ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಳಿಕ ಸವದಿ ಬಿಜೆಪಿ ಹೋಗ್ತಾರಾ?: ರಾಜಣ್ಣ ಹೇಳಿದಿಷ್ಟು
ಹಾಸನ, ಜನವರಿ 26: ಲೋಕಸಭಾ ಚುನಾವಣಾ ಹೊತ್ತಲಿ ಕಾಂಗ್ರೆಸ್ ತೊರೆದು ಮತ್ತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಶಾಸಕ ಲಕ್ಷ್ಮಣ್ ಸವದಿ ಕೂಡಾ ಬಿಜೆಪಿ ಸೇರ್ತಾರೆ ಅನ್ನೋ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ.
ಈ ಕುರಿತು ಹಾಸನದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ನಾನು ಲಕ್ಷ್ಮಣ್ ಸವಧಿ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಟಿವಿಯಲ್ಲಿ ಸುದ್ದಿ ಬರ್ತಿದ್ದಾಗೆ ಅವರೊಂದಿಗೆ ಮಾತನಾಡಿದ್ದೇನೆ, ಲಕ್ಷ್ಮಣ್ ಸವದಿ ಈಸ್ ಮೈ ಗುಡ್ ಫ್ರೆಂಡ್. ನನಗೂ ಅವರಿಗೂ ವೈಯಕ್ತಿಕವಾಗಿ 30 ವರ್ಷದ ವಿಶ್ವಾಸವಿದೆ.

ನಾನು ಯಾವುದೇ ಕಾರಣಕ್ಕೂ ಹೋಗೋದಿಲ್ಲ ರಾಜಣ್ಣ ಇದೆಲ್ಲಾ ಸುಳ್ಳು. ಮಾಧ್ಯಮದವರು ಸೃಷ್ಟಿ ಮಾಡ್ತಿದ್ದಾರೆ ಅಂತಾ ಹೇಳಿದ್ದಾರೆ. ಅದಕ್ಕಿಂತ ಇನ್ನೇನು ಮಾಹಿತಿ ಬೇಕು, ನಾನೇ ಖುದ್ದಾಗಿ ಮಾತಾಡಿದ್ದೇನೆ. ಇವತ್ತು ಸಾಯಂಕಾಲ ಊರಿಗೆ ಹೋಗ್ತಾ ಇದ್ದೇನೆ ಬೆಳಗಾಂಗೆ. ನಾನು ಸೋಮವಾರ ಬರ್ತೇನೆ, ಸಿಕ್ಕೋಣ ಭೇಟಿ ಮಾಡೋಣ, ನಾನು ಯಾವುದೇ ಕಾರಣಕ್ಕೂ ಹೋಗೋದಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಲೋಕಸಭಾ ಚುನಾವಣೆಯ ಮುನ್ನ ಪಕ್ಷಾಂತರ ವಿಚಾರವಾಗಿ ಮಾತನಾಡಿ, ಜಗದೀಶ್ ಶೆಟ್ಟರ್ ಅವಕಾಶಕ್ಕಾಗಿ ಹೋಗಿದ್ದಾರೆ ಅಂತಾ ನಾನು ಅನ್ಕೊಂಡಿಲ್ಲ. ಅವರು ಅಮಿತ್ ಶಾ ಇವರೆಲ್ಲಾ ಮೊದಲಿಂದಲೂ ಆರ್ ಎಸ್ ಎಸ್, ನಾಗ್ಪರ್ ಸಂಸ್ಕೃತಿಯಲ್ಲಿ ಬೆಳೆದವರು. ವೈಯಕ್ತಿಕ ಆತ್ಮೀಯತೆ ಇರುತ್ತೆ, ಸದಾನಂದಗೌಡ್ರು ಚೀಫ್ ಮಿನಿಸ್ಟರ್ ತಪ್ಪಿಸಿ, ಜಗದೀಶ್ ಶೆಟ್ಟರ್ ಅವರನ್ನ ಮುಖ್ಯಮಂತ್ರಿ ಮಾಡಿದವರು ಯಡಿಯೂರಪ್ಪನವರು, ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಅಷ್ಟು ಸಕ್ರಿಯ ಇರಲಿಲ್ಲ. ಈಗ ಅವರ ಮಗ ಹೆಚ್ಚು ಸಕ್ರಿಯರಾಗಿದ್ದಾರೆ, ಸಕ್ರಿಯತೆಯ ಹಿನ್ನೆಲೆಯಲ್ಲಿ ಮನವೊಲಿಸಿ ಅವರ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದಾರೆ ಅಂತಾ ಹೇಳಬಹುದು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ, ಜಗದೀಶ್ ಶೆಟ್ಟರ್ ಹೇಳಿಕೆ ನೀವೇ ನೋಡಿದ್ದೀರಿ. ನನಗೆ ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ಅವಮಾನ ಆಗಲಿ, ಅಸಮಧಾನ ಆಗಲಿ ಇಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಅನ್ನೋ ಮಾತನ್ನ ವ್ಯಕ್ತಪಡಿಸಿದ್ದಾರೆ. ಜಗದೀಶ್ ಶೆಟ್ಟರ್ ಸಾಮನ್ಯ ಮೊದಲಿನಿಂದಲೂ ಆರ್ ಎಸ್ ಎಸ್ ಸಿದ್ದಾಂತದಿಂದ ಬಂದವರು. ವಿಧಾನಸಭೆ ಟಿಕೆಟ್ ಕೊಡ್ಲಿಲ್ಲ ಅಂತಾ ಬೇಸರದಿಂದ ಅವರು ತೀರ್ಮಾನ ತೆಗೆದುಕೊಂಡಿದ್ದರು. ಈಗ ನಾನು ಬೇರೆ ಪಾರ್ಟಿಗೆ ಹೋಗಿದ್ದೆ, ಜನತಾದಳದಲ್ಲಿ 2004 ನಲ್ಲಿ ನಾನು ಇದ್ದೆ. ಅಲ್ಲಿ ಒಗ್ಗಲಿಲ್ಲ ನನಗೆ ಹಾಗಾಗಿ ವಾಪಸ್ಸು ಕಾಂಗ್ರೆಸ್ ಗೆ ಬಂದೆ, ಹಾಗೆ ಬಂದ್ರು ನಾಲ್ಕು ತಿಂಗಳು ಇದ್ರು ಒಗ್ಗಲಿಲ್ಲ ಅಂತಾ ವಾಪಸ್ಸು ಹೋದರು.
ನನಗೆ ಕಾಂಗ್ರೆಸ್ ನಲ್ಲಿ ಗೌರವ ಕೊಟ್ಟಿದ್ದಾರೆ. ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ, ಆದ್ರೆ ನಾನು ಮೋದಿಯವರನ್ನ ಮತ್ತೆ ಪ್ರಧಾನಮಂತ್ರಿ ಮಾಡಬೇಕು ಅಂತೇಳಿ ಬಂದಿದ್ದೇನೆ ಅಂತಾ ಹೇಳಿದ್ದಾರೆ. ಇದ್ರಿಂದ ಅವರ ಮೇಲೆ ವೈಯಕ್ತಿಕ ಆರೋಪವನ್ನ ಮಾಡೋದು ಸಾಧುವಲ್ಲ. ಅವರು ಮೊದಲಿನಿಂದಲೂ ಸರಳ ನಡವಳಿಕೆಗೆ ಹೆಸರಾದವರು, ಅವರು ತೀರ್ಮಾನ ತೆಗೆದುಕೊಂಡಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸ್ವತಂತ್ರರೂ ಇದಕ್ಕೆ ಯಾರದ್ದೂ ಆಕ್ಷೇಪಣೆ ಇಲ್ಲ, ನಮ್ಮದೂ ಆಕ್ಷೇಪಣೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜಗದೀಶ್ ಶೆಟ್ಟರ್ ಗೆ ಮಂತ್ರಿ ಮಾಡದೇ ಅನ್ಯಾಯ ಮಾಡಿತು ಎಂಬ ಹೆಚ್.ಡಿ. ದೇವೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ಹಿಂದೆ ಬಸವರಾಜ ಬೊಮ್ಮಾಯಿ ಇದ್ದಾಗ ಯಾಕೆ ಮಂತ್ರಿ ಮಾಡಲಿಲ್ಲ ಅವರಿಗೆ. ನಮ್ಮನ್ನ ಹೇಳೋದಾದ್ರೆ ಅವರ್ಯಾಕೆ ಮಾಡಲಿಲ್ಲ. ಗೌಡ್ರು ಯಾಕೆ ಹೇಳಿ ಮಾಡಿಸಬಾರದಿತ್ತು..? ಅವರ ಬೇಳೆ ಬೇಯಿಸಿಕೊಳ್ಳೋದಕ್ಕೆ ಹೇಳೋದನ್ನ ನಾನು ಒಪ್ಪುವುದಿಲ್ಲ. ಬರೀ ಕಾಂಗ್ರೆಸ್ ನವರು ಮಂತ್ರಿ ಮಾಡಲಿಲ್ಲ ಅನ್ನೋ ಆರೋಪನೇ ಆದರೆ ಅವರು ಯಾಕೆ ಮಾಡಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಮುಂದೆ ಅವರಿಗೆ ಭವಿಷ್ಯನೂ ಇತ್ತು, ರಾಜ್ಯದಲ್ಲಿ ಹುಬ್ಬಳಿ ಧಾರವಾಡದಿಂದ ಜನಸಂಘದಿಂದ ಪ್ರಪ್ರಥಮ ಮೇಯರ್ ಆಗಿದ್ದು ಅವರ ತಂದೆಯವರು. ಅವರ ಮೂಲ ಅಲ್ಲಿಂದನೂ ಇದೆ. ಮೊದಲಿಂದಲೂ ಆರ್ ಎಸ್ ಎಸ್ ಸಿದ್ದಾಂತದಿಂದ ಬಂದಿರೋರು. ಏನೋ ಪ್ರೇಮ ಇದೆ ಹೋಗಿದ್ದಾರೆ, ನಮ್ಮದೇನು ಆಕ್ಷೇಪಣೆ ಇಲ್ಲ, ಆರೋಪನೂ ಇಲ್ಲ ಎಂದು ಹೇಳಿದರು.












Click it and Unblock the Notifications