್ಲಿ ಒಂದಲ್ಲ ಎರಡಲ್ಲ ಬಹು ಮಹಿಳೆಯರ ಮೇಲೆ ಈತ ಕಾಮಕ ಕೃತ್ಯ ಎಸಗಿದ್ದಾನೆ ಎನ್ನುವ ಆರೋಪವಿದೆ.

Lemons power is not workout In case of Prajwal Revanna

ತಾಯಿ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ?

ವೈರಲ್ ಆದ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣನ ಮುಖ ಸ್ಪಷ್ಟವಾಗಿದ್ದರೂ ಇದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ಮಾಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ. ಅಕ್ಕ-ತಂಗಿ ಅನ್ನದೆ ತಾಯಿ ವಯಸ್ಸಿನ ಮಹಿಳೆಯರ ಮೇಲೆ ಎರಗಿದ ಕಾಮುಕ ಪಾಪಿ ಪ್ರಜ್ವಲ್ ರೇವಣ್ಣ ಎಂದು ಇಡೀ ಮಹಿಳಾ ಸಮಾಜವೇ ಆಕ್ರೋಶಗೊಂಡಿದೆ. ಅಷ್ಟೇ ಅಲ್ಲ ಈ ಪಾಪಿಗಳಿಗೆ ತ್ವರಿತವಾಗಿ ಶಿಕ್ಷೆಯಾಗಬೇಕು ಎಂದು ಜನ ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ಕೂಡಲೆ ವಿಚಾರಣೆಗೆ ಒಳಪಡಿಸಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ.

ಪೆನ್‌ಡ್ರೈವ್ ಹೀರೋ

ಅತ್ಯಾಚಾರವೆಸಗಿ ವಿಡಿಯೋ ಕೂಡ ಮಾಡಿಕೊಂಡು ಅದೇ ವಿಡಿಯೋವನ್ನು ತೋರಿಸಿ ಮಹಿಳೆಯರನ್ನು ಮತ್ತೆ ಮತ್ತೆ ತನ್ನ ಕಾಮುಕ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದನೆಂದು ನೊಂದ ಮಹಿಳೆಯರು ಕಣ್ಣೀರು ಹಾಕಿ ದೂರು ನೀಡಿದ್ದಾರೆ. ಪೆನ್‌ಡ್ರೈವ್ ವಿಚಾರ ಹೊರಬಂದು ಹಾಸನ ಲೋಕಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಈ ಪೆನ್‌ಡ್ರೈವ್ ಹೀರೋ ವಿದೇಶಕ್ಕೆ ಎಸ್ಕೇಪ್ ಆಗಿದ್ದಾರೆ.

ವಿಡಿಯೋ ಬಗ್ಗೆ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ಮಗನನ್ನು ಸೇಫ್ ಆಗಿ ವಿದೇಶಕ್ಕೆ ಹಾರಿಸಿದ ತಂದೆ ಮಾಧ್ಯಮದ ಮುಂದೆ ತುಟಿ ಬಿಟಕ್ ಅಂದಿಲ್ಲ. ಇದರಿಂದಾಗಿ ಮಗನಿಗೆ ನಿಂಬೆಹಣ್ಣು ಕಟ್ಟಿ ಕೈಲಾಸಕ್ಕೆ ಹಾರಿಸಿದ್ದಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮಗನನ್ನು ಕಾಪಾಡಲು ತಂದೆ ರೇವಣ್ಣ ಅವರೇ ಮಗನನ್ನು ವಿದೇಶಕ್ಕೆ ಕಳುಹಿಸಿದ್ದಾರೆನ್ನಲಾಗುತ್ತಿದೆ. ಆದರೆ ಮಗ ಮಾಡಿರುವುದು ಸಣ್ಣ ಕೃತ್ಯವಲ್ಲ. ಅದೊಂದು ಅಕ್ಷಮ್ಯ ಅಪರಾಧ. ಅದಕ್ಕೆ ತಕ್ಕ ಕ್ರಮ ಕೈಗೊಳ್ಳಬೇಕು. ಇಲ್ಲಿ ರೇವಣ್ಣ ಅವರ ಲಿಂಬೆಹಣ್ಣು ವರ್ಕೌಟ್ ಆಗಲ್ಲ ಎಂದು ಜನ ಆಕ್ರೋಶಗೊಂಡಿದ್ದಾರೆ.

Lemons power is not workout In case of Prajwal Revanna

ತಂದೆ ಮಗನ ವಿರುದ್ಧ ಎಫ್‌ಐಆರ್

ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹಾಗೂ ತಂದೆ ಎಚ್‌ಡಿ ರೇವಣ್ಣ ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರಿನಲ್ಲಿ ತಂದೆ ಎಚ್‌ಡಿ ರೇವಣ್ಣ ಅವರನ್ನೇ ಎ1 ಆರೋಪಿಯಾಗಿ ನಮೂದಿಸಿದ್ದು, ಎ2 ಪ್ರಜ್ವಲ್ ರೇವಣ್ಣ ಆಗಿದ್ದಾರೆ. ಹಲವು ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್‌ಡ್ರ್ಐವ್ ಹರಿದಾಡಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

ಎಸ್ಐಟಿ ತಂಡ ರಚನೆ

ಒತ್ತಡ ಹೆಚ್ಚಾಗುತ್ತಿದ್ದಂತೆ ಸರ್ಕಾರ ಇಡೀ ಪ್ರಕರಣವನ್ನು ತನಿಖೆಗೊಳಪಡಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ನೇಮಿಸಿದೆ. ಆ ತಂಡ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ ಎಂಬ ಭರವಸೆಯಿದೆ. ಆದರೆ, ಪ್ರಜ್ವಲ್ ರೇವಣ್ಣರಿಗೆ ಸಂಬಂಧಿಸಿದ ಹಳೆಯ ವಿಡಿಯೋಗಳನ್ನು ಈಗ ಚುನಾವಣೆ ಹತ್ತಿರದಲ್ಲಿ ಇದ್ದಾಗ ಏಕೆ ಬಿಡುಗಡೆ ಮಾಡಲಾಯಿತು. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಅವರಿಗೂ ಶಿಕ್ಷೆ ವಿಧಿಸಬೇಕಿದೆ ಎನ್ನುವುದು ಜೆಡಿಎಸ್ ಆಗ್ರಹವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+