ಕಾನೂನು ವಿದ್ಯಾರ್ಥಿಗಳಲ್ಲಿ ಎಡಪಂಕ್ತೀಯ ವಿಚಾರಧಾರೆ ತುಂಬಿಸುವುದು ತಪ್ಪಿಸಬೇಕು: ಬಸನಗೌಡ ಪಾಟೀಲ ಯತ್ನಾಳ
ಕಾನೂನು ವಿದ್ಯಾರ್ಥಿಗಳಲ್ಲಿ ಎಡಪಂಕ್ತೀಯ ವಿಚಾರಧಾರೆಯನ್ನು ತುಂಬಿಸಲು ಪ್ರಯತ್ನಿಸುತ್ತಿರುವ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ ದಿನಾಂಕ 14ಸೆಪ್ಟೆಂಬರ್ ರಂದು "ರಾಜಕೀಯ ಖೈದಿಗಳ ದಿನ' [Political Prisoners Day] ದ ಅಂಗವಾಗಿ ಜೈಲಿನಲ್ಲಿರುವ ಉಗ್ರ ಉಮರ್ ಖಲೀದ್ ನನ್ನು ವೈಭವೀಕರಿಸುವ Prisoner No 626710 ಡಾಕ್ಯುಮೆಂಟರಿ ಅನ್ನು ವಿಶ್ವವಿದ್ಯಾಲಯದಲ್ಲಿ ಭಿತ್ತರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಎಡಪಂಕ್ತೀಯ ವಿಚಾರಧಾರೆಯ ಅಧಿಕಾರಿಗಳು, ತಜ್ಞರೇ ತುಂಬಿರುವ NLSIU ನಲ್ಲಿ ರಾಷ್ಟ್ರದ್ರೋಹವೆಸಗಿದ ಆಗಂತುಕನನ್ನು ವೈಭವೀಕರಿಸುತ್ತಿರುವುದು ಹೇಯ ಹಾಗೂ ಖಂಡನೀಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.

ಭಾರತ್ ಕೆ ಬರ್ಬಾದಿ ತಕ್ ಜಂಗ್ ಚಲೆಗಿ', "ಭಾರತ್ ತೆರೆ ಟುಕ್ದೆ ಹೊಂಗೆ', 'ಆಫ್ಝಲ್ ಹಮ್ ಶರ್ಮಿನ್ದಾ ಹೇ, ತೆರೆ ಕಾಟಿಲ್ ಜಿಂದ ಹೇಯ್, ಎಂದು ಭಾರತ ವಿರೋಧಿ ಘೋಷಣೆ ಕೂಗಿದವರನ್ನು "ಹೋರಾಟಗಾರ', "ಹುತಾತ್ಮ' ರಂತೆ ಬಿಂಬಿಸುತ್ತಿರುವ NLSIU ಕ್ರಮ ನಾಚಿಕೆಗೇಡಿನ ಪರಮಾವಧಿ. ಕಿಂಚಿತ್ತೂ ಆತ್ಮಸಾಕ್ಷಿ, ರಾಷ್ಟ್ರೀಯತೆ ಇಲ್ಲದೆ ಮಾಡುತ್ತಿರುವ ಅದರಲ್ಲೂ ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯ ದೇಶದ್ರೋಹಿ, ಉಗ್ರನ ಡಾಕ್ಯುಮೆಂಟರಿ ತೋರಿಸುತ್ತಿರುವುದು ಬೌದ್ಧಿಕ ದಿವಾಳಿತನದ ಪರಮಾವಧಿ.
ದೇಶದಲ್ಲಿ ಅರಾಜಕತೆ, ದೊಂಬಿ ಹರಡಿಸಿದಕ್ಕಾಗಿ UAPA ನಂತ ಅತ್ಯಂತ ಗಂಭೀರ ಕಾಯ್ದೆಯಲ್ಲಿ ಬಂಧಿತನಾಗಿರುವ ಉಮರ್ ಖಲೀದ್ ಒಬ್ಬ ದೇಶ ದ್ರೋಹಿ ಎಂಬುದರಲ್ಲಿ ಸಂಶಯವೇ ಇಲ್ಲ. ಇಲ್ಲಿ ಓದುತ್ತಿರುವ ಕಾನೂನು ವಿದ್ಯಾರ್ಥಿಗಳನ್ನು ಎಡಪಂಕ್ತೀಯ ವಿಚಾರಧಾರೆಗೆ ಸೆಳೆಯುವುದಕ್ಕೆ ಹಾಗೂ ದೇಶವಿರೋಧಿ ಭಾವನೆ ಮೂಡಿಸುವ ಪ್ರಯತ್ನವಿದು.
ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯ ತಲೆ ತಗ್ಗಿಸುವಂತ ಕೆಲಸ ಮಾಡುತ್ತಿರುವ ಈ ಕ್ರಮ ಖಂಡನೀಯ. ಆಯೋಜಕರು 'ರಾಜಕೀಯ ಖೈದಿಗಳ ದಿನ' ವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದ್ದರೆ ಕರಿನೀರಿನಂತ ಅತ್ಯಂತ ಕಠಿಣ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ ಚಿತ್ರವನ್ನು ಪ್ರದರ್ಶಿಸಬೇಕಾಗಿತ್ತೆ ಹೊರತು ಉಮರ್ ಖಲೀದ್‌ದಲ್ಲ.
ಭಾರತದ ಸ್ವಾತಂತ್ರ್ಯಕ್ಕಾಗಿ 63 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಭಾರತಾಂಬೆಗೆ ತನ್ನ ಪ್ರಾಣವನ್ನು ನೀಡಿದ ಜತೀಂದ್ರನಾಥ್ ದಾಸರ ಬಗ್ಗೆ ಡಾಕ್ಯುಮೆಂಟರಿ ಮಾಡಬಹುದಾಗಿತ್ತು. ಅಷ್ಟಕ್ಕೂ, "ರಾಜಕೀಯ ಖೈದಿಗಳ ದಿನ' ವನ್ನು ಜತೀಂದ್ರನಾಥ್ ದಾಸರ ನೆನಪಿನಾರ್ಥವಾಗಿ ಮಾಡುತ್ತಾರೆ ಎಂದು ಆಯೋಜಕರು ಮರೆತಿರಬೇಕು ಅಥವಾ ಅವರು ಓದಿಕೊಂಡ ಇತಿಹಾಸ ಪಠ್ಯಗಳಲ್ಲಿ ಈ ಮಾಹಿತಿಯಿಲ್ಲ ಎಂದು ಅನ್ನಿಸುತ್ತದೆ. ಕಾನೂನು ಪಾಠ ಮಾಡುವ ವಿಶ್ವವಿದ್ಯಾಲಯವೇ ವಿಶ್ಲೇಷಣಾತ್ಮಕ ಜ್ಞಾನವನ್ನು ಕಳೆದುಕೊಂಡು, ಎಡಪಂಕ್ತೀಯ ವಿಚಾರಧಾರೆಯನ್ನು ವೈಭವೀಕರಿಸುವುದು ತರವಲ್ಲ.
NLSIU ಡಾಕ್ಯುಮೆಂಟರಿ ಪ್ರದರ್ಶನವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹನೀಯರ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ಬಗ್ಗೆ ಡಾಕ್ಯುಮೆಂಟರಿ ಮಾಡಲಿ. ಕಾನೂನು ವಿದ್ಯಾರ್ಥಿಗಳಲ್ಲಿ ಎಡಪಂಕ್ತೀಯ ವಿಚಾರಧಾರೆಯನ್ನು ತುಂಬಿಸಲು ಮಾಡುತ್ತಿರುವ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಕೇಂದ್ರ ಕಾನೂನು ಸಚಿವರು, ಪ್ರಾಜ್ಞರು ಹಾಗೂ ರಾಷ್ಟ್ರೀಯವಾದಿಗಳಾದ ಅರ್ಜುನ್ ರಾಮ್ ಮೇಘವಾಲ್ ಜಿ ಅವರನ್ನು ಆಗ್ರಹಿಸುತ್ತೇನೆ ಎಂದೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.


Click it and Unblock the Notifications
