ಪರಿಷತ್ ಚುನಾವಣೆ; ಕೋವಿಡ್ ಮಾರ್ಗಸೂಚಿಗಳು
ಬೆಂಗಳೂರು, ಅಕ್ಟೋಬರ್ 27: ನಾಲ್ವರು ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 28ರಂದು ಮತದಾನ ನಡೆಯಲಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮತದಾನಕ್ಕೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಆಗ್ನೇಯ ಮತ್ತು ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ. ಪದವೀಧರರು, ಶಿಕ್ಷಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಮತಯಂತ್ರವನ್ನು ಉಪಯೋಗ ಮಾಡುವುದಿಲ್ಲ. ಮತಚೀಟಿಯಲ್ಲಿ ದಾಖಲಾದ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆದ್ದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ನವೆಂಬರ್ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕೋವಿಡ್ 19 ಮುಂಜಾಗೃತಾ ಕ್ರಮ
* ತಪ್ಪದೇ ಮಾಸ್ಕ್ ಧರಿಸಿ, ಮತಕೇಂದ್ರ ಪ್ರವೇಶಿಸುವ ಮುನ್ನ ತಪ್ಪದೇ ಸ್ಯಾನಿಟೈಸರ್ ಬಳಸಿ 20 ಸೆಕೆಂಡ್ ಗಳವರೆಗೆ ಕೈಗಳನ್ನು ಉಜ್ಜವುದು, ಬೇರೆಯವರಿಂದ ಕನಿಷ್ಟ 6 ಅಡಿ ಅಂತರವನ್ನು ಕಾಪಾಡಿ, ನಿಮ್ಮ ಶರೀರದ ತಾಪಮಾನ ತಿಳಿಯಲು ಆರೋಗ್ಯ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು.
* ತಾಪಮಾನವು ಹೆಚ್ಚಾಗಿದ್ದಲ್ಲಿ ಮತ್ತೊಮ್ಮೆ ತಾಪಮಾನ ಪರಿಶೀಲನೆ ಮಾಡಲಾಗುತ್ತದೆ. ಮತ್ತೇ ಹೆಚ್ಚಾಗಿದ್ದಲ್ಲಿ ನಿಮ್ಮನ್ನು ವೈದ್ಯರು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಾರೆ.
* ಮತದಾನ ಮಾಡಲು ಬಂದವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದಲ್ಲಿ 4 ಗಂಟೆಗೆ ಮತಕೇಂದ್ರಕ್ಕೆ ಅವರನ್ನು ಪುನಃ ಕರೆತರಲಾಗುವುದು. ನೀವು ಕ್ವಾರಂಟೈನ್ ಆಗಿದ್ದಲ್ಲಿ 4 ರಿಂದ 5 ಗಂಟೆಯೊಳಗೆ ಮತದಾನ ಮಾಡಲು ಬರಬಹುದು.
* ನಿಮಗೆ ಪಿ.ಪಿ.ಇ ಕಿಟ್, ಕೈಗವಸು ಮತ್ತು ಪೇಸ್ ಶೀಲ್ಡ್ ನೀಡಲಾಗುವುದು. ನೀವು ಕೋವಿಡ್-19 ಸೋಂಕಿತರಾಗಿದ್ದು, ಮತದಾನ ಮಾಡಲು ಇಚ್ಛಿಸಿದಲ್ಲಿ, ಸಂಬಂಧಪಟ್ಟ ಬಿ.ಎಲ್.ಒ.ಗಳಿಗೆ ತಿಳಿಸುವುದು. ನಿಮ್ಮನ್ನು ಅಂಬ್ಯುಲೆನ್ಸ್ ಮುಖಾಂತರ ಮತಕೇಂದ್ರಕ್ಕೆ ಕರೆತರಲಾಗುವುದು.












Click it and Unblock the Notifications