ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ

ಬೆಂಗಳೂರು, ನವೆಂಬರ್ 23 : ವಿಧಾನಪರಿಷತ್ ಚುನಾವಣೆಗೆ ಬಿಜೆಪಿ 16 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಹನುಮಂತ ನಿರಾಣಿ ಅವರಿಗೆ ಟಿಕೆಟ್ ನೀಡಲಾಗಿದೆ.

ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ 2016ರ ಜನರಿಗೆ 6ರೊಳಗೆ ಚುನಾವಣೆ ನಡೆಯಬೇಕಾಗಿದೆ. ಭಾನುವಾರ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅಂತಿಮ ಒಪ್ಪಿಗೆಗಾಗಿ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿದೆ. [ಬೀದರ್, ದೇವದುರ್ಗ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕು]

bjp

16 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ 5 ಕ್ಷೇತ್ರದಲ್ಲಿ ಹಾಲಿ ಸದಸ್ಯರಿಗೆ ಪುನಃ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೆ ಧಾರವಾಡ ಸ್ಥಳೀಯ ಸಂಸ್ಥೆ ಕ್ಷೇತ್ರದಲ್ಲಿ ಮತ್ತು ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಹನುಮಂತ ನಿರಾಣಿ ಅವರಿಗೆ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. [ಜಗದೀಶ್ ಶೆಟ್ಟರ್ ತಮ್ಮನಿಗೆ ಟಿಕೆಟ್?]

ಪರಿಷತ್ ಬಲಾಬಲ : ಅಂದಹಾಗೆ ವಿಧಾನಪರಿಷತ್ ಸದಸ್ಯರ ಸಂಖ್ಯೆ ಒಟ್ಟು 75. ಕಾಂಗ್ರೆಸ್ 28, ಬಿಜೆಪಿ 30, ಜೆಡಿಎಸ್ 12, ಪಕ್ಷೇತರ 4, ಸಭಾಧ್ಯಕ್ಷರು 1. ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ 25 ಸದಸ್ಯರ ಅವಧಿ 2016ರ ಜನವರಿ 5ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಚುನಾವಣೆ ನಡೆಯಬೇಕಿದೆ.

ಅಭ್ಯರ್ಥಿಗಳ ಪಟ್ಟಿ

* ವಾಯುವ್ಯ ಶಿಕ್ಷಕರ ಕ್ಷೇತ್ರ - ಅರುಣ್ ಶಹಾಪುರ
* ಪಶ್ಚಿಮ ಶಿಕ್ಷಕರ ಕ್ಷೇತ್ರ - ಪ್ರೊ.ಎಂ.ನಾಗರಾಜ
* ದಕ್ಷಿಣ ಪದವೀಧರ ಕ್ಷೇತ್ರ - ಮೈ.ವಿ.ರವಿಶಂಕರ
* ವಾಯುವ್ಯ ಪದವೀಧರ ಕ್ಷೇತ್ರ - ಹನುಮಂತ ನಿರಾಣಿ

ಸ್ಥಳೀಯ ಸಂಸ್ಥೆಗಳು
* ಮೈಸೂರು - ಎಸ್. ರಘು
* ಕೊಡಗು - ಎಂ.ಪಿ.ಕುಶಾಲಪ್ಪ
* ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
* ಚಿಕ್ಕಮಗಳೂರು - ಎಂ.ಕೆ.ಪ್ರಾಣೇಶ್
* ಶಿವಮೊಗ್ಗ - ಆರ್‌.ಕೆ.ಸಿದ್ಧರಾಮಣ್ಣ
* ಉತ್ತರ ಕನ್ನಡ - ಗಣಪತಿ ಡಿ.ಉಳ್ವೇಕರ್
* ಧಾರವಾಡ - ಪ್ರದೀಪ್ ಶೆಟ್ಟರ್
* ಬೆಳಗಾವಿ - ಮಹಾಂತೇಶ ಕವಟಗಿಮಠ
* ವಿಜಯಪುರ - ಜಿ.ಎಸ್.ನ್ಯಾಮಗೌಡ
* ಕಲಬುರಗಿ - ಬಿ.ಜಿ.ಪಾಟೀಲ್
* ರಾಯಚೂರು - ಸಿ.ವಿ.ಚಂದ್ರಶೇಖರ
* ಚಿತ್ರದುರ್ಗ - ಕೆ.ಎಸ್.ನವೀನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+