ಕರುನಾಡಲ್ಲಿ ವರ್ಕ್ ಆಗದ ಮೋದಿ ಮೋಡಿ; ಮಾಸ್ ಲೀಡರ್‌ಗಳಿಲ್ಲದೇ ಸೋತ ಬಿಜೆಪಿ! ಕಾಂಗ್ರೆಸ್‌ಗೆ ಸಿದ್ದು, ಡಿಕೆಶಿ ಬಲ!
ಬೆಂಗಳೂರು, ಮೇ 13: 2023 ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಆಡಳಿತರೂಢ ಬಿಜೆಪಿಗೆ ಬಾರಿ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಸಂಪೂರ್ಣ ಬಹುಮತದತ್ತ ಸಾಗಿದೆ. ಬಹಿರಂಗಗೊಂಡ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ ಈ ಬಾರಿ ಗೆಲುವು ಕಂಡು ಬಂದಿದ್ದು, ಅದರಂತೆ ಕರುನಾಡನ ಜನತೆಗೆ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಮೊದಲಿನಿಂದಲೂ ಆಡಳಿತರೂಢ ಅಲೆ ಎದುರಾಗಿದ್ದು, ರಾಜ್ಯದಲ್ಲಿ ಮೋದಿ ಅಲೆ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಭಾರೀ ಮುಖಬಂಗವಾಗಿದೆ.

40% ಕಮಿಷನ್ ಸೇರಿದಂತೆ ಹಲವು ಆರೋಪಗಳನ್ನ ಹೊತ್ತಿದ್ದ ಬಿಜೆಪಿ ನಾಯಕರು ಈ ಬಾರೀಯೂ ಮೋದಿ ಅವರ ಮೂಲಕ ಪ್ರಚಾರ ನಡೆಸುವ ಮೂಲಕ ರಾಜ್ಯದ ಜನರನ್ನ್ ಸೆಳೆಯಲು ಮುಂದಾಗಿತ್ತು. ಆದರೆ ಮೋದಿ ಮ್ಯಾಜಿಕ್ ರಾಜ್ಯದಲ್ಲಿ ನಡೆದಿಲ್ಲ. ರಾಷ್ಟ್ರ ಮಟ್ಟದ ನಾಯಕರಾಗಿರುವ ಮೋದಿ ಅವರ ತಂತ್ರಗಾರಿಕೆ ಕರುನಾಡನಲ್ಲಿ ಯಾವುದೇ ವಕೌಂಟ್ ಆಗಿಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯನ್ನ ಕಟ್ಟಿಬೆಳಸಿದೆ ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಸಹ ಬಿಜೆಪಿ ಸೋಲಿಗೆ ಕಾರಣವಾಗಿದೆ.
ಇನ್ನೂ ಬಿಎಸ್‌ವೈ ಎಷ್ಟು ಪ್ರಚಾರ ಮಾಡಬೇಕು ಅಷ್ಟು ಪ್ರಚಾರ ನಡೆಸಿ, ಎಲ್ಲವನ್ನೂ ಮೋದಿ ಅವರ ಮೇಲೆಯೇ ಹಾಕಿದ್ದರು. ಇನ್ನೂ ಚುನಾವಣೋತ್ತರ ಸಮೀಕ್ಷೆಗಳು ಅದ್ಯಾವಾಗ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದ್ವೋ ಆಗ ಮತ್ತೆ ರಾಜ್ಯದ ಉದ್ದಗಲಕ್ಕೂ ಯಡಿಯೂರಪ್ಪ ಅವರನ್ನ ಮೂಲಕ ರಾಜ್ಯ ಪ್ರವಾಸವನ್ನ ನಡೆಸಿದರು. ಜೊತೆಗೆ ಮೋದಿ ಕೂಡ ಸಾಮಾನ್ಯ ಕಾರ್ಯಕರ್ತರಂತೆ ಕರ್ನಾಟಕದಲ್ಲಿ ಠಿಕ್ಕಾಣಿ ಹೂಡಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನಿರಂತರ ಪ್ರಚಾರ ನಡೆಸಿದ್ರು. ಆದರೆ ಅಷ್ಟರಲ್ಲಿ ಬಿಜೆಪಿ ಪರಿಸ್ಥಿತಿ ರಾಜ್ಯದಲ್ಲಿ ಕೈಮೀರಿ ಹೋಗಿತ್ತು.

ರಾಜ್ಯ ಬಿಜೆಪಿಯಲ್ಲಿ ಒಬ್ಬ ಬಿ ಎಸ್ ಯಡಿಯೂರಪ್ಪ ಅವರನ್ನ ಹೊರತು ಪಡಿಸಿದರೇ ಬೇರೆ ಯಾರು ಸಹ ಮಾಸ್ ಲೀಡರ್ ಗಳಿಲ್ಲ, ಅದು ಅಲ್ಲದೇ ಮೋದಿ ವರ್ಚಸ್ಸು ಸ್ಥಳೀಯ ಮಟ್ಟದಲ್ಲಿ ವರ್ಕೌಟ್ ಆಗಿಲ್ಲ, ಅದು ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ರಾಜ್ಯಾಂದ್ಯತ ಹೇಳಿಕೊಳ್ಳುವಂತ ನಾಯಕರಾಗಿ ಗುರುತಿಸಿಕೊಂಡಿಲ್ಲ. ಈ ವಿಚಾರವೂ ಸಹ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ.
ಇನ್ನೂ ರಾಜ್ಯ ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸು, ಈ ಹಿಂದಿನ ಸರ್ಕಾರದಲ್ಲಿ ಅವರು ಕೊಟ್ಟಂತ ಸಾಲು ಸಾಲು ಯೋಜನೆಗಳು ಕನ್ನಡಿಗರ ಕಣ್ಣು ತೆರೆಸಿವೆ. ಬಿಜೆಪಿ ಸರ್ಕಾರದ ಪ್ರತೀ ಒಂದು ತಪ್ಪುಗಳನ್ನು ಸಿದ್ದರಾಮಯ್ಯ ಒಂದೊಂದಾಗಿ ಬಿಚ್ಚಿಡುತ್ತಲೇ ಇದ್ದರು. ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್ ಆಗಿದ್ದು, ವೈಯಕ್ತಿಕ ವರ್ಚಸ್ಸನ್ನ ಹೊಂದಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸಹ ಕೆಲ ಭಾಗದಲ್ಲಿ ತಮ್ಮದೇ ಆದ ಹಿಡಿತವನ್ನ ಹೊಂದಿದ್ದು, ಬೊಮ್ಮಾಯಿ ಅವರಿಗಿಂತ ರಾಜ್ಯದಲ್ಲಿ ಈ ಇಬ್ಬರು ನಾಯಕರು ಹೆಚ್ಚು ಪ್ರಭಾವಿಯಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications