Gold: ಲಕ್ಕುಂಡಿ ನಿಧಿಯಲ್ಲಿ ಏರುಪೇರು, ದಿಢೀರ್ 4 ಗ್ರಾಂ ಚಿನ್ನ ವ್ಯತ್ಯಾಸ? ಕಾರಣ ತಿಳಿಯಿರಿ
ಲಕ್ಕುಂಡಿ ನಿಧಿ ವಿಚಾರ ಇಡೀ ಇಂಡಿಯಾ ಸದ್ದು ಮಾಡುತ್ತಿದೆ, ಕನ್ನಡ ನಾಡಿನಲ್ಲಿ ನಡೆದ ಈ ಘಟನೆ ಕೋಟಿ ಕೋಟಿ ಜನರ ಗಮನ ಸೆಳೆಯುತ್ತಿದೆ. ಇನ್ನು ಜನವರಿ 10 ಶನಿವಾರ ಲಕ್ಕುಂಡಿಯಲ್ಲಿ ಪ್ರಾಚೀನ ಆಭರಣಗಳು ಪತ್ತೆಯಾಗಿದ್ದವು. ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆ ಕಟ್ಟಿಸಲು ಗುಂಡಿ ತೋಡುವ ಸಮಯದಲ್ಲಿ ನಿಧಿ ಸಿಕ್ಕಿತ್ತು, ಈ ನಿಧಿಯಲ್ಲಿ ಪುರಾತನ ಕಾಲದ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.
ಆದರೆ ನಿಧಿ ಸಂಗ್ರಹ ಮಾಡಿದ ದಿನವಾದ ಜನವರಿ 10 ರಂದು 466 ಗ್ರಾಂ ಚಿನ್ನ ಇತ್ತು, ಈಗ ನೋಡಿದರೆ ನಿಧಿಯ ಚಿನ್ನದಲ್ಲಿ 4 ಗ್ರಾಂ ಚಿನ್ನ ವ್ಯತ್ಯಾಸ ಕಂಡುಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ಜನವರಿ 10ಕ್ಕೆ 466 ಗ್ರಾಂ ಇದ್ದ ಚಿನ್ನ ದಿಢೀರ್ 462 ಗ್ರಾಂಗೆ ಇಳಿಕೆ ಆಗಿದ್ದೇಕೆ? ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ ಈ ಬಗ್ಗೆ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದು, ಚಿನ್ನ 4 ಗ್ರಾಂ ಚಿನ್ನ ವ್ಯಾತ್ಯಾಸ ಆಗಲು ಕಾರಣ ಏನು? ಅನ್ನೋದನ್ನ ವಿವರಿಸಿದ್ದಾರೆ. ಚಿನ್ನದ ಪ್ರಮಾಣದಲ್ಲಿ ವ್ಯತ್ಯಾಸ ಆಗಿರುವ ಬಗ್ಗೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ, ಮುಂದೆ ಓದಿ.

ಚಿನ್ನ 4 ಗ್ರಾಂ ಕಡಿಮೆ ಆಗಿದ್ದು ಏಕೆ?
ಬಂಗಾರ ಅಂದ್ರೆ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ, ಆದರೆ ನಿಧಿ ತಮ್ಮ ಜಾಗದಲ್ಲಿ ಸಿಕ್ಕ ತಕ್ಷಣವೇ ಅದನ್ನು ಸರ್ಕಾರಕ್ಕೆ ಒಪ್ಪಿಸಿ ಗಂಗವ್ವ ಬಸವರಾಜ ರಿತ್ತಿ ಕುಟುಂಬ ಪ್ರಾಮಾಣಿಕತೆ ಮೆರೆದಿತ್ತು. ಹೀಗೆ, 466 ಗ್ರಾಂ ಚಿನ್ನಾಭರಣ ಈ ನಿಧಿಯಲ್ಲಿ ಸಿಕ್ಕಿದೆ ಎನ್ನಲಾಗಿತ್ತು. ಆ ನಂತರ ಅಧಿಕಾರಿಗಳು ಸೂಕ್ತವಾಗಿ ಪರಿಶೀಲನೆ ಮಾಡಿದಾಗ 4 ಗ್ರಾಂ ಚಿನ್ನ ವ್ಯತ್ಯಾಸ ಕಂಡುಬಂದಿದೆ. ಇದಕ್ಕೆ ಪ್ರಮುಖವಾದ ಕಾರಣ ಮಣ್ಣು ಎನ್ನಲಾಗಿದ್ದು, ನಿಧಿ ಸಿಕ್ಕ ಸಮಯದಲ್ಲಿ ಚಿನ್ನದ ಆಭರಣಗಳಿಗೆ ಮಣ್ಣು ಮೆತ್ತಿಕೊಂಡ ಕಾರಣಕ್ಕೆ ಈ ರೀತಿ 4 ಗ್ರಾಂ ಚಿನ್ನ ಹೆಚ್ಚಾಗಿ ಗುರುತಿಸಲಾಗಿತ್ತು. ಆದರೆ ಜನವರಿ 13 ಮಂಗಳವಾರ ಪರಿಶೀಲಿಸಿದಾಗ ಚಿನ್ನದ ಪ್ರಮಾಣ 462 ಗ್ರಾಂಗೆ ಇಳಿಕೆಯಾಗಿದೆ.
ವಿಜಯನಗರ ಸಮಕಾಲೀನ ಆಭರಣಗಳು ಇವು!
ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿರುವ ನಿಧಿಯಲ್ಲಿ ಪತ್ತೆಯಾದ ಚಿನ್ನಾಭರಣಗಳು 250 ರಿಂದ 300 ವರ್ಷ ಹಳೆಯವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಈ ಬಗ್ಗೆ ಮಾತನಾಡಿದ್ದು, ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿರುವ ನಿಧಿಯಲ್ಲಿ ಪತ್ತೆಯಾದ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಲಾಗಿದೆ. ಪರಿಶೀಲನೆ ವೇಳೆ ಇವು ಧರಿಸಿದ್ದ ಅಥವಾ ಬಳಕೆ ಮಾಡಿದ್ದ ಚಿನ್ನಾಭರಣ ಎಂಬುದು ಗೊತ್ತಾಗಿದೆ, ಅಲ್ಲದೆ ಈ ಚಿನ್ನಾಭರಣಗಳು ವಿಜಯನಗರ ಸಮಕಾಲೀನವಾಗಿದ್ದು, ಸುಮಾರು 250 ರಿಂದ 300 ವರ್ಷ ಹಳೆಯವು ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದಿದ್ದಾರೆ ಗದಗ ಡಿಸಿ.












Click it and Unblock the Notifications