Watch Video: ₹1.50 ಕೋಟಿ ಪರಿಹಾರದಲ್ಲಿ ರೈತನಿಗೆ ಸಿಕ್ಕಿದ್ದು ₹30 ಲಕ್ಷ! 'ಹೊಸ ಲಂಚಾವತಾರ' ಬಗ್ಗೆ ಜಡ್ಜ್ ಪ್ರಶ್ನೆ
ಬೆಂಗಳೂರು: ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ರಾಜ್ಯ ಸರ್ಕಾರ ನೀಡುವ ಕೋಟ್ಯಾಂತರ ಪರಿಹಾರ ಹಣವನ್ನು ರೈತರು, ಭೂಮಾಲೀಕರಿಗೆ ನೀಡುತ್ತದೆ. ಆದರೆ ಈ ಹಣದಲ್ಲಿ ಹೊಸ ರೀತಿಯ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸ್ವತಃ ಹೈಕೋರ್ಟ್ ನಲ್ಲಿ ನಡೆದ ಪ್ರಕರಣವೊಂದರ ವಿಚಾರಣೆ ವೇಳೆ ಕೋಟಿ ಕೋಟಿ ರೂಪಾಯಿ ಹಣ ಅಧಿಕಾರಿಗಳ ಜೇಬಿಗೆ ಸೇರಿದ್ದನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ನ್ಯಾಯಾಲಯದ ವಿಚಾರಣೆಯ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾರ್ವಜನಿಕರು ಸರ್ಕಾರ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ನೋಡಿ ದಂಗಾಗಿದ್ದಾರೆ.
ವಿಡಿಯೋದಲ್ಲಿದೇ ಬ್ರಹ್ಮಾಂಡ ಭ್ರಷ್ಟಾಚಾರದ ಅಂಕಿ-ಅಂಶ!
' ಒಂದು ಎಕ್ರೆಗೆ 1.50 ಕೋಟಿ ರೂ.ನಂತೆ 12 ಎಕರೆ ಭೂಮಿಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ ಪ್ರಕರಣದ ವಿಚಾರಣೆ ನಡೆಯುತ್ತಿದೆ' ಎಂಬುದು ವಿಡಿಯೋದಿಂದ ತಿಳಿದು ಬರುತ್ತದೆ. '1 ಎಕ್ರೆಗೆ 1.50 ಕೋಟಿ ರೂ.ನಂತೆ 12 ಎಕರೆ ಭೂಮಿ ನೀಡಿದ ಮಾಲೀಕರಿಗೆ ಬರೋಬ್ಬರಿ 15 ಕೋಟಿ ರೂಪಾಯಿ ಬರಬೇಕು. ಆದರೆ ಎಲ್ಲವು ಕಡಿತವಾಗಿ ಒಂದು ಎಕ್ರೆಗೆ ಭೂಮಿ ಮಾಲೀಕನಿಗೆ ಸಿಕ್ಕಿದ್ದು ಕೇವಲ 30 ಲಕ್ಷ ರೂಪಾಯಿ ಎಂದು ವಕೀಲರು ನ್ಯಾಯಮೂರ್ತಿಗಳಿಗೆ ತಿಳಿಸುತ್ತಾರೆ.'

'ಇದಕ್ಕೆ ನ್ಯಾಯಾಧೀಶರು ಉಳಿದ 1.20 ಕೋಟಿ ರೂಪಾಯಿ ಹಣ ಎಲ್ಲಿ ಹೋಯ್ತು..ಯಾರು ತಗೊಂಡ್ರು..? ಎಂದು ವಕೀಲರನ್ನು ಪ್ರಶ್ನಿಸುತ್ತಾರೆ. ವಕೀಲರು ಉತ್ತರಿಸುವ ಮೊಲದೇ ತಮ್ಮ ಕೈಯಲ್ಲಿದ್ದ ಪ್ರಕರಣ ವರದಿಯನ್ನು ನೋಡಿದ ನ್ಯಾಯಾಧೀಶರೇ ಬಾಕಿ ಹಣ ಎಲ್ಲಿ ಹೋಯಿತು ಎಂಬುದನ್ನು ವಿರಿಸುತ್ತಾರೆ''
'ಹೈಕೋರ್ಟ್ ವಕೀಲರ ಫೀಸ್ 10 ಲಕ್ಷ ರೂಪಾಯಿ, ಇನ್ನೂ ಜಮೀನು ದಾಖಲಾತಿ ಸರಿ ಮಾಡಿಕೊಡಲು ತಹಶೀಲ್ದಾರಗೆ 10 ಲಕ್ಷ ರೂ, ಗ್ರಾಮ ಲೆಕ್ಕಾಧಿಕಾರಿ (ವಿಎ) 2 ಲಕ್ಷ ರೂಪಾಯಿ ಹೋಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಮಂಜೂರಾದ ಎಲ್ಲ 15 ಕೋಟಿ ರೂ.ಹಣ ಬಿಡುಗಡೆ ಮಾಡೋಕೆ 60 ಲಕ್ಷ ರೂಪಾಯಿ ಪಡೆದಿದೆ. ಅನುಭವ ಸ್ಕೆಚ್ ಸರ್ವೇಯರ್ 8 ಲಕ್ಷ, ಜಿಎಂಸಿ ಅವರು ಐದೇ ಲಕ್ಷ ರೂಪಾಯಿ, ಸರ್ಕಾರದ ಅನುಮೋದನೆ 8 ಲಕ್ಷ. ರೂಪಾಯಿಯನ್ನು ಪರಿಹಾರದಲ್ಲಿ ಪಡೆದಿದೆ. ಇದೆಲ್ಲ ಪಿಲ್ಟರ್ ಆಗಿ 1.50 ಕೋಟಿಯಲ್ಲಿ ಭೂಮಿ ಮಾಲೀಕನಿಗೆ ಸಿಕ್ಕಿದ್ದು ಕೇಲವ 30 ಲಕ್ಷ ರೂಪಾಯಿ'' ಎಂದು ಹೇಳುತ್ತಾರೆ.
'ಒಂದು ಭೂಮಿ ಪರಿಹಾರ ಹಣ ವಿತರಣೆ ಆಗೋಕೆ ಇಷ್ಟೆಲ್ಲ ಹಣ ನೀಡಬೇಕಾ? ಎಂದು ನ್ಯಾಯಾಧೀಶರೇ ಒಂದು ಕ್ಷಣ ಮೌನವಹಿಸಿ ವಕೀಲರನ್ನು ಪ್ರಶ್ನಿಸಿದ್ದಾರೆ.
ಅದಕ್ಕೆ ಅರ್ಜಿದಾರರ ಪರ ಎನ್ನಲಾದ ವಕೀಲರು 'ಮಂಜೂರಾದ ಎಲ್ಲ ಹಣ ಮಾಲೀಕರ ಖಾತೆಗೆ ನೀಡಲಾಗಿದೆ. ಮರಳಿ ಅವರಿಂದ ಚೆಕ್ ಮೂಲಕ ಅಧಿಕಾರಿಗಳೇ ಸ್ವಯಂ ಹಣ ಪಡೆದಿದ್ದಾರೆ' ಎಂದು ತಿಳಿಸಿದ್ದಾರೆ. ಸ್ಕೇಚ್ ಸರ್ವೇಯರ್, ಭೂಮಿ ದಾಖಲಾತಿ ಸರಿಮಾಡಿ ಕೊಡಲು ತಹಶೀಲ್ದಾರ್, ಹಣ ಬಿಡುಗಡೆ ಕೆಐಎಡಿಬಿ ಹೀಗೆ ಎಲ್ಲರು ಹಣ ಪಡೆದಿದ್ದಾಗಿ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡುತ್ತಾರೆ'
'ಎಲ್ಲ ಮುಗಿಸಿ ಬಿಡ್ತಾರೆ, ಇದು ಹೊಸ ರೀತಿ ಭ್ರಷ್ಟಾಚಾರ'
ಇದನ್ನು ಕೇಳಿದ ನ್ಯಾಯಮೂರ್ತಿಗಳು 'ಹೀಗೆ ಆದ್ರೆ ಎಲ್ಲ ಮುಗಿಸಿಬಿಡ್ತಾರೆ! ಎಂದಿದ್ದಾರೆ. ಹಣ ಎಲ್ಲಿ ಹೋಯ್ತು ಎಂಬ ಲೆಕ್ಕವನ್ನು ಇದರಲ್ಲಿ ಬರೆದಿಟ್ಟಿದ್ದಾರೆ. ಇದೊಂದು ಹೊಸ ರೀತಿಯ ಭ್ರಷ್ಟಾಚಾರ ನೋಡಿ' ಎಂದು ಜಡ್ಜ್ ವಿಚಾರಣೆ ವೇಳೆ ಮಾತನಾಡಿದ ವಿಡಿಯೋದಲ್ಲಿ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದವರು ಸರ್ಕಾರದ ಈ ಭ್ರಷ್ಟಾಚಾರ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ವಿಡಿಯೋದಲ್ಲಿ ತಿಳಿಸಿದ ಅಂಶಗಳು, ಆರೋಪಗಳು ಕೋರ್ಟ್ ವಿಚಾರಣೆಯಲ್ಲಿ ಕೇಳಿ ಬಂದವುಗಳಾಗಿವೆ. ಇಲ್ಲಿ ಕೇಳಲಾದ ಪ್ರಶ್ನೆಗಳಿಗೆ ವಕೀಲರು ಉತ್ತರಿಸಿದ್ದಾಗಿವೆ. ಇಲ್ಲಿನ ಆರೋಪಗಳು ಸಾಬೀತಾಗಬೇಕಿದೆ. ಅದನ್ನು ನ್ಯಾಯಾಲಯ ನಿರ್ಧರಿಸುತ್ತದೆ, ಈ ಸುದ್ದಿ ವಿಡಿಯೋ ವೈರಲ್ ಆಗಿದ್ದಕ್ಕೆ ಮತ್ತು ವಿಡಿಯೋದಲ್ಲಿ ನಡೆದ ಸಂಭಾಷಣೆಯನ್ನಷ್ಟೇ ಆಧರಿಸಿದೆ.
ಸರ್ಕಾರ ಭೂಸ್ವಾದೀನ ಮಾಡಿಕೊಂಡು ಕೊಡುವ ಪರಿಹಾರ ಈ ರೀತಿ ಇರುತ್ತದೆ. pic.twitter.com/DESMLQuCfl
— ಅಶೋಕ ಕೆ (@kumarak2101) August 20, 2026
ಇದಕ್ಕೇನಾ ಭೂಮಿ ಕೊಡಲು ಜನ ಹಿಂದೇಟು ಹಾಕೋದು?
ಸರ್ಕಾರ ಕೈಗೊಳ್ಳುವ ಯೋಜನೆಗಳಿಗೆ ಭೂಮಿ ನೀಡಿದಾಗ ಅದಕ್ಕೆ ಕೋಟ್ಯಾಂತರ ರೂಪಾಯಿ ಹಣ ನೀಡಲಾಗುತ್ತದೆ. ಆದರೆ ಈ ಹಣ ನಿಜವಾಗಿಯೂ ರೈತರಿಗೇ ಸಿಗುತ್ತಾ? ಇಲ್ಲವೇ ಎಂಬುದರ ಅನುಮಾನ ವ್ಯಕ್ತವಾಗಿದೆ. ಇಂತಹ ಭ್ರಷ್ಟಾಚಾರ ಅವ್ಯಾಹವಾತಿ ನಡೆಯುತ್ತಿರುವ ಕಾರಣಕ್ಕಾಗಿಯೇ ಅದೆಷ್ಟೋ ರೈತರು/ಮಾಲೀಕರು ತಮ್ಮ ಭೂಮಿ, ಜಮೀನನ್ನು ಸರ್ಕಾರಕ್ಕೆ ನೀಡಲು ಹಿಂದೇಟು ಹಾಕುತ್ತಾರೆ ಎಂದನಿಸುತ್ತದೆ.
ಇತ್ತ ಸರ್ಕಾರದ ಮಹತ್ವ ಯೋಜನೆಯಾದ 'ಬಿಡದಿ ಟೌನ್ ಶಿಪ್' ಜಾರಿಗಾಗಿ ಸಾಕಷ್ಟು ವರೋಧ ಕೇಳಿ ಬಂದಿವೆ. ಕೃಷಿ ಭೂಮಿ ಪಡೆದು ಮಾಡಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರವೇನೋ ಹೇಳಿದೆ. ಇದರಲ್ಲಿ ಕೆಲವರು ಭೂಮಿ ನೀಡಲು ಒಪ್ಪಿದ್ದಾರೆ, ಇನ್ನೂ ಕೆಲವರು ಕೃಷಿ ಜಮೀನು ನೀಡಲು ನಿರಾಕರಿಸಿದ್ದಾರೆ. ಈ ಮಧ್ಯೆ ಭೂಮಿ ಪಡೆದ ಸರ್ಕಾರದಿಂದ ಬರುವ ಪರಿಹಾರ ಹಣದಲ್ಲಿ ಹೊಸ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಈ ವಿಡಿಯೋ ಮೂಲಕ ಬೆಳಕಿಗೆ ಬಂದಿದೆ.


Click it and Unblock the Notifications
